ಮಸೀದಿಯಲ್ಲಿ ೧೨ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿಯ ಬಂಧನ

  • ಇಂತಹ ವಾಸನಾಂಧರಿಗೆ ಷರಿಯತ ಕಾನೂನಿನ ಪ್ರಕಾರ ಕೈ ಮತ್ತು ಕಾಲುಗಳನ್ನು ಮುರಿಯುವ ಅಥವಾ ನಡುರಸ್ತೆಯಲ್ಲಿ ಅವರನ್ನು ಕಟ್ಟಿಹಾಕಿ ಕಲ್ಲು ಹೊಡೆಯುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ !

  • ಇಂತಹ ಘಟನೆಗಳ ಬಗ್ಗೆ ಪ್ರಗತಿ(ಅಧೋಗತಿ)ಪರರು, ಜಾತ್ಯಾತೀತವಾದಿಗಳು ಅಥವಾ ಇಸ್ಲಾಮಿಕ್ ಸಂಘಟನೆಗಳು ಬಾಯಿ ಬಿಚ್ಚುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ಇಲ್ಲಿಯ ಒಂದು ಮಸೀದಿಯಲ್ಲಿ ನೀರು ತುಂಬಿಸಲು ಹೋದ ೧೨ ವರ್ಷದ ಬಾಲಕಿಯ ಮೇಲೆ ೪೮ ವರ್ಷದ ಮೌಲ್ವಿ ಮೊಹಮ್ಮದ್ ಇಲಿಯಾಸ್ ಅತ್ಯಾಚಾರ ಎಸಗಿದ್ದಾನೆ. ಪೊಲೀಸರು ಇಲಿಯಾಸ್‍ನನ್ನು ಬಂಧಿಸಿದ್ದಾರೆ. ಮೇ ೩೦ ರಂದು ರಾತ್ರಿ ೧೦ ಗಂಟೆಗೆ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಸಂತ್ರಸ್ತೆಯು ತನ್ನ ಕುಟುಂಬಕ್ಕೆ ಮಾಹಿತಿ ನೀಡಿದಾಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ತಿಳಿದ ನಂತರ ಮಸೀದಿಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಆದ್ದರಿಂದ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ.