ಅಪರಾಧಿ ಮತಾಂಧರಿಗೆ ೧೦ ವರ್ಷ ಶಿಕ್ಷೆ !
ಕರ್ಣಾವತಿ (ಗುಜರಾತ) – ಗುಜರಾತ ಸರಕಾರವು ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿದ ಲವ್ ಜಿಹಾದ ವಿರೋಧಿ ಕಾನೂನಿಗೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಅನುಮೋದನೆ ನೀಡಿದ್ದಾರೆ. ಈ ಕಾನೂನು ಜೂನ್ ೧೫ ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ. ಬಲವಂತವಾಗಿ, ಆಮಿಷದ ಮೂಲಕ ಅಥವಾ ವಿವಾಹದ ಮೂಲಕ ಮತಾಂತರಗೊಳಿಸಲು ಒತ್ತಾಯಿಸಿದರೆ ಈ ಕಾನೂನಿಗನ್ವಯ ಅದು ಅಪರಾಧವಾಗುತ್ತದೆ. ಈ ಕಾಯ್ದೆಯಡಿ ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳಿಗೆ ೧೦ ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಧರ್ಮವನ್ನು ಮರೆಮಾಚಿ ಮದುವೆಯಾದರೆ, ನಿಮಗೆ ೫ ವರ್ಷ ಶಿಕ್ಷೆ ಮತ್ತು ೨ ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಅದೇರೀತಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾದರೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೩ ಲಕ್ಷ ರೂಪಾಯಿ ದಂಡ ವಿಧಿಸುವ ಏರ್ಪಾಡನ್ನು ಈ ಕಾನೂನಿನಲ್ಲಿ ಮಾಡಲಾಗಿದೆ.
(ಸೌಜನ್ಯ: Oneindia News)