ಸನಾತನ ಪ್ರಭಾತವು ಸಾಧನೆಯ ರಹಸ್ಯವನ್ನು ಎಲ್ಲರಿಗೂ ತಿಳಿಸಿ ಉತ್ತೇಜಿಸುತ್ತಿದೆ !- ಬ್ರಹ್ಮಶ್ರೀ ಡಾ. ಉಮೇಶ ಶರ್ಮಾ ಗುರೂಜಿ

ಶ್ರೀ. ಉಮೇಶ ಶರ್ಮಾ ಗುರೂಜಿ

ಪ್ರಪ್ರಥಮವಾಗಿ ೨೩ ನೇ ವರ್ಷಕ್ಕೆ ಹೆಜ್ಜೆಯಿಡುತ್ತಿರುವ ಸನಾತನ ಪ್ರಭಾತ ಬಳಗಕ್ಕೆ ಅಭಿನಂದನೆಗಳು. ಇದರ ಯಶಸ್ಸಿಗೆ, ಅವಿರತ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಿತ್ರರ ಶ್ರಮ ಪ್ರಶಂಸನೀಯ. ಈ ಪತ್ರಿಕೆಯು ಎಲ್ಲ ಪತ್ರಿಕೆಗಳಂತೆ ಮಾಹಿತಿ, ಜ್ಞಾನ ಮಾತ್ರವಲ್ಲದೇ ಅನುಕರಣೀಯರಾಗಿರುವ ಮಹಾನ್ ವ್ಯಕ್ತಿಗಳ ಜೀವನ ದರ್ಶನ, ಪುರಾಣ ಪುರುಷರ ಪರಿಚಯವನ್ನೂ ಅತ್ಯುತ್ತಮ ಶೈಲಿಯಲ್ಲಿ ಎಲ್ಲ ವಯೋಮಾನದವರಿಗೂ ಪ್ರೇರೇಪಣೆಯಾಗುವಂತೆ ಮಾಡುತ್ತಿದೆ. ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಸನಾತನ ಪ್ರಭಾತವು ಇಷ್ಟು ವರ್ಷಗಳಾದರೂ ಜನಮನದಲ್ಲಿರಲು ಬಹಳ ಮುಖ್ಯ ಕಾರಣವೆಂದರೆ

ವೇದಗಳ ಸಾರಾಂಶವನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೇ ಸಾಧನೆಯ ರಹಸ್ಯವನ್ನು ಎಲ್ಲರಿಗೂ ತಿಳಿಸಿ ಉತ್ತೇಜಿಸುತ್ತಿದೆ. ಪರಾತ್ಪರ ಗುರುಗಳ ಕರುಣೆಯ ಅನುಗ್ರಹದಿಂದ ಆಧ್ಯಾತ್ಮ ಜಾಗೃತಿ ಮೂಡಿಸುತ್ತಿದೆ.

ಸನಾತನ ಪ್ರಭಾತವು ಇದೇ ರೀತಿಯಲ್ಲಿ ಸನಾತನ ಧರ್ಮದ ಸೇವೆಯನ್ನು ಹೆಚ್ಚು ಹೆಚ್ಚು ಮಾಡುವಂತಾಗಲಿ, ಹಲವಾರು ವಾರ್ಷಿಕೋತ್ಸವಗಳನ್ನಾಚರಿಸಿಕೊಳ್ಳುವಂತಾಗಲಿ ಎಂದು ಆಶಿಸುವೆ.

– ಬ್ರಹ್ಮಶ್ರೀ ಡಾ || ಉಮೇಶ ಶರ್ಮಾ ಗುರೂಜಿ, ವಿಜಯನಗರ, ಬೆಂಗಳೂರು