ಲೋಕಮಾನ್ಯ ತಿಲಕರು ತಮ್ಮ ಪತ್ರಿಕಾರಂಗದಿಂದ ‘ಪತ್ರಿಕಾರಂಗವು ಸಮಾಜ, ರಾಷ್ಟ್ರ ಹಾಗೂ ಧರ್ಮಕ್ಕೆ ಸಮರ್ಪಣಾಭಾವದಿಂದ ಮಾಡಿರುವ ತಪಸ್ಸಾಗಿದೆ ಎಂಬ ಸಂದೇಶವನ್ನು ನೀಡಿದ್ದರು. ಇಂದು ಸಮಾಜದಲ್ಲಿ ಎಲ್ಲಿ ರಾಷ್ಟ್ರ ನಿಷ್ಠೆ ಹಾಗೂ ಧರ್ಮಪ್ರೇಮವು ಕ್ಷೀಣಿಸುತ್ತಿದೆಯೋ, ಇಂತಹ ಸ್ಥಿತಿಯಲ್ಲಿ ಲೋಕಮಾನ್ಯ ತಿಲಕರ ಆದರ್ಶಗಳಿಗನುಸಾರ ಪತ್ರಿಕೆಯನ್ನು ನಡೆಸುವುದು ಆವಶ್ಯಕವಾಗಿದೆ. ದೌರ್ಭಾಗ್ಯದಿಂದ ಇಂದು ಈ ಪತ್ರಿಕೋದ್ಯಮವನ್ನು ಹಣಸಂಪಾದನೆಗಾಗಿ ನಡೆಸಲಾಗುತ್ತಿದೆ. ಸತ್ಯ ವಾರ್ತೆಯನ್ನು ಪ್ರಕಟಿಸಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಸಮಾಜದ ಮನಸ್ಸನ್ನು ಜಾಗೃತಗೊಳಿಸುವ ಪತ್ರಿಕೆಗಳು ಇಂದು ಕೈಬೆರಳೆಣಿಕೆಯಷ್ಟೇ ಉಳಿದಿವೆ. ರಾಷ್ಟ್ರ ರಕ್ಷಣೆ ಮತ್ತು ಧರ್ಮ ಜಾಗೃತಿಯ ವ್ರತದೊಂದಿಗೆ ಆದರ್ಶ ಪತ್ರಿಕಾರಂಗದಲ್ಲಿ ಮುಂಚೂಣಿಯಲ್ಲಿರುವ ಸನಾತನ ಪ್ರಭಾತದ ಹೆಸರು ಈ ಶ್ರೇಣಿಯಲ್ಲಿ ಎಲ್ಲಕ್ಕಿಂತ ಮೇಲಿದೆ.
‘ಸನಾತನ ಪ್ರಭಾತದ ಅನೇಕ ಓದುಗರು ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಮತ್ತು ಪರಿಚಿತರಿಗೆ ಈ ಪತ್ರಿಕೆಯ ಮಹತ್ವವನ್ನು ಹೇಳಿ ಅವರನ್ನು ಓದುಗರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಓದುಗರು ಸನಾತನ ಪ್ರಭಾತಕ್ಕೆ ಹೊಸ ಓದುಗರನ್ನು ಸೇರಿಸಲು ಏನಾದರೂ ವಿಶೇಷ ಪ್ರಯತ್ನಗಳನ್ನು ಮಾಡಿದ್ದರೆ ಅಥವಾ ಈ ವರ್ತಮಾನ ಪತ್ರಿಕೆಯ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಅವರಿಗೆ ವಿಶೇಷ ಏನಾದರೂ ಹೊಸ ಯೋಜನೆ ಹೊಳೆದಿದ್ದರೆ, ಅದನ್ನು ನಮಗೆ [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಿರಿ (೨೧.೪.೨೦೧೯)
– (ಶ್ರೀಸತ್‌ಶಕ್ತಿ) (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ