ವಲಸಾಡ (ಗುಜರಾತ) ನಲ್ಲಿ, ಕಟುಕರಿಂದ ಗೋರಕ್ಷಕನ ಮೇಲೆ ವಾಹನ ಓಡಿಸಿ ಹತ್ಯೆ !

೧೦ ಜನರ ಬಂಧನ

ಗೋರಕ್ಷಕರ ಮೇಲೆ ವಾಹನ ಓಡಿಸಿ ಕೊಲ್ಲುವ ಧೈರ್ಯವು ಕಟುಕರರಿಗೆ ಮತ್ತು ಗೋ ಕಳ್ಳಸಾಗಾಟಗಾರರಿಗೆ ಹೇಗೆ ಮತ್ತು ಎಲ್ಲಿಂದ ಬರುತ್ತದೆ ? ತಪ್ಪಿತಸ್ಥ ಕಟುಕರಿಗೆ ಗಲ್ಲುಶಿಕ್ಷೆ ವಿಧಿಸಲು ಗುಜರಾತನ ಸರಕಾರವು ಪ್ರಯತ್ನಿಸಬೇಕು, ಇದೇ ಹಿಂದೂಗಳ ಮತ್ತು ಗೋಭಕ್ತರ ಅಪೇಕ್ಷೆಯಾಗಿದೆ !

ವಲಸಾಡ (ಗುಜರಾತ) – ಧರ್ಮಪುರ-ವಲಸಾಡ ರಸ್ತೆಯಲ್ಲಿ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಟುಕರು ೨೯ ವರ್ಷದ ಹಾರ್ದಿಕ ಕಂಸಾರಾ ಇವರ ಮೇಲೆ ವಾಹನ ಓಡಿಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ ಕಂಸಾರಾ ಇವರು ಅಕ್ರಮವಾಗಿ ಗೋ ಸಾಗಾಟವನ್ನು ತಡೆಯಲು ಯತ್ನಿಸುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು. (ಗೋರಕ್ಷಕರಿಗೆ ಹೇಗೆ ಮಾಹಿತಿ ಸಿಗುತ್ತದೆ ಮತ್ತು ಅವರು ಅದನ್ನು ತಡೆಯಲು ಪ್ರಯತ್ನಿಸುತ್ತಾರೆಯೋ, ಅದೇ ಮಾಹಿತಿಯ ಎಲ್ಲಾ ರೀತಿಯ ವ್ಯವಸ್ಥೆ ಕೈಯಲ್ಲಿರುವಾಗ ಪೋಲಿಸರಿಗೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಏಕೆ ಸಿಗುತ್ತಿಲ್ಲ? ಗುಜರಾತನಲ್ಲಿ ಅಕ್ರಮ ಗೋಸಾಗಾಟಕ್ಕೆ ನಿರ್ಬಂಧವಿರುವಾಗ ಗೋವುಗಳ ಕಳ್ಳತನ ಆಗುತ್ತಿರುವುದಾದರೂ ಹೇಗೆ? ಅಥವಾ ಈ ಕಾನೂನು ಕೇವಲ ಕಾಗದಪತ್ರದ ಮೇಲಿನ ಅನುಮೋದನೆಗಾಗಿ ಮಾತ್ರ ಇರುತ್ತದೆ ? ಈ ನಿಷ್ಕ್ರೀಯತೆಗೆ ಕಾರಣಕರ್ತರಾಗಿರುವ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕು ! – ಸಂಪಾದಕರು) ಘಟನೆಯ ನಂತರ, ಟೆಂಪೊ ಚಾಲಕ ಪರಾರಿಯಾಗಿದ್ದಾನೆ. ಅವನನ್ನು ಇನ್ನೂ ಬಂಧಿಸಲಾಗಿಲ್ಲ. ಟೆಂಪೊದಿಂದ ೧೧ ಹಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳೆಲ್ಲರೂ ಅಂತರ್ ರಾಜ್ಯ ಗ್ಯಾಂಗ್‍ನ ಸದಸ್ಯರಾಗಿದ್ದಾರೆ. (ಹೀಗಿದ್ದರೆ, ಗುಜರಾತ ಪೊಲೀಸರಂತೆ ಮಹಾರಾಷ್ಟ್ರದ ಪೊಲೀಸರು ನಿದ್ರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ! – ಸಂಪಾದಕರು) ವಲಸಾಡನ ಗ್ರಾಮದಿಂದ ಅಕ್ರಮವಾಗಿ ಗೋವುಗಳನ್ನು ಖರಿದಿಸಿ ಅದನ್ನು ಮಹಾರಾಷ್ಟ್ರದ ನಾಶಿಕ, ನಗರ ಮತ್ತು ಭಿವಂಡಿಯಲ್ಲಿ ಮಾರಾಟ ಮಾಡಲಾಗುತ್ತದೆ. (ಈ ಗುಂಪಿನಂತೆ ಇನ್ನು ಎಷ್ಟು ಗುಂಪುಗಳು ಗುಜರಾತ ಮತ್ತು ದೇಶದ ಇತರ ರಾಜ್ಯಗಳಲ್ಲಿ ಇರಬಹುದು, ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ, ಕೇವಲ ಕಾನೂನನ್ನು ರೂಪಿಸಿದರೆ ಗೋಹತ್ಯೆ ನಿಲ್ಲುವುದಿಲ್ಲ, ಇದು ಅನೇಕ ಘಟನೆಗಳಿಂದ ಸ್ಪಷ್ಟವಾಗಿರುವುದರಿಂದ ಇನ್ನು ಗೋಹತ್ಯೆಯನ್ನು ಶಾಶ್ವತವಾಗಿ ತಡೆಗಟ್ಟಲು ಹಿಂದೂ ರಾಷ್ಟ್ರ ಸ್ಥಾಪಿಸುವುದು, ಇದೊಂದೇ ಪರ್ಯಾಯವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)