ವಾಚಕರ ದೃಷ್ಟಿಯಿಂದ ಸನಾತನ ಪ್ರಭಾತದ ಗುಣವೈಶಿಷ್ಟ್ಯ

ವಾಚಕರ ಅಭಿಪ್ರಾಯ

ಸತ್ಯನಿಷ್ಠ ಹಾಗೂ ಪ್ರಾಮಾಣಿಕ ಪತ್ರಿಕೆ

ಸನಾತನ ಪ್ರಭಾತದಲ್ಲಿ ಬರುವ ವಿಷಯಗಳು ಸತ್ಯನಿಷ್ಠ ಹಾಗೂ ಪ್ರಾಮಾಣಿಕವಾಗಿರುತ್ತದೆ. ಪ್ರತಿ ವಿಷಯದ ವಿವರಣೆಗಳು ಅರ್ಥಪೂರ್ಣವೂ ಸ್ಪಷ್ಟವಾಗಿಯೂ ಧಾರ್ಮಿಕವೂ ಆಗಿರುತ್ತವೆ. ಆಧ್ಯಾತ್ಮಿಕವಾಗಿ ಜ್ಞಾನದ ಕನ್ನಡಿಯಂತಿದೆ ಸನಾತನ ಪತ್ರಿಕೆ. ಪ್ರಸ್ತುತ ಕಾಲಕ್ಕೆ ಹಿಂದೂ ಧರ್ಮಕ್ಕೆ ಮೇಲಾಗುತ್ತಿರುವ ಅನ್ಯಾಯ ಮತ್ತು ಅದರ ಪರಿಹಾರಕ್ಕೆ ಭಾರತವು ಹಿಂದೂ ರಾಷ್ಟ್ರವಾಗಲು ನ್ಯಾಯ ದೇವತೆಯ ಕೈಯಲ್ಲಿರುವ ಶಾಸನ, ಸಂವಿಧಾನದಂತಿದೆ ಸನಾತನ ಪತ್ರಿಕೆ. ಧೈರ್ಯ, ಸತ್ಯ, ಸಂಸ್ಕಾರ, ಕೃತಜ್ಞತಾಭಾವ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸೇವೆ ಇವೆಲ್ಲವುಗಳ ಸಮ್ಮಿಲನತೆಗೆ ಮತ್ತೊಂದು ಹೆಸರು ಸನಾತನ ಪತ್ರಿಕೆ. – ಶ್ರೀ. ದೇವಿಪ್ರಸಾದ, ಎಡಪದವು, ಮಂಗಳೂರು.

ನೈಜ ಮತ್ತು ಆವಶ್ಯಕವಿರುವಂತಹ ವಾರ್ತೆಗಳನ್ನು ನೀಡುವ ಸುಂದರ ಪತ್ರಿಕೆ

ಇತ್ತೀಚಿನ ವಾರ್ತೆಗಳು, ನೈಜ ವಾರ್ತೆಗಳು ಇರುತ್ತದೆ. ಸರಿಯಾದ ಮಾಹಿತಿ ಇರುತ್ತದೆ. ಆವಶ್ಯಕವಿರುವ ಮತ್ತು ಚೆನ್ನಾಗಿರುವ ವಾರ್ತೆಗಳು ಸಿಗುತ್ತದೆ. ಯೋಗಾಸನ, ಆಯುರ್ವೇದ ಇವುಗಳ ಮಾರ್ಗಸೂಚಿಗಳು ಇದ್ದು ಪೂರಕ ಆಗಿದೆ. ಆಸಕ್ತಿದಾಯಕವಾಗಿದ್ದು ಯಾವಾಗ ಸನಾತನ ಪ್ರಭಾತ ಪತ್ರಿಕೆ ಬರುತ್ತದೆಯೋ ಅಂತ ಕಾಯುತ್ತಾ ಇರುತ್ತೇವೆ. –  ಶ್ರೀ. ಸತ್ಯನಾರಾಯಣ ಶೆಟ್ಟಿ, ತುಮಕೂರು.

ವಿಚಾರ ಮತ್ತು ವಿಷಯಗಳಿಂದ ಎಲ್ಲ ವಯೋಮಾನದವರನ್ನು ಆಕರ್ಷಿಸುವ ಸನಾತನ ಪ್ರಭಾತ

ಲಾಕ್ ಡೌನ್ ನಂತರ ಪುನಃ ಪತ್ರಿಕೆಯು ಬರತೊಡಗಿದಾಗ ತುಂಬಾ ಒಳ್ಳೆಯದೆನಿಸಿತು. ಪತ್ರಿಕೆ ಓದಲು ಪ್ರಾರಂಭ ಮಾಡಿದಾಗ ನಿಲ್ಲಿಸುವುದು ಬೇಡ ಅನಿಸಿ ಪೂರ್ಣ ಓದುತ್ತಾ ಇದ್ದೆ. ಆಗ ಮಗಳು ಎಷ್ಟು ಹೊತ್ತು ಓದುತ್ತಿ, ಓದಿದ್ದು, ಸಾಕು ಬೇರೆ ಏನಾದರೂ ಓದು ಎಂದು ಹೇಳಿದಳು. ಅನಂತರ ಅವಳು ಸ್ವತಃ ಪತ್ರಿಕೆಯನ್ನು ತೆಗೆದುಕೊಂಡು ೨೦ ನಿಮಿಷದ ಕಾಲ ಓದಿದಳು. ಇದನ್ನು ನೋಡಿ ಮನಸ್ಸಿಗೆ ತುಂಬಾ ಆನಂದ ಅನಿಸಿತು. – ಸೌ. ಅನ್ನಪೂರ್ಣಾ, ಹಿರೇಕೆರೂರು.

ಧರ್ಮದ ಉಳಿವಿಗಾಗಿ ಪ್ರಯತ್ನಿಸುತ್ತಿರುವ ಸನಾತನ ಪ್ರಭಾತ

ಸನಾತನ ಪ್ರಭಾತ ಪತ್ರಿಕೆಯು ನಮ್ಮ ಮನೆಗೆ ೩ ವರ್ಷದಿಂದ ಬರುತ್ತಿದೆ. ಈ ಪತ್ರಿಕೆಯಿಂದ ಬಹಳ ವಿಷಯವನ್ನು ನಮ್ಮ ಕುಟುಂಬದವರು ತಿಳಿದುಕೊಂಡಿದ್ದೇವೆ. ಅಷ್ಟು ಮಾತ್ರವಲ್ಲ, ಸನಾತನ ಸಂಸ್ಥೆಯ ಉತ್ಪಾದನೆಗಳ ಮಾಹಿತಿಯನ್ನು ಪಡೆದು ಈಗ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳನ್ನೇ ನಮ್ಮ ಮನೆಯಲ್ಲಿ ಉಪಯೋಗಿಸುತ್ತಿದ್ದೇವೆ. ಇದರಿಂದ ನಮ್ಮ ಪ್ರಾಚೀನ ಸಂಸ್ಕಾರಕ್ಕೆ ಹೋಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಸನಾತನ ಪತ್ರಿಕೆಯಲ್ಲಿ ಬರುವ ಒಂದೊಂದು ಮಾತು ಸಹ ನಮ್ಮನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ಪತ್ರಿಕೆಯಿಂದ ನಮ್ಮ ಹಿಂದೂಧರ್ಮದ ಸಂಸ್ಕಾರಗಳ ಹಿಂದಿರುವ ಮಹತ್ವದ ಬಗ್ಗೆ ತಿಳಿಯಲು ಸಾಧ್ಯವಾಗಿದೆ, ನಾವು ಆರಾಧಿಸುವ ದೇವಾನುದೇವತೆಗಳ ಬಗ್ಗೆ, ಪಿತೃಗಳ ಇರುವಿಕೆಯ ಬಗ್ಗೆ, ಪಿತೃಪಕ್ಷದ ಬಗ್ಗೆ ನಮಗೆ ಸರಿಯಾದ ಮಾಹಿತಿ ದೊರೆಯುತ್ತಿರುವುದು ನಮ್ಮ ಪುಣ್ಯವೆಂದು ಭಾವಿಸುತ್ತೇನೆ. ಈ ಒಂದು ಪರಿಸ್ಥಿತಿಯಲ್ಲಿ ನನ್ನ ಧರ್ಮವನ್ನು ಉಳಿಸಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಕೋಟಿ ಕೋಟಿ ನಮನಗಳನ್ನು ತಿಳಿಸುತ್ತಿದ್ದೇನೆ. ಧನ್ಯವಾದಗಳು. – ಶ್ರೀ. ಗಿರೀಶ ಬಾಬು.

ಮುಂದಿನ ಪೀಳಿಗೆಯನ್ನು ಸುಸಂಸ್ಕರಿತಗೊಳಿಸುವ ಪತ್ರಿಕೆ

ಸನಾತನ ಪ್ರಭಾತವು ತುಂಬಾ ಒಳ್ಳೆಯ ಪತ್ರಿಕೆಯಾಗಿದೆ, ನಮ್ಮ ಮುಂದಿನ ಪೀಳಿಗೆಗೆ ಅಂದರೆ ಮಕ್ಕಳಿಗೂ ಸಹ ಇದರ ಮಾಹಿತಿ ಸಿಗಬೇಕೆಂದು ಚಂದಾವನ್ನು ಮಾಡಿದೆ. ಅವರಿಗೂ ಇದನ್ನು ಓದಿ ನಮ್ಮ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಬಗ್ಗೆ ತಿಳಿಯಬೇಕು ಎಂಬ ಉದ್ದೇಶ ನನ್ನಲ್ಲಿತ್ತು. ನನ್ನ ಮಕ್ಕಳು ಓದಿ ಅದರಿಂದ ತುಂಬಾ ಕಲಿತಿದ್ದಾರೆ. – ಶ್ರೀ. ಪ್ರಶಾಂತ ಆಚಾರ್ಯ, ಕಾರ್ಕಳ

ಹಿಂದೂ ಧರ್ಮವನ್ನು ಉಳಿಸಲು ಸನಾತನ ಪ್ರಭಾತ ಅತ್ಯಗತ್ಯ

ನಾನು ಸನಾತನ  ಪ್ರಭಾತ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ, ನನಗೆ ನಿಮ್ಮ ಪತ್ರಿಕೆ ತುಂಬಾ ಅಚ್ಚುಮೆಚ್ಚಾಗಿದೆ.  ‘ಧರ್ಮೋ ರಕ್ಷತಿ ರಕ್ಷಿತಃ ಎಂದೂ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾರೆ ನಿಮ್ಮ ಪತ್ರಿಕೆ ಧರ್ಮ ಮತ್ತು ರಾಷ್ಟ್ರ ರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನ ತುಂಬಾ ದೊಡ್ಡದು. ಹಿಂದೂಗಳು ಎಚ್ಚೆತ್ತುಕೊಂಡು ನಮ್ಮ ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕೆಂದರೆ ಇಂತಹ ಪತ್ರಿಕೆಗಳ ಅವಶ್ಯಕತೆ ತುಂಬಾ ಇದೆ.  ಈ ಹಾದಿಯಲ್ಲಿ ನಿಮ್ಮ ಪತ್ರಿಕೆ ನೀಡುತ್ತಿರುವ ಬೆಂಬಲ ಹರ್ಷನೀಯ. ಈ ಪತ್ರಿಕೆಯ ಮೂಲಕ ನಾನು ತುಂಬಾ ವಿಷಯಗಳನ್ನು ಅರಿತುಕೊಂಡಿದ್ದೇನೆ. ನಮ್ಮ ದೂರದರ್ಶನಗಳಲ್ಲಿ ತೋರಿಸುವ ವಾರ್ತೆಗಳು ಇನ್ನೊಂದು ಮುಖ, ನಿಮ್ಮ ಪತ್ರಿಕೆಯಲ್ಲಿ ಎಷ್ಟೋ ಪಾರದರ್ಶಕವಾಗಿ ವಿವರಿಸಿದ್ದೀರಿ. ಅದು ತುಂಬಾ ಶ್ಲಾಘನೀಯ. ಹಿಂದೂಗಳಿಗೆ ಈ ಪತ್ರಿಕೆ ಒಂದು ದೊಡ್ಡ ವರವೇ ಆಗಿದೆ. ಈ ಪತ್ರಿಕೆಯನ್ನು ಓದುವುದರಿಂದ ನನಗೆ ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಶಾಸ್ತ್ರದ ಅರಿವು ಲಭಿಸಿದೆ. ಇದಕ್ಕೆ ನಾನು ನಿಮಗೆ ಚಿರಋಣಿ. ಶ್ರೀ ಗುರುದೇವದತ್ತ ನಾಮಸ್ಮರಣೆಯ ಮಹತ್ವವನ್ನು ನಾನು ನಿಮ್ಮ ಪತ್ರಿಕೆಯನ್ನು ಓದಿ ಅರಿತುಕೊಂಡೆ. ಇವತ್ತಿಗೂ ನನ್ನ ಕಾರಿನ ಡ್ರೈವಿಂಗ್ ಸೀಟಲ್ಲಿ ಕೂತುಕೊಂಡ ತಕ್ಷಣ ನನಗರಿಯದೆ ನನ್ನ ಒಳಗಡೆ ದತ್ತ ಜಪ ಪ್ರಾರಂಭವಾಗುತ್ತದೆ. ನನ್ನಲ್ಲಿ ಅರಿವನ್ನು ಮೂಡಿಸಿದ ನಿಮ್ಮ ಪತ್ರಿಕೆಗೆ ನನ್ನ ಕೃತಜ್ಞತೆಗಳು. ಇಂತಹ ಸನಾತನ ಪ್ರಭಾತ ಪತ್ರಿಕೆಯ ವಾಚಕರು ನಾವು ಎಂಬ ಹೆಮ್ಮೆ ನಮಗೆ ಸದಾ ಇರುತ್ತದೆ. ವಂದನೆಗಳು. – ಶ್ರೀ. ಮಂಜುನಾಥ ಒ.ಐ. ಮತ್ತು ಸೌ. ಶಕೀಲಾ ಮಂಜುನಾಥ, ಬೆಂಗಳೂರು

ಗುರುತತ್ತ್ವದ ಅಮರಕೋಶ ನಮ್ಮ ಸನಾತನ ಪ್ರಭಾತ

ನಾನು ಸನಾತನ ಪ್ರಭಾತ ಪತ್ರಿಕೆಯ ಕಟ್ಟಾಭಿಮಾನಿಯಾಗಿದ್ದೇನೆ. ನಾನು ಸುಮಾರು ನಾಲ್ಕು ವರ್ಷಗಳಿಂದ ಪತ್ರಿಕೆಯನ್ನು ಓದುತ್ತಿದ್ದೇನೆ. ಈ ಪತ್ರಿಕೆಯನ್ನು ಒಂದು ರೀತಿಯ ಗುರುತತ್ತ್ವದ ಅಮರ ಕೋಶವೆನ್ನಬಹುದು; ಏಕೆಂದರೆ ಇದು ಬಹಳ ಉಪಯುಕ್ತ ಜ್ಞಾನವನ್ನು ಒಳಗೊಂಡಿರುತ್ತದೆ. ಹಬ್ಬಗಳ ಬಗ್ಗೆಯಾಗಲಿ, ವೇದ ಉಪನಿಷತ್ತುಗಳ ಬಗ್ಗೆ, ಆಪತ್ಕಾಲದಲ್ಲಿ ತೆಗೆದುಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಇರಬಹುದು, ದೇಶಭಕ್ತರ ಬಗ್ಗೆ, (ಉದಾ : ಸ್ವಾಮಿ ವಿವೇಕಾನಂದರು, ಶಿವಾಜಿ ಮಹಾರಾಜರು) ಹಾಗೆಯೇ  ಪುರಾಣ ಪುರುಷರು, ಆದರ್ಶ ಪುರುಷರ ಇತಿಹಾಸದ ಬಗ್ಗೆ  ಮಾಹಿತಿಯನ್ನು ನೀಡುತ್ತದೆ. ಮಕ್ಕಳಿಗಾಗಿ, ಮಹಾಮಹಿಮರ ಜೀವನ ದರ್ಶನ, ಪರೀಕ್ಷಾ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಪ್ರಥಮ ಚಿಕಿತ್ಸೆ ವಿಧಾನ, ನೈಸರ್ಗಿಕ ಅಪತ್ತನ್ನು ಧೈರ್ಯದಿಂದ ಎದುರಿಸುವ ವಿಧಾನದ ಬಗ್ಗೆ ತಿಳಿಸುತ್ತದೆ. ಆರೋಗ್ಯ ರಕ್ಷಣೆ ವನಸ್ಪತಿಗಳ ಬಗ್ಗೆ, ಯಜ್ಞ ಮತ್ತು ಅಗ್ನಿಹೋತ್ರದಿಂದಾಗುವ ಪ್ರಯೋಜನವು ಸಂಕ್ಷಿಪ್ತವಾಗಿ ದೊರೆಯುತ್ತದೆ. ಒಟ್ಟಾರೆ ಹೇಳುವುದಾದರೆ ವರ್ತಮಾನಕಾಲದಲ್ಲಿ ಸರಳವಾಗಿ ಸಾಧನೆ ಮಾಡಲು ಗುರುವಿನಂತೆ ಮಾರ್ಗದರ್ಶನ ನೀಡುವ ಏಕೈಕ ಮಾಧ್ಯಮವಾಗಿದೆ. ಸನಾತನ ಪರಿವಾರಕ್ಕೆ ನನ್ನ ಪ್ರಣಾಮಗಳು.  – ಶ್ರೀಮತಿ ರುಕ್ಮಿಣಿ, ಬೆಂಗಳೂರು.

ಹಬ್ಬ ಆಚರಣೆಗಳ ಬಗ್ಗೆ ಉಪಯುಕ್ತ ಮಾಹಿತಿ ಸಿಗುತ್ತದೆ

ನಾನು ೩ ವರ್ಷಗಳಿಂದ ಸನಾತನ ಪ್ರಭಾತದ ಚಂದಾದಾರಳಾಗಿದ್ದೇನೆ. ನಮ್ಮ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಬಗ್ಗೆ ತಿಳಿಯಲು ಇದು ನಮಗೆ ತುಂಬಾ ಉಪಯುಕ್ತವಾಗಿದೆ. ನಮ್ಮ ಹಬ್ಬಗಳು, ಆಚರಣೆಗಳು ಮತ್ತು ವಿಜ್ಞಾನದ ಬಗ್ಗೆ ಇದು ಅನೇಕ ಉಪಯುಕ್ತ ಮಾಹಿತಿಯನ್ನು ಹೊಂದಿದೆ. -ಶ್ರೀಮತಿ ಪ್ರೀತಿ. ಬೆಂಗಳೂರು.

ಧರ್ಮಹಾನಿಯ ಬಗ್ಗೆ ಕ್ಷಾತ್ರವೃತ್ತಿಯನ್ನು ಹೆಚ್ಚಿಸುವ ಪತ್ರಿಕೆ

ನಾನು ಒಮ್ಮೆ ಸನಾತನ ಪ್ರಭಾತ ಪತ್ರಿಕೆಯನ್ನು ಸಮಾಜದಲ್ಲಿ ವಿತರಣೆ ಮಾಡುತ್ತಿದ್ದೆ. ಆಗ ಸಮಾಜದ ವ್ಯಕ್ತಿಯೊಬ್ಬರು ಹಿಂದೂ ಧರ್ಮದ ಸಂತರ ಬಗ್ಗೆ ತುಚ್ಚವಾಗಿ ಮಾತನಾಡಿದರು. ಆಗ ಅವರಿಗೆ ನಾನು ಸಂತರೆಂದರೆ ಭಗವಂತನ ಸಗುಣ ರೂಪ ಮತ್ತು ಸಂತರೆಂದರೆ ಯಾವ ಸ್ಥಿತಿಯಲ್ಲಿರುತ್ತಾರೆ ಇದನ್ನೆಲ್ಲ ಹೇಳಿದಾಗ ಅವರು ಸುಮ್ಮನಾದರು. ನನಗೆ ನಮ್ಮ ಧರ್ಮದ ಬಗ್ಗೆ, ಸಂತರ ಬಗ್ಗೆ ಇಷ್ಟು ಸ್ಪಷ್ಟವಾಗಿ ಹೇಳಲು ಸನಾತನ ಪ್ರಭಾತವೇ ಕಾರಣ ಎಂದು ಹೇಳಲು ಬಹಳ ಸಂತೋಷವಾಗುತ್ತದೆ. – ಸೌ. ಗೀತಾಂಜಲಿ ಕಡಿವಾಲ

ಧರ್ಮಾಚರಣೆಯ ಮಾರ್ಗದರ್ಶಕ

ಸನಾತನ ಪ್ರಭಾತವು ಹಿಂದೂ ಧರ್ಮದ ಆಚರಣೆಯ ಬಗ್ಗೆ ಉತ್ತಮ ರೀತಿಯ ಮಾರ್ಗದರ್ಶನ ಮತ್ತು ಆದರ್ಶವನ್ನು ನೀಡುತ್ತಿದೆ. ಧರ್ಮದ ಮೇಲಾಗುತ್ತಿರುವ ಆಘಾತಗಳನ್ನು ಖಂಡಿಸುವ ಮತ್ತು ಅವಮಾನದ ಪ್ರಕರಣಗಳನ್ನು ಖಂಡಿಸಿ ಸಮಾಜಕ್ಕೆ ಬೋಧನೆಯ ಮಾಹಿತಿಯನ್ನು ನೀಡುತ್ತಿರುವ ಏಕೈಕ ಪತ್ರಿಕೆ ಸನಾತನ ಪ್ರಭಾತ. ಈ ಪತ್ರಿಕೆಯನ್ನು ಓದುವುದರಿಂದ ನಮ್ಮ ಮನಸ್ಸಿನ ಭಾವನೆಗೆ ಒಳ್ಳೆಯ ಚಿಂತನೆಯಾಗುತ್ತದೆ, ದೇವರ ಸೇವೆಯನ್ನು ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಪತ್ರಿಕೆ ಇದಾಗಿದೆ. ಇದರಿಂದ ಒಳ್ಳೆಯ ಅನುಭೂತಿ ಮತ್ತು ಜ್ಞಾನ ಸಿಗುತ್ತದೆ. – ಶ್ರೀ. ಆನಂದ, ಶಿವಮೊಗ್ಗ

ಧರ್ಮಪ್ರೇಮಿಗಳ ಮಾರ್ಗದರ್ಶಕ ಸನಾತನ ಪ್ರಭಾತ

ಇದು ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ, ಧರ್ಮಾಭಿಮಾನ ಮೂಡಿಸುವ ಒಳ್ಳೆಯ ರೀತಿಯ  ಕಾರ್ಯ ಮಾಡುತ್ತಿದೆ ಹಬ್ಬ ಹರಿದಿನಗಳನ್ನು ಅತ್ಯಂತ ಸೂಕ್ತ ರೀತಿ ಆಚರಣೆ ಮಾಡುವ ಬಗ್ಗೆ ತಿಳಿಸಿದೆ ಮತ್ತು ಈ ಪತ್ರಿಕೆ ನಮ್ಮಂತಹ ಧರ್ಮಪ್ರೇಮಿಗಳಿಗೆಲ್ಲ ಯೋಗ್ಯವಾದ ಮಾರ್ಗದರ್ಶನ ನೀಡಿ ರಾಷ್ಟ್ರಾಭಿಮಾನ  ಹೆಚ್ಚಿಸಿಕೊಳ್ಳುವ  ದಿಶೆಯನ್ನು ಕಾಳಜಿ ಪೂರ್ವಕ ನೀಡುತ್ತಿದೆ ಈ ಪತ್ರಿಕೆಗೆ ಹೃತ್ಪೂರ್ವಕ  ಧನ್ಯವಾದಗಳು – ಶ್ರೀ.  ಪುರುಷೋತ್ತಮ್ ಜಿಬಿ, ವಾಚಕರು, ಬೆಂಗಳೂರು

ಲಾಕ್ ಡೌನ್ ನಂತರ ಪತ್ರಿಕೆ ಮನೆಗೆ ಬಂದಾಗ ಭಾವಜಾಗೃತಿಯಾಗುವುದು

ಲಾಕ್‌ಡೌನ್ ನಂತರ ನನ್ನ ವಿಳಾಸವು ಬದಲಾದ ಕಾರಣ ನನಗೆ ಪತ್ರಿಕೆ ಸಿಕ್ಕಿರಲಿಲ್ಲ. ಆದರೆ ಮೊನ್ನೆ ಒಂದು ಪತ್ರಿಕೆಯು ನಾನಿರುವ ಸ್ಥಳಕ್ಕೆ ಬಂದಿತ್ತು. ನಮ್ಮ ಯಜಮಾನರು ನನಗೆ ಪತ್ರಿಕೆಯನ್ನು ತಂದು ಕೈಯಲ್ಲಿ ಕೊಟ್ಟರು. ತುಂಬಾ ದಿನದ ನಂತರ ಪತ್ರಿಕೆಯು ಸಿಕ್ಕಿದುದರಿಂದ ಅದನ್ನು ನೋಡುತ್ತಿದ್ದಂತೆ. ಭಾವಜಾಗೃತಿಯಾಗಿ ಕಣ್ಣುಗಳಲ್ಲಿ ನೀರು ಬರಲು ಪ್ರಾರಂಭವಾಯಿತು. ಪತ್ರಿಕೆ ಬಿಡಿಸಿ ಓದಲು ಪುಟ ತೆರೆದ ತಕ್ಷಣ ಮೊದಲು ಒಳಗಡೆ ಪಂಚತಾರಾ ಉಪಹಾರಗೃಹದಲ್ಲಿ ತಯಾರಾಗುವ ಮತ್ತು ರಾಮನಾಥಿ ಆಶ್ರಮದಲ್ಲಿ ತಯಾರಾಗುವ ಆಹಾರದ ವ್ಯತ್ಯಾಸವನ್ನು ಕೊಟ್ಟಿದ್ದ ವಿಷಯವು ಕಾಣಿಸಿತು. ನಮ್ಮದು ಸಹ ಹೊಟೇಲ್ ವ್ಯವಹಾರವಿದೆ. ಈ  ಪತ್ರಿಕೆಯಿಂದ ನಮ್ಮ ಹೊಟೇಲ್‌ನ ವಾಸ್ತುಶುದ್ಧಿ ಆಗುತ್ತಿರುವುದರ ಅರಿವಾಗುತ್ತಿದೆ. ಅಲ್ಲದೇ  ಹೊಟೇಲ್‌ನಲ್ಲಿಯೂ ಸಾತ್ತ್ವಿಕ ಆಹಾರವೇ ತಯಾರಾಗಲಿ ಎಂದು ಭಾವದಿಂದ  ಪ್ರಾರ್ಥನೆ ಆಗುತ್ತಿದೆ. ಪ್ರತಿ ಬಾರಿ ಪತ್ರಿಕೆ ಸ್ಪರ್ಶವಾದಾಗ ಭಾವಜಾಗೃತಿ ಮತ್ತು ಉಪಾಯ ಆಗುತ್ತಿದೆ.  ಪತ್ರಿಕೆ ಎಂದಾಗ ಕಾಗದಗಳ ಮೇಲೆ ಮುದ್ರಿಸಿದ ಒಂದು ನಿರ್ಜೀವವಸ್ತು ಎಂದು ಅನಿಸುತ್ತದೆ. ಆದರೆ ಸನಾತನ ಪ್ರಭಾತ ಪತ್ರಿಕೆಯು ನಿರ್ಜೀವ ಪತ್ರಿಕೆಯಲ್ಲ, ಜೀವಂತಿಕೆಯ ಪ್ರತಿರೂಪವಾಗಿದೆ. ಇದಕ್ಕಾಗಿ ತುಂಬಾ ಕೃತಜ್ಞತೆ ಅನಿಸುತ್ತದೆ. – ಸೌ. ತಾರಾ ಶೆಟ್ಟಿ, ಧಾರವಾಡ.

ಶಾರೀರಿಕವಾಗಿ ಚೈತನ್ಯ ಪೂರೈಸುವ ಸನಾತನ ಪ್ರಭಾತ

ನನಗೆ ಒಮ್ಮೆ ಜ್ವರ ಬಂದು ತುಂಬಾ ಆಯಾಸ ಆಗಿತ್ತು, ಆಯಾಸ ನಿವಾರಣೆಯಾಗಬೇಕೆಂದು ಪ್ರಾರ್ಥನೆಯನ್ನು ಮಾಡಿ ಪತ್ರಿಕೆಯಿಂದ ಆವರಣ ತೆಗೆದು ಪತ್ರಿಕೆಯನ್ನು ಓದಲು ಪ್ರಾರಂಭಿಸಿದೆ. ಆಯಾಸವಿದ್ದ ಕಾರಣ ಮೊದಲಿಗೆ ಪತ್ರಿಕೆ ಓದಲು ಆಗುವುದಿಲ್ಲ ಎಂದು ನನಗೆ ಅನಿಸುತ್ತಿತ್ತು. ಪುನಃ ಓದುತ್ತಾ ಹೋದಂತೆ ಪೂರ್ಣ ಓದಲು ಆಯಿತು ಮತ್ತು ಶರೀರದ ಆಯಾಸವು ಯಾವಾಗ ಕಡಿಮೆ ಆಯಿತು ಎಂದೇ ತಿಳಿಯಲಿಲ್ಲ. ಇದರಿಂದ ಮನಸ್ಸಿಗೆ ಉಲ್ಲಾಸವೆನಿಸಿತು. ಸನಾತನ ಪ್ರಭಾತದ ಮಾಧ್ಯಮದಿಂದ ಅಧ್ಯಾತ್ಮದ ಜ್ಞಾನದೊಂದಿಗೆ ಚೈತನ್ಯವನ್ನು ನೀಡುತ್ತಿರುವ ಗುರುದೇವರ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆಗಳು. – ಸೌ. ನಾಗವೇಣಿ, ಕಲ್ಲಿಹಾಳ್, ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ

ಮಕ್ಕಳಿಗೆ ಬರುತ್ತಿದ್ದ ದುಃಸ್ವಪ್ನ ದೂರವಾಗುವುದು

(ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಚಂದಾ ನವೀಕರಣ ಮಾಡಲು ಕೇಳಿದಾಗ ಈಗ ಬೇಡ ಎಂದು ತಿಳಿಸಿದ್ದರು. ನಂತರ ಪುನಃ ಸಂಕ್ರಾಂತಿ ಸಂದರ್ಭದಲ್ಲಿ ಅವರನ್ನು ಭೇಟಿಯಾದಾಗ ಅವರು ಒಂದು ತಮಗಾದ ಅನುಭವವನ್ನು ಪತ್ರಿಕೆಯ ಪ್ರತಿನಿಧಿಯೊಂದಿಗೆ ವ್ಯಕ್ತಪಡಿಸಿದರು.)

ನಮ್ಮ ಮನೆಯಲ್ಲಿ ಸನಾತನ ಪ್ರಭಾತವನ್ನು ಪುನಃ ಪ್ರಾರಂಭಿಸಿ, ಏಕೆಂದರೆ ಮನೆಯಲ್ಲಿ ಏನೋ ಒಂದು ಕಳೆದುಕೊಂಡ ಹಾಗೆ ಅನಿಸುತ್ತಿದೆ, ಪತ್ರಿಕೆಯನ್ನು ನಿಲ್ಲಿಸಿದ ಸಮಯದಲ್ಲಿ ಮಕ್ಕಳಿಗೆ ದುಃಸ್ವಪ್ನಗಳು ಬೀಳುವ ಪ್ರಮಾಣವು ಹೆಚ್ಚಾಗಿತ್ತು. ಈಗ ಪುನಃ ಪತ್ರಿಕೆಯು ಮನೆಗೆ ಬರಲು ಪ್ರಾರಂಭವಾಗಿದೆ. ಇದರಿಂದ ಮಕ್ಕಳಿಗೂ ದುಃಸ್ವಪ್ನಗಳು ಬೀಳುತ್ತಿಲ್ಲ ಹಾಗೂ ಮನೆಯವರಿಗೆಲ್ಲರಿಗೂ ಒಳ್ಳೆಯದೆನಿಸುತ್ತಿದೆ. – ಶ್ರೀ. ನವೀನ್ ಕುಮಾರ್, ಮಂಗಳೂರು,

ಅಸ್ತಿತ್ವದಿಂದಲೂ ತೊಂದರೆಗಳನ್ನು ನಿವಾರಿಸುವ ಸನಾತನ ಪ್ರಭಾತ

ಮನೆಯಲ್ಲಿ ಮೊದಲು ದುಃಸ್ವಪ್ನಗಳು ಬೀಳುವುದು, ಮನೆಯವರಿಗೆಲ್ಲ ಆಗಾಗ ಅನಾರೋಗ್ಯವಾಗುವುದು ಮುಂತಾದ ತೊಂದರೆಗಳು ಆಗುತ್ತಿದ್ದವು. ಪತ್ರಿಕೆ ಪ್ರಾರಂಭವಾದ ಒಂದೇ ವಾರದಲ್ಲಿ ಅಂತಹ ತೊಂದರೆಗಳು ಕಡಿಮೆಯಾಗುತ್ತಾ ಹೋದವು. ಒಂದು ಬಾರಿ ಮೊಮ್ಮಗನು (ಎರಡು ವರ್ಷ) ರಾತ್ರಿ ಸುಮಾರು ೧೨ ಗಂಟೆ ಹೊತ್ತಿಗೆ ಜೋರಾಗಿ ಅಳಲು ಪ್ರಾರಂಭಿಸಿದನು. ಮಗುವಿಗೆ ಏನಾದರೂ ಕಚ್ಚಿರಬಹುದು ಎಂದು ಪರೀಕ್ಷಿಸಿದಾಗ ಆ ರೀತಿ ಏನು ಕಂಡು ಬರಲಿಲ್ಲ. ಆಗ ಸನಾತನ ಪ್ರಭಾತವನ್ನು ಒಂದು ಬಟ್ಟೆಯಲ್ಲಿ ಬಿಡಿಸಿ ಅದರಲ್ಲಿ ಮಗುವನ್ನು ಸುತ್ತಿದೆವು. ಒಂದೆರಡು ನಿಮಿಷಗಳಲ್ಲಿಯೇ ಮಗು ಅಳುವುದನ್ನು ನಿಲ್ಲಿಸಿತ್ತು ಮತ್ತು ತನಗೆ ಏನೂ ಆಗಲಿಲ್ಲವೆಂಬಂತೆ ವರ್ತಿಸಿತು. ದೇವರಿಗೆ ಕೃತಜ್ಞತೆಗಳು. – ನೀಲಾಕ್ಷಿ ಜಯರಾಮ್, ಯೆಯ್ಯಾಡಿ, ಮಂಗಳೂರು

ಸನಾತನ ಪ್ರಭಾತ ಓದಿದಾಗ ಜ್ವರ ಕಡಿಮೆಯಾಗುವುದು

ಒಂದು ರಾತ್ರಿ ನನಗೆ ತುಂಬಾ ಚಳಿಜ್ವರವು ಬಂದಿತ್ತು, ಆಗ ನನ್ನ ಮಗನು ನಮ್ಮ ಮನೆಯವರಿಗೆ ಗುಳಿಗೆ ತೆಗೆದುಕೊಂಡು ಬರಲು ಹೇಳಿದನು. ನಾನೂ ನಾಲ್ಕು ಚಾದರಗಳನ್ನು ಹೊದ್ದುಕೊಂಡು ಮಲಗಿದ್ದೆ. ಯಜಮಾನರಲ್ಲಿದ್ದ ಗುಳಿಗೆ ಪ್ಯಾಕೆಟ್ ಕಳೆದುಹೋಗಿತ್ತು. ಅದರೊಳಗೆ ಸನಾತನ ಪತ್ರಿಕೆಯನ್ನು ಮೊಬೈಲ್ ಟಾರ್ಚ್‌ನೊಂದಿಗೆ ೨ ಪುಟದಷ್ಟು ಓದಿದೆ, ಅದರಲ್ಲಿ ಪೂಜ್ಯನೀಯ ರಮಾನಂದ ಅಣ್ಣನವರ ತಳಮಳ, ಸಾಧಕರ ಪ್ರೇಮಭಾವದ ಬಗ್ಗೆ ಮತ್ತು ಸದ್ಗುರು ಸತ್ಯವಾನ್ ಕದಮರವರ ಬಗ್ಗೆ ಇತ್ತು. ಅದಾದ ನಂತರ ಚಳಿ ಜ್ವರವು ತುಂಬಾ ಕಡಿಮೆಯಾಗಿತ್ತು. ಇದು ಗುರುದೇವರ ಕೃಪೆಯಿಂದ ಆಗಿತ್ತು. ಗುರುಚರಣಗಳಲ್ಲಿ ಕೋಟಿ ಕೋಟಿ ಕೋಟಿ ಕೃತಜ್ಞತೆಗಳು ! – ಸೌ. ಬೇಬಿ ರುದ್ರಶೆಟ್ಟಿ, ಲಕ್ಷ್ಮೇಶ್ವರ.

ದೇವಿಯ ಕುರಿತಾದ ಮಾಹಿತಿಯನ್ನು ಓದಿ ದೇವಿಯ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದು

ಸನಾತನ ಪ್ರಭಾತ ಪತ್ರಿಕೆಯಲ್ಲಿ ರಾಮನಾಥಿ ಆಶ್ರಮಕ್ಕೆ ಹಂಗರಹಳ್ಳಿಯ ಶ್ರೀ ವಿದ್ಯಾಚೌಡೇಶ್ವರಿ ದೇವಿಯ ಆಗಮನ ಹಾಗೂ ಮಹೋತ್ಸವದ ಕುರಿತಾಗಿ ಮಾಹಿತಿಯನ್ನು ಮುದ್ರಿಸಲಾಗಿತ್ತು. ಈ ಮಾಹಿತಿಯಿರುವ ಪತ್ರಿಕೆಯನ್ನು ಓದಲು ಪ್ರಾರಂಭಿಸಿದಂತೆ ತುಂಬಾ ಚೈತನ್ಯದ ಅರಿವಾಯಿತು. ಅಲ್ಲಿ ಆದ ಪೂಜೆಯ ವಿಷಯ ಓದುವಾಗ ನಾನು ಸ್ವತಃ ರಾಮನಾಥಿ ಆಶ್ರಮದಲ್ಲಿ ಇದ್ದೇನೆ ಎಂದು ಅನಿಸುತ್ತಿತ್ತು. ಶ್ರೀ ಭವಾನಿದೇವಿಯ ಭಾವಚಿತ್ರವನ್ನು ನೋಡುವಾಗ ದೇವಿಯ ಕಣ್ಣಿನಲ್ಲಿ ಜೀವಕಳೆ ಇರುವುದು ಅನುಭವಕ್ಕೆ ಬಂತು ಮತ್ತು ಈಗಲೂ ದೇವಿಯ ಚೈತನ್ಯಮಯ ರೂಪ ಕಣ್ಣ ಮುಂದೆ ಬಂದು ಭಾವಜಾಗೃತಿ ಆಗುತ್ತದೆ. – ಸೌ. ಮೀನಾ, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಅಭಿಪ್ರಾಯಗಳು

ಮಾನಸಿಕ-ಶಾರೀರಿಕ ಶಕ್ತಿ ಪ್ರದಾನಿಸುವ ಪತ್ರಿಕೆ

ನಾನು ಸನಾತನ ಪತ್ರಿಕೆಯನ್ನು ಓದಿದ ನಂತರ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಠನಾಗಿದ್ದೇನೆ. ನನ್ನ ಕಚೇರಿಯ ಕೆಲಸವನ್ನು ಪ್ರಧಾನವಾಗಿ ಮಾಡಲು ಆಗುತ್ತಿದೆ. ಭಗವಾನ್ ಶ್ರೀಕೃಷ್ಣನ ನಾಮಜಪವು ನನಗೆ ನನ್ನ ಪ್ರತಿನಿತ್ಯ ಜೀವನದಲ್ಲಿ ಬರುವಂತಹ ಅಡಚಣೆಯನ್ನು ನಿಭಾಯಿಸಲು (ಎದುರಿಸಲು) ಸಹಾಯ ಮಾಡುತ್ತಿದೆ. ಇದು ಕೇವಲ ಸಾಧನೆಯಿಂದ ಮಾತ್ರ ಸಾಧ್ಯವಾಯಿತು. ಇನ್ನಷ್ಟು ಕೃತಿಗಳನ್ನು ಮಾಡಲಿಕ್ಕಿದೆ, ಇದರಿಂದ ನಾನು ಆಧ್ಯಾತ್ಮಿಕವಾಗಿ ಬಲಶಾಲಿ ಆಗಬಹುದು. ವಂದನೆಗಳು – ಶ್ರೀ. ಸತೀಶ್ಚಂದ್ರ, ಚಾರ್ಟೆಡ್ ಅಕೌಂಟೆಂಟ್, ಕದ್ರಿ, ಮಂಗಳೂರು.

ಮನಸ್ಸಿಗೆ ಸಮಾಧಾನ ನೀಡುವ ಸನಾತನ ಪ್ರಭಾತ

ದತ್ತಜಯಂತಿಯಿಂದ ಪತ್ರಿಕೆ ಸಿಗುತ್ತಿದೆ. ವಾಹನದಲ್ಲಿಯೂ ಪತ್ರಿಕೆಯನ್ನು ಇಟ್ಟುಕೊಂಡು ಓದುತ್ತೇನೆ. ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಮನಸ್ಸಿಗೆ ಸಮಾಧಾನ ಸಿಗುತ್ತದೆ. ಹಿಂದೆಲ್ಲ ಹಬ್ಬ ಸುಮ್ಮನೆ ಮಾಡುತ್ತಿದ್ದೆವು ಆದರೆ ಈಗ ಅದರ ಅರ್ಥ ತಿಳಿದುಕೊಂಡು ಮಾಡುತ್ತಿದ್ದೇನೆ. ಓದಿದಾಗ ಅರ್ಥ ಆಗಲಿಲ್ಲ ಅಂದ್ರೆ ಮತ್ತೆ ಮತ್ತೆ ಓದಿ ತಿಳಿದುಕೊಳ್ಳುತ್ತೇನೆ. ತುಂಬಾ ಚೆನ್ನಾಗಿದೆ. – ಶ್ರೀ. ಅಲಮೇಲು ಶ್ರೀನಿವಾಸ್

ಇತರ ಅಭಿಪ್ರಾಯಗಳು

ವಿಶೇಷವಾಗಿ ಪ್ರಚಲಿತ ಇದ್ದ ವಿಷಯವನ್ನೇ ಸ್ಪಷ್ಟ ಪಡಿಸುತ್ತೀರಿ ವಸ್ತು ಸ್ಥಿತಿ ಒಳ್ಳೆದಿದೆ. – ಶ್ರೀ. ಉ.ಖ. ಅಂಬಲಿ. ವಿಜಯಪುರ

ಒಳ್ಳೆಯ ಅಭಿಪ್ರಾಯ ಇರುತ್ತದೆ. ಪ್ರಾಚೀನ ವಿಚಾರಗಳು ಮತ್ತೆ ಜಾಗೃತವಾಗುತ್ತದೆ. – ಶ್ರೀ. ಓ.ಊ. ದೇಶಪಾಂಡೆ. ವಿಜಯಪುರ

ಅಧ್ಯಾತ್ಮದ ಬಗ್ಗೆ ಒಳ್ಳೆಯ ವಿಚಾರ ಇದೆ. ಮಲಗಿರುವ ಹಿಂದೂಗಳನ್ನು ಎಚ್ಚರಿಸಬೇಕಿದೆ. – ಶ್ರೀ. ವಿಶ್ವನಾಥ ಬಿಳಗಿ, ವಿಜಯಪುರ.