ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ.

ರಾಮನಾಥಿ ಆಶ್ರಮದ ಸಾಧಕಿ ಸೌ. ಸುಜಾತಾ ರೇಣಕೆ ಇವರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಗಮನಕ್ಕೆ ಬಂದ ವೈಶಿಷ್ಟ್ಯಗಳು

‘ಸನಾತನ ಪ್ರಭಾತ’ವನ್ನು ನಿಯಮಿತವಾಗಿ ಓದುವುದೆಂದರೆ ‘ಪಿ.ಎಚ್.ಡಿ.’ ಮಾಡಿದಂತಾಗಿದೆ. ಸಮಾಜದಲ್ಲಿ ‘ಪಿ.ಎಚ್.ಡಿ.’ ಮಾಡಿದ ನಂತರ ‘ಡಾಕ್ಟರೇಟ್’ ಪದವಿ ಸಿಗುತ್ತದೆ; ಆದರೆ ‘ಸನಾತನ ಪ್ರಭಾತ’ವನ್ನು ಜಿಜ್ಞಾಸೆಯಿಂದ ಓದಿ ಅದರಂತೆ ಆಚರಣೆಯನ್ನು ಮಾಡಿದರೆ, ಖಚಿತವಾಗಿ ಆ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಮತ್ತು ಇದೇ ಆ ಜೀವಕ್ಕೆ ದೊರಕಿದ ಪದವಿಯಾಗುತ್ತದೆ.

ನಿಮ್ಮೆಲ್ಲರಿಗೆ ಜಗನ್ಮಾತೆಯು ದಿವ್ಯ ಪ್ರೇಮವನ್ನು ಕರುಣಿಸಲಿ

ಎಷ್ಟು ಸುಂದರ ಉಪಮೆ. ಎಷ್ಟು ಉಚ್ಚ ಆದರ್ಶ. ಯಾವುದೇ ಹಸು ತನ್ನ ಕರುವಿನಿಂದ ಸ್ವಾರ್ಥವನ್ನು ಬಯಸುವುದಿಲ್ಲ. ಪೂರ್ಣ ಸಮರ್ಪಿತವಾಗಿದ್ದು ತನ್ನ ಕರುವನ್ನು ಬೆಳೆಸುತ್ತಾ ಅಗಾಧ ಪ್ರೀತಿಯನ್ನು ಸಮರ್ಪಿಸುತ್ತದೆ.

ಸನಾತನ ಪ್ರಭಾತದ ಮೇಲಿನ ವಿಶ್ವಾಸ

‘ಸನಾತನ ಪ್ರಭಾತವು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇತ್ಯಾದಿಗಳಿಗಾಗಿ ಕಾರ್ಯ ಮಾಡುತ್ತದೆ, ಎಂಬ ದೃಢವಿಶ್ವಾಸವು ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಸನಾತನ ಪ್ರಭಾತವು ತನು, ಮನ ಮತ್ತು ಧನದ ತ್ಯಾಗ ಮಾಡಿಸಿ ಸಾಧಕರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತದೆ.

ಓದುಗರಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ, ಅವರಿಗೆ ಧರ್ಮ ಸಂಜೀವನಿಯನ್ನು ನೀಡುವ ಹಾಗೂ ಅಧ್ಯಾತ್ಮಮಾರ್ಗವನ್ನು ಅನುಸರಿಸುವವರಿಗೆ ಮಾರ್ಗದರ್ಶನ ಮಾಡುವ ಸರ್ವಾಂಗಸ್ಪರ್ಶಿ ‘ಸನಾತನ ಪ್ರಭಾತವನ್ನು ಮನೆ-ಮನೆಗೆ ತಲುಪಿಸಿ !

ತ್ಯ ವಾರ್ತೆಯನ್ನು ಪ್ರಕಟಿಸಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಸಮಾಜದ ಮನಸ್ಸನ್ನು ಜಾಗೃತಗೊಳಿಸುವ ಪತ್ರಿಕೆಗಳು ಇಂದು ಕೈಬೆರಳೆಣಿಕೆಯಷ್ಟೇ ಉಳಿದಿವೆ. ರಾಷ್ಟ್ರ ರಕ್ಷಣೆ ಮತ್ತು ಧರ್ಮ ಜಾಗೃತಿಯ ವ್ರತದೊಂದಿಗೆ ಆದರ್ಶ ಪತ್ರಿಕಾರಂಗದಲ್ಲಿ ಮುಂಚೂಣಿಯಲ್ಲಿರುವ ಸನಾತನ ಪ್ರಭಾತದ ಹೆಸರು ಈ ಶ್ರೇಣಿಯಲ್ಲಿ ಎಲ್ಲಕ್ಕಿಂತ ಮೇಲಿದೆ.

ಸನಾತನ ಪ್ರಭಾತವು ಸಾಧನೆಯ ರಹಸ್ಯವನ್ನು ಎಲ್ಲರಿಗೂ ತಿಳಿಸಿ ಉತ್ತೇಜಿಸುತ್ತಿದೆ !- ಬ್ರಹ್ಮಶ್ರೀ ಡಾ. ಉಮೇಶ ಶರ್ಮಾ ಗುರೂಜಿ

ವೇದಗಳ ಸಾರಾಂಶವನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೇ ಸಾಧನೆಯ ರಹಸ್ಯವನ್ನು ಎಲ್ಲರಿಗೂ ತಿಳಿಸಿ ಉತ್ತೇಜಿಸುತ್ತಿದೆ. ಪರಾತ್ಪರ ಗುರುಗಳ ಕರುಣೆಯ ಅನುಗ್ರಹದಿಂದ ಆಧ್ಯಾತ್ಮ ಜಾಗೃತಿ ಮೂಡಿಸುತ್ತಿದೆ.

ದಿನಪತ್ರಿಕೆಗಳಿಗೆ ಸಂಬಂಧಿಸಿದ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ದೈನಿಕ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದ ಮುಖ್ಯ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಹಾಗೆಯೇ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿ ಈ ಕುರಿತು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

ವಾಚಕರ ದೃಷ್ಟಿಯಿಂದ ಸನಾತನ ಪ್ರಭಾತದ ಗುಣವೈಶಿಷ್ಟ್ಯ

ಸನಾತನ ಪ್ರಭಾತದಲ್ಲಿ ಬರುವ ವಿಷಯಗಳು ಸತ್ಯನಿಷ್ಠ ಹಾಗೂ ಪ್ರಾಮಾಣಿಕವಾಗಿರುತ್ತದೆ. ಪ್ರತಿ ವಿಷಯದ ವಿವರಣೆಗಳು ಅರ್ಥಪೂರ್ಣವೂ ಸ್ಪಷ್ಟವಾಗಿಯೂ ಧಾರ್ಮಿಕವೂ ಆಗಿರುತ್ತವೆ. ಆಧ್ಯಾತ್ಮಿಕವಾಗಿ ಜ್ಞಾನದ ಕನ್ನಡಿಯಂತಿದೆ ಸನಾತನ ಪತ್ರಿಕೆ.

ಸಮಾಜಮನಸ್ಸಿನಲ್ಲಿ ಶ್ರದ್ಧೆಯ ಬೀಜವನ್ನು ಭಿತ್ತಿ ಶ್ರದ್ಧಾವಂತ ಮತ್ತು ಸಾತ್ತ್ವಿಕ ಸಮಾಜವನ್ನು ರೂಪಿಸಲು ಅವಿರತ ಪರಿಶ್ರಮಿಸುತ್ತಿರುವ ‘ಸನಾತನ ಪ್ರಭಾತವು ಸಾಧನೆ ಮಾಡುವ ವ್ಯಕ್ತಿಗಳಿಗೆ ದೊರೆತ ಅಮೂಲ್ಯ ಸತ್ಸಂಗ !

ಅನೇಕ ಕಾರ್ಯಕರ್ತರು ಪ್ರತಿದಿನ ೧೦ ಗಂಟೆ ಸೇವೆಯನ್ನು ಮಾಡಿ ಎಷ್ಟು ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಾರೆಯೋ, ಅದರ ಅನೇಕ ಪಟ್ಟು ಹೆಚ್ಚು ಪರಿಣಾಮಕಾರಿ ಧರ್ಮಪ್ರಸಾರವನ್ನು ‘ಸನಾತನ ಪ್ರಭಾತ ವರ್ತಮಾನ ಪತ್ರಿಕೆಗಳು ಮಾಡುತ್ತಿವೆ. ಈ ವರ್ತಮಾನ ಪತ್ರಿಕೆಗಳಿಂದ ವ್ಯಾಪಕ ಸ್ತರದಲ್ಲಿ ಮತ್ತು ಪ್ರಭಾವಶಾಲಿ ಧರ್ಮಪ್ರಸಾರವಾಗುತ್ತಿದೆ.

ಸಂತರ ಆಶೀರ್ವಾದದಿಂದ ಮಾರ್ಗಕ್ರಮಿಸುತ್ತಿರುವ ‘ಸನಾತನ ಪ್ರಭಾತದ ದಾರ್ಶನಿಕತೆ !

‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶವನ್ನು ಸಾಧಿಸುವುದೆಂದರೆ ಕೇವಲ ಕೇಸರಿಯನ್ನು ಹಿಡಿದುಕೊಂಡು ಹಿಂದುತ್ವವನ್ನು ಶಾಬ್ದಿಕವಾಗಿ ಪುರಸ್ಕರಿಸುವಷ್ಟು ಸುಲಭವಿಲ್ಲ. ಹಿಂದೂ ರಾಷ್ಟ್ರದ ಸಂಕಲ್ಪನೆಯಲ್ಲಿ ಎಲ್ಲ ಸ್ತರಗಳಲ್ಲಿ ರಾಷ್ಟ್ರದ ಉನ್ನತಿಯಾಗಬೇಕೆಂಬ ಅಪೇಕ್ಷೆಯಿರುತ್ತದೆ. ಅದರಲ್ಲಿ ಪತ್ರಿಕಾರಂಗವೂ ಬರುತ್ತದೆ ! ಸದ್ಯ ಸಾಮಾಜಿಕ ಸಂಘರ್ಷದ ಮತ್ತು ಅಸ್ಥಿರತೆಯ ಕಾಲವಾಗಿದೆ.