ಸಂತರ ಆಶೀರ್ವಾದದಿಂದ ಮಾರ್ಗಕ್ರಮಿಸುತ್ತಿರುವ ‘ಸನಾತನ ಪ್ರಭಾತದ ದಾರ್ಶನಿಕತೆ !

‘ಸನಾತನ ಪ್ರಭಾತ’ದ ಇತಿಹಾಸದಲ್ಲಿ ಮೊದಲ ಬಾರಿಗೆ ಗೋವಾ ಮತ್ತು ಸಿಂಧುದುರ್ಗ ಆವೃತ್ತಿಗಳ ವರ್ಧಂತ್ಯೋತ್ಸವವನ್ನು ಗಣಕೀಯ ತಂತ್ರಾಂಶದ ಮೂಲಕ ಆಚರಿಸಲಾಗಿತ್ತು. ಅನಂತರ ರತ್ನಾಗಿರಿ ಹಾಗೂ ಪಾಕ್ಷಿಕ ಹಿಂದಿ ಸನಾತನ ಪ್ರಭಾತದ ಆವೃತ್ತಿಯ ವರ್ಧಂತ್ಯೋತ್ಸವವನ್ನು ಸಹ ಆಚರಿಸಲಾಯಿತು. ಈಗ ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಸಹ ಆನ್‌ಲೈನ್‌ದಲ್ಲಿ ಆಚರಿಸಲಿದ್ದೇವೆ. ಇದು ಆಪತ್ಕಾಲದ ವರ್ಧಂತ್ಯೋತ್ಸವ ವಾಗಿದೆ. ಕೊರೋನಾ ದಿಂದ ಜೀವನ ಪದ್ಧತಿಯಲ್ಲಿ ಬದಲಾವಣೆಯಾಗಿದೆ. ಇದಲ್ಲದೇ, ಚಂಡಮಾರುತ, ಮಿಡತೆಗಳ ಕಾಟ ಮತ್ತು ಗಡಿಯಲ್ಲಿ ಅಸ್ಥಿರತೆಯಂತಹ ಬಿಕ್ಕಟ್ಟುಗಳ ಸರಮಾಲೆ ನಡೆಯುತ್ತಿದೆ. ಇಂತಹ ಕಾಲದಲ್ಲಿ ಮಾಧ್ಯಮಗಳು ಸರಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಮಾರ್ಪಟ್ಟಿವೆ. ಸರಕಾರದ ಸಂದೇಶವನ್ನು ಎಲ್ಲೆಡೆಯ ಜನರಿಗೆ ತಲುಪಿಸುವಲ್ಲಿ, ಅವರಲ್ಲಿ ಬಿಕ್ಕಟ್ಟಿನ ಬಗ್ಗೆ ಗಂಭೀರತೆಯನ್ನು ಮೂಡಿಸುವಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಜನರ ದುಃಸ್ಥಿತಿ, ಅಡಚಣೆಗಳನ್ನು ಬಹಿರಂಗಪಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ‘ಸನಾತನ ಪ್ರಭಾತ’ದ ವೈಶಿಷ್ಟ್ಯವೆಂದರೆ ನಾವು ಕಳೆದ ಹಲವಾರು ವರ್ಷಗಳಿಂದ ಇಂತಹ ಬಿಕ್ಕಟ್ಟುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ‘ಸನಾತನ ಪ್ರಭಾತ’ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆ ಮತ್ತು ಇತರ ಅನೇಕ ಸಂತರು ಮುಂಬರುವ ಆಪತ್ಕಾಲದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ತಮ್ಮ ವಿಚಾರಗಳಿಗೆ ಪ್ರಚಾರ ಮಾಡುವುದು ಸೇರಿದಂತೆ ಆಪತ್ಕಾಲವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶಕ ಲೇಖನವನ್ನು ಕಳೆದ ವರ್ಷ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಯಿತು. ಈ ವರ್ಷದ ಬಿಕ್ಕಟ್ಟುಗಳ ಸರಣಿಯಿಂದಾಗಿ ಪರಾತ್ಪರ ಗುರು ಡಾಕ್ಟರರ ದಾರ್ಶನಿಕತೆ ಸಾಬೀತುಪಡಿಸುತ್ತದೆ. ಕಳೆದ ವರ್ಷದ ವರ್ಧಂತ್ಯೋತ್ಸವದಂದು ನಾವು, ಭವಿಷ್ಯದ ವಿಪತ್ತುಗಳ ಕುರಿತು ಸಂಪಾದಕೀಯವನ್ನು ಪ್ರಕಟಿಸಿದ್ದೆವು.

ಆ ಲೇಖನವು ಇಂದಿನ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಅನ್ವಯವಾಗುತ್ತದೆ, ಇದು ಪರಾತ್ಪರ ಗುರುದೇವರ ಬೋಧನೆಗಳ ಫಲಿತಾಂಶವಾಗಿದೆ ! ಆ ಲೇಖನವನ್ನು ಅಂಶಾಂತ್ಮಕವಾಗಿ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ನೋಡೋಣ. – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’

೨೦೧೯ ರ ಸಂಪಾದಕೀಯದ ಅಂಶಾತ್ಮಕ ಭಾಗ !

ಆಪತ್ಕಾಲ ಮತ್ತು ‘ಸನಾತನ ಪ್ರಭಾತ !

‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶವನ್ನು ಸಾಧಿಸುವುದೆಂದರೆ ಕೇವಲ ಕೇಸರಿಯನ್ನು ಹಿಡಿದುಕೊಂಡು ಹಿಂದುತ್ವವನ್ನು ಶಾಬ್ದಿಕವಾಗಿ ಪುರಸ್ಕರಿಸುವಷ್ಟು ಸುಲಭವಿಲ್ಲ. ಹಿಂದೂ ರಾಷ್ಟ್ರದ ಸಂಕಲ್ಪನೆಯಲ್ಲಿ ಎಲ್ಲ ಸ್ತರಗಳಲ್ಲಿ ರಾಷ್ಟ್ರದ ಉನ್ನತಿಯಾಗಬೇಕೆಂಬ ಅಪೇಕ್ಷೆಯಿರುತ್ತದೆ. ಅದರಲ್ಲಿ ಪತ್ರಿಕಾರಂಗವೂ ಬರುತ್ತದೆ ! ಸದ್ಯ ಸಾಮಾಜಿಕ ಸಂಘರ್ಷದ ಮತ್ತು ಅಸ್ಥಿರತೆಯ ಕಾಲವಾಗಿದೆ. ಜಾಗತಿಕ ಸ್ತರದ ವಿದ್ಯಮಾನಗಳನ್ನು ನೋಡುವಾಗ ‘ಯಾವುದೇ ಕ್ಷಣದಲ್ಲಿ ಮೂರನೇ ಮಹಾಯುದ್ಧ ಆರಂಭವಾಗಬಹುದು, ಎನ್ನುವಂತಹ ಸ್ಥಿತಿ ಇದೆ. ರಾಷ್ಟ್ರದಲ್ಲಿ ಯಾವುದೇ ದೊಡ್ಡ ಘಟನೆ ಸಂಭವಿಸಿದಾಗ ಅಥವಾ ಯುದ್ಧ ಆರಂಭವಾದಾಗ ಮಾಧ್ಯಮಗಳು ಎಷ್ಟು ಜವಾಬ್ದಾರಿಯಿಂದ ವರದಿ ಮಾಡಬೇಕು, ಎನ್ನುವುದಕ್ಕೆ ಒಂದು ನಿಯಮವಿದೆ. ಜಾಗತಿಕ ಸ್ತರದ ಅನೇಕ ಮಾಧ್ಯಮಗಳು ಬಣ್ಣಬಣ್ಣದ ವಾರ್ತೆಗಳನ್ನು ಪ್ರಸಾರ ಮಾಡಿ ‘ಜನರು ಎಷ್ಟು ಪೀಡಿತರಾಗಿದ್ದಾರೆ, ಎಂಬುದನ್ನು ತೋರಿಸಿ ಸರಕಾರದ ವೈಫಲ್ಯವನ್ನು ಜಾಗತಿಕ ಸ್ತರದಲ್ಲಿ ಬಯಲು ಮಾಡುವುದಿಲ್ಲ. ಯುದ್ಧದಂತಹ ಪ್ರಸಂಗಗಳಲ್ಲಿಯೂ ‘ಕುತೂಹಲಭರಿತ ವಾರ್ತೆಗಳ ಹೆಸರಿನಲ್ಲಿ ದೇಶದ ಭದ್ರತೆಯನ್ನು ಅಪಾಯಕ್ಕೀಡು ಮಾಡುವಂತಹ ಕಾರ್ಯವನ್ನು ಇಂದಿಗೂ ವಿದೇಶಗಳಲ್ಲಿ ಮಾಡಲಾಗುವುದಿಲ್ಲ. ಭಾರತೀಯ ಪತ್ರಿಕೋದ್ಯಮ ಮಾತ್ರ ಇವೆಲ್ಲ ನೀತಿನಿಯಮಗಳನ್ನು ಗೂಟಕ್ಕೆ ಕಟ್ಟಿಬಿಟ್ಟಿದೆ. ಆದರೂ ‘ಸನಾತನ ಪ್ರಭಾತವು ಯಾವುದೇ ಕೋಲಾಹಲದ ಹಿಂದೆ ಓಡುವುದಿಲ್ಲ. ನಮ್ಮ ಪ್ರಾಧಾನ್ಯತೆ ಕೇವಲ ಭದ್ರತೆ ಮಾತ್ರವಲ್ಲದೇ ಕಾಲದ ಹೆಜ್ಜೆಯನ್ನು ಗುರುತಿಸಿ ಪ್ರತಿಬಂಧನಾತ್ಮಕ ಉಪಾಯ ಯೋಜನೆಯನ್ನು ಅವಲಂಬಿಸುವುದೇ ಆಗಿದೆ. ಆ ದೃಷ್ಟಿಯಲ್ಲಿ ‘ಸನಾತನ ಪ್ರಭಾತದಲ್ಲಿ ನಡುನಡುವೆ ಸಂತರ ಮಾರ್ಗದರ್ಶನ, ದೃಷ್ಟಿಕೋನ ಮತ್ತು ಅನೇಕ ಲೇಖಕರ ಲೇಖನ ಗಳು ಸಹ ಪ್ರಸಾರವಾಗುತ್ತಿರುತ್ತವೆ. ಕಾಲದ ಹೆಜ್ಜೆಯನ್ನು ಗುರುತಿಸುವ ಪರಾತ್ಪರ ಗುರು ಡಾ. ಆಠವಲೆಯವರಂತಹ ದಾರ್ಶನಿಕ ಸಂತರು ಸಂಸ್ಥಾಪಕರಾಗಿರುವ ‘ಸನಾತನ ಪ್ರಭಾತವು ಮೊದಲಿಂದಲೇ ಕೇವಲ ವಾರ್ತೆಗಳನ್ನು ಪ್ರಕಟಿಸುವುದಲ್ಲ, ರಾಷ್ಟ್ರೀಯ ಉನ್ನತಿಯ ನಿಲುವನ್ನು ತಾಳಿದೆ. ನಾವು ಆಪತ್ಕಾಲದಿಂದ ಪಾರಾಗಲು ಉಪಾಯ ಯೋಜನೆಗಳನ್ನು ಆಗಾಗ ಮುದ್ರಿಸುತ್ತಿದ್ದೇವೆ. ‘ನ ಮೆ ಭಕ್ತಃ ಪ್ರಣಶ್ಯತಿ (ಅರ್ಥ : ನನ್ನ ಭಕ್ತನ ನಾಶವಾಗುವುದಿಲ್ಲ) ಎನ್ನುವ ಶ್ರೀಕೃಷ್ಣನ ವಚನವನ್ನು ಸ್ಮರಣೆಯಲ್ಲಿಟ್ಟು ‘ಸನಾತನ ಪ್ರಭಾತದಲ್ಲಿ ಸಮಾಜಕ್ಕೆ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನವನ್ನು ಮಾಡಲಾಗುತ್ತದೆ. ಇಲ್ಲಿಯವರೆಗೆ ಅನೇಕ ವಿಷಯಗಳ ಬಗ್ಗೆ ‘ಸನಾತನ ಪ್ರಭಾತವು ಜಾಗೃತಿ ಮೂಡಿಸಿದೆ. ಇಷ್ಟು ಮಾತ್ರವಲ್ಲ, ಮುಂಬರುವ ಕಾಲದಲ್ಲಿ ಬರಲಿರುವ ಆಪತ್ಕಾಲದ ವಿಷಯದಲ್ಲಿ ವಾಚಕರನ್ನು ಜಾಗರೂಕಗೊಳಿಸುವುದು, ಆಪತ್ಕಾಲದ ಆಘಾತದಿಂದ ರಕ್ಷಿಸಿಕೊಳ್ಳಲು ಉಪಾಯಯೋಜನೆಯನ್ನು ಹೇಳುವುದು ಹಾಗೂ ಹೆಚ್ಚೆಚ್ಚು ಜನರ ಜೀವವನ್ನು ರಕ್ಷಿಸುವುದು, ಇದೇ ‘ಸನಾತನ ಪ್ರಭಾತದ ಕಾರ್ಯದ ಮುಂದಿನ ದೃಷ್ಟಿಕೋನವಿರಲಿಕ್ಕಿದೆ. ‘ಸನಾತನ ಪ್ರಭಾತ ಸಮೂಹವು ಮೂರನೇ ಮಹಾಯುದ್ಧ, ಹೊಸ್ತಿಲಿನ ತನಕ ಬಂದು ತಲುಪಿರುವ ಆಪತ್ಕಾಲದ ಅವಧಿಯಲ್ಲಿ ಸಮಾಜ ರಕ್ಷಣೆಯ ಕಾರ್ಯದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುವುದು. ಇಂತಹ ಘಟನೆಗಳತ್ತ ‘ಟಿ.ಆರ್.ಪಿ.ಯನ್ನು ಹೆಚ್ಚಿಸುವ ದೃಷ್ಟಿಕೋನದಿಂದ ನೋಡದೆ ಪ್ರಗಲ್ಭ ಮತ್ತು ಕೃತಿಶೀಲ ಪತ್ರಿಕೋದ್ಯಮವನ್ನು ನಾವು ಸಂಪೂರ್ಣ ವಿಶ್ವಕ್ಕೆ ತೋರಿಸುವೆವು.

೨೦೨೦ ರ ವಾಸ್ತವಿಕತೆ

ವಾಸ್ತವದಲ್ಲಿ ಕೊರೋನಾ ಮಹಾಮಾರಿಯಿಂದಾಗಿ ೩ ತಿಂಗಳಿಗಿಂತ ಹೆಚ್ಚು ಕಾಲ ದೇಶವೇ ಸ್ತಬ್ಧವಾಗಿತ್ತು. ಆದರೂ ‘ಸನಾತನ ಪ್ರಭಾತವು ಈ ಮಹಾಮಾರಿಯನ್ನು ಎದುರಿಸುವ ಸಲುವಾಗಿ ವಿವಿಧ ಉಪಾಯಯೋಜನೆಗಳನ್ನು ಅಖಂಡವಾಗಿ ಪ್ರಕಟಿಸುತ್ತಿದೆ. ‘ಮನೋಬಲವನ್ನು ಹೆಚ್ಚಿಸಲು ಸ್ವಯಂಸೂಚನೆ, ಕೊರೋನಾದ ಕಾಲದಲ್ಲಿ ಆತ್ಮಬಲವನ್ನು ಹೆಚ್ಚಿಸಲು ಉಪಯುಕ್ತವಾಗಿರುವ ನಾಮಜಪ, ಶಾರೀರಿಕ ಸ್ತರದಲ್ಲಿ ಆರೋಗ್ಯವಂತರಾಗಿರಲು ಉಪಾಯಯೋಜನೆಯ ವಿಷಯದಲ್ಲಿ ಆಯಾಯ ಕ್ಷೇತ್ರಗಳ ವಿಚಾರ, ಸಂತರ ಮಾರ್ಗದರ್ಶನಗಳು ಪ್ರಕಟಿಸಿರುವುದರಿಂದ ಆಧಾರ ಸಿಕ್ಕಿತು, ಎಂದು ಅನೇಕ ಜನರು ನಮಗೆ ತಿಳಿಸಿದ್ದಾರೆ.

‘ಈ ಸಂಕಟಕಾಲದಲ್ಲಿಯೂ ಪತ್ರಿಕೆಯು ಸಕಾರಾತ್ಮಕ ವಾರ್ತೆಯನ್ನು ನೀಡುತ್ತದೆ, ಎಂಬುದನ್ನು ಓದಿ ಆನಂದವಾಯಿತು, ಎಂದು ಕೂಡ ಓರ್ವ ಗಣ್ಯರು ತಿಳಿಸಿದ್ದಾರೆ. ಸಂಚಾರನಿಷೇಧದ ಅಡಚಣೆಯಿಂದಾಗಿ ಏಪ್ರಿಲ್ ನಿಂದ ಡಿಸೆಂಬರ್ ಈ ಅವಧಿಯಲ್ಲಿ ನಮಗೆ ಆವೃತ್ತಿಯನ್ನು ನಿಲ್ಲಿಸಬೇಕಾಯಿತು. ಆದ್ದರಿಂದ ನಾವು ಸಾಪ್ತಾಹಿಕದ ಮೂಲಕ ಜನರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ವಾಚಕರಿಗೆ ‘ಪಿ.ಡಿ.ಎಫ್.ನ ಮೂಲಕ ಸನಾತನ ಪ್ರಭಾತವನ್ನು ತಲುಪಿಸಲಾಯಿತು. ವಾಚಕರ ಒತ್ತಾಯದ ಮೇರೆಗೆ ಹಾಗೂ ಗುರುಕೃಪೆಯಿಂದ ೩ ವಾರಗಳಿಂದ ಪುನಃ ಮುದ್ರಣ ಆರಂಭವಾಗಿದೆ. ಕೊರೋನಾದ ಸಂಸರ್ಗದ ಅಪಾಯವಿದ್ದರೂ ವಿತರಕರು ವಿತರಣೆಯ ಸೇವೆಯನ್ನು ಪುನಃ ಆರಂಭಿಸಿದ್ದಾರೆ. ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಹಾಗೂ ಸಮಾಜದಲ್ಲಿ ಅಲೆದಾಡುವಾಗ ಉಂಟಾಗುವ ಎಲ್ಲ ಅಪಾಯಗಳನ್ನು ಸ್ವೀಕರಿಸಿ ಸಾಧಕರು ಮಾಡುವ ಸೇವೆಯು ನಿಜವಾಗಿಯೂ ಶ್ಲಾಘನೀಯವಾಗಿದೆ ! ‘ಸಂಕಟಕಾಲದಲ್ಲಿ ಜನಸಾಮಾನ್ಯರಿಗೆ ಆಧಾರವೆನಿಸಿತು, ಎಂಬುದು ಸನಾತನ ಪ್ರಭಾತಕ್ಕೆ ದೊಡ್ಡ ಗೌರವದ ವಿಷಯವಾಗಿದೆ ! ಅನೇಕ ಸಂತರು ಹೇಳಿರುವಂತೆಯೇ ಇದು ಮುಂಬರುವ ಭೀಕರ ಆಪತ್ಕಾಲದ ಕೇವಲ ಒಂದು ತುಣುಕಾಗಿದೆ. ಕೇವಲ ಕೊರೋನಾದ ಕಾಲದಲ್ಲಿ ಮಾತ್ರವಲ್ಲ, ಮುಂಬರುವ ಆಪತ್ಕಾಲದಲ್ಲಿಯೂ ಈಶ್ವರನ ಕೃಪೆಯಿಂದ ಹಾಗೂ ಸಂತರ ಆಶೀರ್ವಾದದಿಂದ ಹಾಗೆಯೇ ಸಮಾಜಸಹಾಯ ಮಾಡಲು ಕ್ರಿಯಾಶೀಲರಾಗಿರೋಣ ! ಸಂಕಟಕಾಲದಲ್ಲಿ ಸಕ್ರಿಯವಿರುವುದು ಸುಲಭವಲ್ಲ; ಆದರೆ ಹಿಂದೂ ರಾಷ್ಟ್ರದ ಮಂಗಲಮಯ ಪ್ರಾತಃಕಾಲವನ್ನು ನೋಡಲು ನಮಗೆ ಈ ಸಂಘರ್ಷವನ್ನು ಮಾಡಬೇಕಾಗುವುದು ! ಸುರಾಜ್ಯದೆಡೆ ಒಯ್ಯುವ ಈ ಸಂಘರ್ಷದಲ್ಲಿ ವಾಚಕರೂ ಸಹಾಯ ಮಾಡುವರು, ಎಂಬುದರಲ್ಲಿ ಸಂಶಯವಿಲ್ಲ !