ದೆಹಲಿಯ ‘ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ’ ಆಸ್ಪತ್ರೆಯಲ್ಲಿ ಆಯುರ್ವೇದ ಔಷಧಿಯಿಂದ ಗುಣಮುಖರಾದ ೬೦೦ ರೋಗಿಗಳು !

ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ (ಆಲ್ ಇಂಡಿಯಾ ಇನ್ಸ್‍ಸ್ಟಿಟ್ಯೂಟ್ ಆಫ್ ಆಯುರ್ವೇದ – ಎಐಐಎ) ಈ ಆಸ್ಪತ್ರೆಯಲ್ಲಿ ಈವರೆಗೆ ೬೦೦ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಒಟ್ಟು ರೋಗಿಗಳಲ್ಲಿ ಯಾರೂ ಸಾಯಲಿಲ್ಲ. ದಾಖಲಾದ ಶೇ. ೯೪ ರಷ್ಟು ರೋಗಿಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು.

ದೆಹಲಿ ಪುರಸಭೆಯು ಕೊರೊನಾದಿಂದ ಗುಣಮುಖರಾದವರಿಗೆ ಆಯುರ್ವೇದ ಮತ್ತು ಪಂಚಕರ್ಮದಿಂದ ಮುಂದಿನ ಚಿಕಿತ್ಸೆ ನೀಡಲಿದೆ

ಈಗ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತಿರುವುದರಿಂದ, ಇಂತಹ ಚಿಕಿತ್ಸೆಗಳು ಸರಕಾರಿ ಹಂತದಲ್ಲಿ ನಡೆಯುತ್ತಿದ್ದರೆ ಅದು ಶ್ಲಾಘನೀಯವಾಗಿದೆ! ಇಂತಹ ಪ್ರಯತ್ನಗಳು ದೇಶದೆಲ್ಲೆಡೆ ಆಗಬೇಕು !

ಕನ್ನಡ ಭಾಷೆಯ ಬಗ್ಗೆ ಅಪಶಬ್ದವನ್ನು ಬಳಸಿದ್ದಕ್ಕಾಗಿ ಗೂಗಲ್‍ನಿಂದ ಕ್ಷಮೆಯಾಚನೆ !

ವಿಶ್ವದ ಅತಿದೊಡ್ಡ ಆನ್‍ಲೈನ್ `ಸರ್ಚ್ ಎಂಜಿನ್’ ಗೂಗಲ್, ಕನ್ನಡ ಭಾಷೆಯನ್ನು ‘ಭಾರತದ ಅತ್ಯಂತ ಕೆಟ್ಟ ಭಾಷೆ’ ಎಂದು ಹೇಳಿತ್ತು. ಇದಕ್ಕೆ ಭಾರತೀಯರು ಮತ್ತು ಕರ್ನಾಟಕ ಸರಕಾರದಿಂದ ವಿರೋಧವಾದ ನಂತರ ಗೂಗಲ್ ಭಾರತೀಯರಲ್ಲಿ ಕ್ಷಮೆಯಾಚಿಸಿದೆ.

ಭಾರತದಲ್ಲಿ ‘ಪೆಟಾ’ ಸಂಸ್ಥೆಯನ್ನು ನಿಷೇಧಿಸಿ ! – ಅಮೂಲ ಸಂಸ್ಥೆಯಿಂದ ಪ್ರಧಾನಿ ಮೋದಿಗೆ ಪತ್ರದ ಮೂಲಕ ಬೇಡಿಕೆ

ಭಾರತದಲ್ಲಿ ‘ಪೆಟಾ’ (ಪೀಪಲ್ ಆಫ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್) ಈ ಪ್ರಾಣಿ ಸಂರಕ್ಷಕ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರಿ ಭಾರತದ ಹಾಲು ಉದ್ಯಮ ನಡೆಸುವ `ಅಮೂಲ್’ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೇಡಿಕೆ ಮಾಡಿದ್ದಾರೆ.

ಹಿರಿಯರು ತಮ್ಮ ಜೀವನವನ್ನು ಜೀವಿಸಿಯಾಗಿದೆ, ಆದ್ದರಿಂದ ಅವರ ಬದಲಾಗಿ ಯುವಕರಿಗೆ ಲಸಿಕೆ ನೀಡಿ !

ಹಿರಿಯ ನಾಗರಿಕರು ದೇಶವನ್ನು ನಡೆಸಲು ಸಾಧ್ಯವಿಲ್ಲ, ನೀವು ಹಿರಿಯ ನಾಗರಿಕರಿಗೆ ಆದ್ಯತೆ ನೀಡಬಾರದು, ಎಂದು ನಾವು ಹೇಳುತ್ತಿಲ್ಲ; ಆದರೆ ಲಸಿಕೆಯ ಕೊರತೆ ಇದ್ದರೆ, ಆದ್ಯತೆಯನ್ನು ನಿಗದಿಪಡಿಸಿ. ಯುವಕರಿಗೆ ಆದ್ಯತೆಯನ್ನು ನೀಡಿ, ಅವರಲ್ಲಿ ದೇಶದ ಭವಿಷ್ಯವಿದೆ, ಎಂದು ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸಲಹೆಯನ್ನು ನೀಡಿದೆ.

ಮಸೀದಿಯಲ್ಲಿ ೧೨ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿಯ ಬಂಧನ

ಇಂತಹ ವಾಸನಾಂಧರಿಗೆ ಷರಿಯತ ಕಾನೂನಿನ ಪ್ರಕಾರ ಕೈ ಮತ್ತು ಕಾಲುಗಳನ್ನು ಮುರಿಯುವ ಅಥವಾ ನಡುರಸ್ತೆಯಲ್ಲಿ ಅವರನ್ನು ಕಟ್ಟಿಹಾಕಿ ಕಲ್ಲು ಹೊಡೆಯುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ !

ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ !

ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಕ್ರೈಸ್ತಪ್ರೇಮವನ್ನು ಬಹಿರಂಗಪಡಿಸಿದ ತನ್ನದೇ ಪಕ್ಷದ ಸಂಸದನನ್ನು ಅಧಿಕಾರವನ್ನು ದುರುಪಯೋಗಿಸಿ ಬಂಧಿಸಿತು. ಇದು ಸರಕಾರದ ಮೊಗಲ್‍ಶಾಹಿ ಆಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಆಗಿದೆ. ಇದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರನ್ನು ಶಿಕ್ಷಿಸಬೇಕು !

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ !

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ. ೧೯೯೦ ರ ನಂತರ, ಜಗತ್ತಿನಾದ್ಯಂತ ಧೂಮಪಾನ ಮಾಡುವವರ ಸಂಖ್ಯೆ ೧೫ ಕೋಟಿಯಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸಂಖ್ಯೆ ೧೩೦ ಕೋಟಿಗಿಂತ ಹೆಚ್ಚು ಇದೆ. ಪ್ರತಿ ಐದು ಪುರುಷರಲ್ಲಿ ಒಬ್ಬರು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ.

ಶೇ. ೬೦ ರಷ್ಟು ಕೊರೊನಾ ಪೀಡಿತರ ಮೃತ್ಯುವಿಗೆ ಅಂಟಿಬಯೋಟಿಕ್ಸ್ ನ ಅತಿಯಾದ ಬಳಕೆಯಿಂದ ಉತ್ಪನ್ನವಾದ ದೊಡ್ಡ ರೋಗಾಣುಗಳೇ ಕಾರಣ !

ಕೊರೊನಾದ ಕಾಲಾವಧಿಯಲ್ಲಿ ರೋಗಿಗಳಿಗೆ ಹೇರಳವಾಗಿ ಅಂಟಿಬಯೋಟಿಕ್ಸ್ (ಪ್ರತಿಜೈವಿಕಗಳನ್ನು) ನೀಡಲಾಗುತ್ತಿದೆ. ಆದ್ದರಿಂದ ಅವರ ದೇಹದಲ್ಲಿ ಉತ್ಪತ್ತಿಯಾದ ‘ಸೂಪರ್‍ಬಗ್‍ಗಳು’ ರೋಗಿಗಳ ಮೃತ್ಯುವಿಗೆ ಕಾರಣವಾಗುತ್ತಿವೆ. ಪರಿಣಾಮವಾಗಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ವೇಗವಾಗಿ ಹೆಚ್ಚಾಗುತ್ತದೆ. ದೇಶದ ಶೇ. ೬೦ ಕೊರೋನಾ ರೋಗಿಗಳು ಸಾಯಲು ಇದು ಕಾರಣವಾಗಿದೆ.

ಕೊರೋನಾದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲಿ ಕೊರೋನಾದ ಬಗ್ಗೆ ಯಾಕೆ ಉಲ್ಲೇಖವಿಲ್ಲ ? – ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

‘ಕೊರೊನಾ ಪೀಡಿತನ ಮರಣ ಪ್ರಮಾಣಪತ್ರದಲ್ಲಿ ಆತನ ಮೃತ್ಯುವಿಗೆ ಕೊರೋನಾ ಕಾರಣವೆಂದು ಬರೆಯಬಹುದೇ ? ಇಂತಹ ಜನರ ಕುಟುಂಬಗಳಿಗೆ ಸರಕಾರ ೪ ಲಕ್ಷ ರೂಪಾಯಿ ಪರಿಹಾರ ನೀಡಬಹುದೆ ? ನ್ಯಾಯಾಲಯವು ೧೦ ದಿನಗಳಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ಆದೇಶ ನೀಡಿದೆ.