ಹಿರಿಯರು ತಮ್ಮ ಜೀವನವನ್ನು ಜೀವಿಸಿಯಾಗಿದೆ, ಆದ್ದರಿಂದ ಅವರ ಬದಲಾಗಿ ಯುವಕರಿಗೆ ಲಸಿಕೆ ನೀಡಿ !

ದೆಹಲಿ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸಲಹೆ

ಹೊಸ ದೆಹಲಿ – ಕೊರೋನಾದ ಎರಡನೇಯ ಅಲೆಯಲ್ಲಿ ನಾವು ಎಷ್ಟೊಂದು ಯುವಕರನ್ನು ಕಳೆದುಕೊಂಡಿದ್ದೇವೆ, ಈ ಬಗ್ಗೆ ವಿಚಾರ ಮಾಡಿ ನಮಗೆ ದುಃಖ ಆಗುತ್ತಿದೆ. ತಮ್ಮ ಜೀವನವನ್ನು ಈಗಾಗಲೇ ಜೀವಿಸಿರುವಂತಹ ಜನರ ಆಯುಷ್ಯವನ್ನು ಉಳಿಸಲು ಪ್ರಯತ್ನಿಸುತ್ತಿದ್ದೀರಿ. ಹಿರಿಯ ನಾಗರಿಕರು ದೇಶವನ್ನು ನಡೆಸಲು ಸಾಧ್ಯವಿಲ್ಲ, ನೀವು ಹಿರಿಯ ನಾಗರಿಕರಿಗೆ ಆದ್ಯತೆ ನೀಡಬಾರದು, ಎಂದು ನಾವು ಹೇಳುತ್ತಿಲ್ಲ; ಆದರೆ ಲಸಿಕೆಯ ಕೊರತೆ ಇದ್ದರೆ, ಆದ್ಯತೆಯನ್ನು ನಿಗದಿಪಡಿಸಿ. ಯುವಕರಿಗೆ ಆದ್ಯತೆಯನ್ನು ನೀಡಿ, ಅವರಲ್ಲಿ ದೇಶದ ಭವಿಷ್ಯವಿದೆ, ಎಂದು ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸಲಹೆಯನ್ನು ನೀಡಿದೆ. ಲಸಿಕೆಯ ಕೊರತೆ, ಕಪ್ಪು ಶಿಲೀಂದ್ರದ ರೋಗಿಗಳ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳ ಮತ್ತು ಅದರೊಂದಿಗೆ ಔಷಧಿಯ ಕೊರತೆ ಈ ಬಗ್ಗೆ ಸಲ್ಲಿಸಿದ್ದ ಅರ್ಜಿಯ ಆಲಿಕೆಯನ್ನು ಮಾಡುವಾಗ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ.

ನ್ಯಾಯಾಲಯವು ತನ್ನ ಸಲಹೆಯಲ್ಲಿ

. ಲಸಿಕೆ ಮತ್ತು ಔಷಧಿಯ ಬಗ್ಗೆ ಯಾವುದೇ ರೀತಿಯ ಅಡಚಣೆಗಳು ಬಂದಾಗ ಇತರ ದೇಶಗಳು ತಮ್ಮ ಆದ್ಯತೆಯನ್ನು ಬದಲಾಯಿಸಿವೆ. ಇಟಲಿಯ ಬಗ್ಗೆ ನಾವು ಓದಿದ ಹಾಗೆ ಯಾವಾಗ ಅಲ್ಲಿ ಹಾಸಿಗೆಯ ಕೊರತೆಯಾಯಿತೋ ಆಗ ಅದು ಹಿರಿಯ ನಾಗರಿಕರನ್ನು ಆಸ್ಪತ್ರೆಯಲ್ಲಿ ದಾಖಲಿಸುವುದನ್ನು ನಿಲ್ಲಿಸಿತು.

. ಸರಕಾರವು ಅನಾಥ ಮಕ್ಕಳಿಗಾಗಿ ಪ್ಯಾಕೇಜನ್ನು ಮಾಡಿದ್ದಾರೆ ಎಂಬುದನ್ನು ಇವತ್ತು ನಾವು ಓದಿದೆವು, ಇದರ ಅವಶ್ಯಕತೆ ಏಕೆ ಉಂಟಾಯಿತು ? ಓರ್ವ ಹುಡುಗನಿಗೆ ತನ್ನ ಅಪ್ಪ-ಅಮ್ಮನಿಂದ ಸಿಗುವಷ್ಟು ಸ್ನೇಹ ಮತ್ತು ಪ್ರೀತಿ ಇತರ ಯಾರಿಂದಲೂ ಸಿಗುವುದಿಲ್ಲ, ಆದ್ದರಿಂದ ಅವರನ್ನು ಉಳಿಸಬೇಕಾಗಿದೆ. ಎಂದು ಹೇಳಿದೆ.

ಒಂದುವೇಳೆ ಕೇಂದ್ರ ಸರಕಾರದ ಬಳಿ ಲಸಿಕೆ ಇಲ್ಲವೆಂದಾದರೆ ಅವರು ವ್ಯಾಕ್ಸಿನೇಶನ್‍ನ ಘೋಷಣೆಯನ್ನು ಏಕೆ ಮಾಡಲಾಯಿತು ?

ನ್ಯಾಯಾಲಯವು, ಒಂದುವೇಳೆ ಕೇಂದ್ರ ಸರಕಾರದ ಬಳಿ ಲಸಿಕೆ ಇಲ್ಲದಿದ್ದಾಗ, ಅದು ವ್ಯಾಕ್ಸಿನೇಶನ್‍ನ ಘೋಷಣೆ ಯಾಕೆ ಮಾಡಿತು ? ಒಂದು ವೇಳೆ ನಿಮ್ಮ ಬಳಿ ಲಸಿಕೆ ಇಲ್ಲದಿದ್ದರೆ, ಆದ್ಯತೆಯನ್ನು ನಿರ್ಧರಿಸಿ. ಕೊರೊನಾದ ಲಸಿಕೆಯನ್ನು ೬೦ ವರ್ಷಗಳ ಮೇಲಿನ ವ್ಯಕ್ತಿಗಳಿಗೆ ಮೊದಲು ನೀಡುವ ನಿರ್ಧಾರವನ್ನು ಏಕೆ ತೆಗೆದುಕೊಂಡಿತು ?, ಇದೇ ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿತು.