ಇಂತಹ ಜನರ ಕುಟುಂಬಗಳಿಗೆ ಸರಕಾರವು ೪ ಲಕ್ಷ ರೂಪಾಯಿ ಪರಿಹಾರ ನೀಡಬಹುದೆ ?
ನವ ದೆಹಲಿ – ಕೊರೊನಾದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲಿ ಕೊರೊನಾವನ್ನು ಏಕೆ ಉಲ್ಲೇಖಿಸಲಾಗಿಲ್ಲ ? ಸರಕಾರವು ಇಂತಹವರ ಸಂಬಂಧಿಕರಿಗಾಗಿ ಒಂದು ಯೋಜನೆಯನ್ನು ಜಾರಿಗೊಳಿಸಿದರೆ, ಅದರಿಂದ ಅವರು ಹೇಗೆ ಪ್ರಯೋಜನ ಪಡೆಯಬಹುದು ?, ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರವನ್ನು ಕೇಳಿದೆ. ‘ಕೊರೊನಾ ಪೀಡಿತನ ಮರಣ ಪ್ರಮಾಣಪತ್ರದಲ್ಲಿ ಆತನ ಮೃತ್ಯುವಿಗೆ ಕೊರೋನಾ ಕಾರಣವೆಂದು ಬರೆಯಬಹುದೇ ? ಇಂತಹ ಜನರ ಕುಟುಂಬಗಳಿಗೆ ಸರಕಾರ ೪ ಲಕ್ಷ ರೂಪಾಯಿ ಪರಿಹಾರ ನೀಡಬಹುದೆ ? ನ್ಯಾಯಾಲಯವು ೧೦ ದಿನಗಳಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ಆದೇಶ ನೀಡಿದೆ. ಈ ಬಗ್ಗೆ ಮುಂದಿನ ವಿಚಾರಣೆಯು ಜೂನ್ ೧೧ ರಂದು ನಡೆಯಲಿದೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ೪ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂಬ ಕೋರಿಕೆಯ ಅರ್ಜಿ ಸಲ್ಲಿಸಿ, ಒತ್ತಾಯಿಸಲಾಗಿದೆ.
— Udayavani (@udayavani_web) May 24, 2021
ಕೊರೊನಾ ಪೀಡಿತನ ಮರಣ ಪ್ರಮಾಣಪತ್ರದಲ್ಲಿ ‘ಶ್ವಾಸಕೋಶ ಮತ್ತು ಹೃದಯವು ಕೆಲಸ ಮಾಡುವುದಿಲ್ಲ’ ಎಂಬ ಬೇರೆಯೇ ಕಾರಣಗಳನ್ನು ಬರೆಯಲಾಗುತ್ತದೆ. ಇದನ್ನು ನಾನು ಸ್ವತಃ ನೋಡಿದ್ದೇನೆ, ಸಾವಿನ ನಿಜವಾದ ಕಾರಣ ಕೊರೊನಾವೇ ಆಗಿರುತ್ತದೆ. ಆದ್ದರಿಂದ ಸರಕಾರವು ಇಂತಹ ಜನರಿಗೆ ಒಂದು ಯೋಜನೆಯನ್ನು ರೂಪಿಸಿದ್ದರೂ, ‘ಸಂಬಂಧಪಟ್ಟ ವ್ಯಕ್ತಿಯ ಸಾವಿಗೆ ಕಾರಣ ಕೊರೊನಾ ಸೋಂಕು’ ಎಂದು ಅದು ಹೇಗೆ ಸಾಬೀತುಪಡಿಸುತ್ತದೆ ? ಇದನ್ನು ಸಾಬೀತುಪಡಿಸಲು ಕುಟುಂಬವು ಅಲೆದಾಡಬೇಕಾಗುತ್ತದೆ.’ ಎಂದು ನ್ಯಾಯಾಲಯವು ಹೇಳಿದೆ. ಅದಕ್ಕೆ ಸರಕಾರಿ ನ್ಯಾಯವಾದಿಯು, ಕೊರೊನಾ ಪೀಡಿತರ ಮರಣ ಪ್ರಮಾಣ ಪತ್ರದ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತಿನ ಮಾರ್ಗಸೂಚಿಗನುಸಾರವೇ ಕಾರಣ ಬರೆಯಲಾಗುತ್ತದೆ ಎಂದು ಹೇಳಿದರು.