ನಿಮ್ಮೆಲ್ಲರಿಗೆ ಜಗನ್ಮಾತೆಯು ದಿವ್ಯ ಪ್ರೇಮವನ್ನು ಕರುಣಿಸಲಿ

ಸ್ವಾಮಿ ವಿನಾಯಕನಂದ

ಅಥರ್ವವೇದದಲ್ಲಿ ಒಂದು ಶ್ಲೋಕವಿದೆ

ಹೃದಯಂ ಸಾಮ್ಮನಸ್ಯಮವಿದ್ವೇಷಂ ಕೃಣೋಮಿ ವಃ |

ಅನ್ಯೋ ಅನ್ಯಮಭಿಹರ್ಯತ ವತ್ಸಂ ಜಾತಮಿವಾರ್ಘ್ಯ || (೨-೫೦-೧)

ನಾನು ನಿಮಗಾಗಿ ಸಮಾನ ಹೃದಯ, ಸಮಾನ ಮನ ಉಂಟಾಗುವ ಹಾಗೂ ದ್ವೇಷದಿಂದ ಸರ್ವಥಾ ದೂರವಾಗುವ ಮರ್ಯಾದೆಯನ್ನು ರೂಪಿಸುತ್ತೇನೆ. ನೀವು ಒಬ್ಬರನ್ನೊಬ್ಬರು ಸಂಜಾತ ಕರುವನ್ನು ಹಸು ಪ್ರೀತಿಸುವಂತೆ ಪ್ರೀತಿಸಿ !

ಎಷ್ಟು ಸುಂದರ ಉಪಮೆ. ಎಷ್ಟು ಉಚ್ಚ ಆದರ್ಶ. ಯಾವುದೇ ಹಸು ತನ್ನ ಕರುವಿನಿಂದ ಸ್ವಾರ್ಥವನ್ನು ಬಯಸುವುದಿಲ್ಲ. ಪೂರ್ಣ ಸಮರ್ಪಿತವಾಗಿದ್ದು ತನ್ನ ಕರುವನ್ನು ಬೆಳೆಸುತ್ತಾ ಅಗಾಧ ಪ್ರೀತಿಯನ್ನು ಸಮರ್ಪಿಸುತ್ತದೆ. ತಾನು ಮುದಿಯಾದ ಮೇಲೆ ಕರು ದೊಡ್ಡದಾಗಿ ತನ್ನ ಸೇವೆ ಮಾಡಬೇಕೆಂಬ ಬಯಕೆಯೂ ಇಲ್ಲ. ಈಗ ಅದು ನನ್ನನ್ನು ಪ್ರೀತಿಸಬೇಕೆಂಬ ಹಂಬಲವೂ ಇಲ್ಲ. ಭಗವಂತನಲ್ಲಿ ಮತ್ತು ಜೀವರಾಶಿಗಳಲ್ಲಿ ನಿಮ್ಮೆಲ್ಲ ಜಗನ್ಮಾತೆ ಆ ದಿವ್ಯ ಪ್ರೇಮವನ್ನು ಕರುಣಿಸಲಿ. ಹಿಂದೂ ಧರ್ಮದ ಸಾರವಿದು. ಹಿಂದೂ ಧರ್ಮ ಬೆಳಗಲಿ.

ಸನಾತನ ಪ್ರಭಾತದ ವಾರ್ಷಿಕ ವರ್ಧಂತಿಯ ಶುಭ ಸಂದರ್ಭದಲ್ಲಿ ಎಲ್ಲ ಭಕ್ತ ವೃಂದದವರಿಗೆ ನನ್ನ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಸಪ್ರೇಮ ಆಶೀರ್ವಾದಗಳೊಂದಿಗೆ – ಸ್ವಾಮಿ ವಿನಾಯಕನಂದ, ಬೈಲೂರು ಮಠ.