ಕನ್ನಡ ಭಾಷೆಯ ಬಗ್ಗೆ ಅಪಶಬ್ದವನ್ನು ಬಳಸಿದ್ದಕ್ಕಾಗಿ ಗೂಗಲ್‍ನಿಂದ ಕ್ಷಮೆಯಾಚನೆ !

ನವ ದೆಹಲಿ – ವಿಶ್ವದ ಅತಿದೊಡ್ಡ ಆನ್‍ಲೈನ್ ‘ಸರ್ಚ್ ಎಂಜಿನ್’ ಗೂಗಲ್, ಕನ್ನಡ ಭಾಷೆಯನ್ನು ‘ಭಾರತದ ಅತ್ಯಂತ ಕೆಟ್ಟ ಭಾಷೆ’ ಎಂದು ಹೇಳಿತ್ತು. ಇದಕ್ಕೆ ಭಾರತೀಯರು ಮತ್ತು ಕರ್ನಾಟಕ ಸರಕಾರದಿಂದ ವಿರೋಧವಾದ ನಂತರ ಗೂಗಲ್ ಭಾರತೀಯರಲ್ಲಿ ಕ್ಷಮೆಯಾಚಿಸಿದೆ. ಗೂಗಲ್, ‘ಇದು ಸಂಸ್ಥೆಯ ವೈಯಕ್ತಿಕ ವಿಚಾರವಲ್ಲ, ಒಂದು ತಾಂತ್ರಿಕ ದೋಷದಿಂದ ಉಂಟಾದುದಾಗಿದೆ’ ಗೂಗಲ್ ನಲ್ಲಿ ಜನರು ಯಾವಾಗ ‘ಭಾರತದ ಅತ್ಯಂತ ಕೆಟ್ಟದಾದ ಭಾಷೆ’, ಎಂದು ಸರ್ಚ್ ಮಾಡುವಾಗ ಉತ್ತರದಲ್ಲಿ `ಕನ್ನಡ ಭಾಷೆ’ ಎಂದು ಕಂಡು ಬರುತ್ತಿತ್ತು.

ಗೂಗಲ್‍ನ ‘ಸರ್ಚ್ ಎಂಜಿನ್’ನಲ್ಲಿ ಕಂಡುಬರುವ ಹಲವು ವಿಷಯಗಳು ನಿಜವಾಗಿರುತ್ತದೆ ಎಂದೇನಿಲ್ಲ. ಅನೇಕಬಾರಿ ಅಂತರ್ಜಾಲದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಆಘಾತಕಾರಿ ಉತ್ತರಗಳು ಸಿಗುತ್ತದೆ. ಇದು ತಪ್ಪಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೂ ಅಂತಹ ವಿಷಯಗಳ ಬಗ್ಗೆ ದೂರು ಬಂದಾಗ, ಆ ತಪ್ಪನ್ನು ಸರಿಪಡಿಸಲಾಗುತ್ತದೆ ಅದೇರೀತಿ ಗೂಗಲ್‍ನ ‘ಅಲ್ಗಾರಿದಮ್’ ಅನ್ನು ನಿರಂತರವಾಗಿ ಸುಧಾರಿಸುತ್ತಿದ್ದೇವೆ. ಗೂಗಲ್ ತನ್ನದೇ ಆದ ವಿಶಿಷ್ಟ ವಿಚಾರಗಳನ್ನು ಹೊಂದಿಲ್ಲ. ಆದರೂ ತಪ್ಪು ತಳುವಳಿಕೆಯಿಂದ ಜನರ ಮನಸ್ಸಿಗೆ ನೋವಾಗಿದೆ. ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.