ಭಾರತದಲ್ಲಿ ‘ಪೆಟಾ’ ಸಂಸ್ಥೆಯನ್ನು ನಿಷೇಧಿಸಿ ! – ಅಮೂಲ ಸಂಸ್ಥೆಯಿಂದ ಪ್ರಧಾನಿ ಮೋದಿಗೆ ಪತ್ರದ ಮೂಲಕ ಬೇಡಿಕೆ

‘ಪೇಟಾ’ ಭಾರತದಲ್ಲಿನ ಹಾಲಿನ ವ್ಯಾಪಾರವನ್ನು ನಾಶಮಾಡಲು ಯತ್ನಿಸುತ್ತಿದೆ ಎಂದು ಆರೋಪ

ಪೆಟಾದಂತಹ ಸಂಸ್ಥೆಗಳು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಸರಕಾರವು ತಾನಾಗಿಯೇ ಅದರ ಮೇಲೆ ನಿಷೇಧ ಹೇರಬೇಕು !

‘ಪೆಟಾ’ದಂತಹ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ಈದ್‍ನಂತಹ ದಿನಗಳಲ್ಲಿ ಕಾಣೆಯಾಗುತ್ತವೆ, ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ !

ನವ ದೆಹಲಿ : ಭಾರತದಲ್ಲಿ ‘ಪೆಟಾ’ (ಪೀಪಲ್ ಆಫ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್) ಈ ಪ್ರಾಣಿ ಸಂರಕ್ಷಕ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರಿ ಭಾರತದ ಹಾಲು ಉದ್ಯಮ ನಡೆಸುವ `ಅಮೂಲ್’ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೇಡಿಕೆ ಮಾಡಿದ್ದಾರೆ.

ಅಮೂಲ್‍ನ ಉಪಾಧ್ಯಕ್ಷ ವಲಮಾಜಿ ಹಂಬಲ ಇವರು, ಪೇಟಾ ಸಂಸ್ಥೆಯು ಜನರ ಜೀವನೋಪಾಯವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅದರಿಂದಾಗಿ ಭಾರತದಲ್ಲಿನ ಹಾಲು ಉದ್ಯಮದ (ಹೈನುಗಾರಿಕೆ) ಚಿತ್ರಣಕ್ಕೆ ಕಳಂಕವಾಗುತ್ತಿದೆ. ಪೆಟಾ ಅವರ ಕ್ರಮಗಳು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮೇಲೆ ಪರಿಣಾಮ ಬೀರಬಹುದು. ಹಾಲು ಉತ್ಪಾದಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಪೆಟಾ ಪ್ರಯತ್ನಿಸುತ್ತಿದೆ. ಪೇಟಾದಂತಹ ಸಂಸ್ಥೆಗಳು ‘ಸಿಂಥೆಟಿಕ್’ ಹಾಲನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ಭಾರತದಲ್ಲಿ ಪ್ರಾಣಿಗಳ ಹಿಂಸಾಚಾರ ನಡೆಯುತ್ತಿದೆ ಎಂಬ ವದಂತಿಗಳು ಹರಡುತ್ತಿವೆ. ತದ್ವಿರುದ್ಧ ಭಾರತದಲ್ಲಿ ಪ್ರಾಣಿಗಳನ್ನು ಕುಟುಂಬದ ಸದಸ್ಯರಾಗಿ ನೋಡಲಾಗುತ್ತದೆ.

ಅಮೂಲ್ ಸಂಸ್ಥೆಯು ‘ವೀಗಲ್’ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬೇಕು ! – ಪೆಟಾ

ಪೇಟಾ ಇಂಡಿಯಾ ಸಂಸ್ಥೆಯು ಅಮೂಲ್‍ಗೆ ‘ವೀಗಲ್’ ಅಂದರೆ ಪ್ರಾಣಿಗಳಿಂದ ಉತ್ಪಾದಿಸದೇ ಇರುವ ಹಾಲನ್ನು ತಯಾರಿಸುವಂತೆ ಮನವಿ ಮಾಡಿತ್ತು. ಇದರಲ್ಲಿ ಸಸ್ಯವರ್ಗದ ಮೂಲಕ ಹಾಲನ್ನು ಉತ್ಪಾದಿಸುತ್ತದೆ.