ರಾಮನಾಥಿ ಆಶ್ರಮದ ಸಾಧಕಿ ಸೌ. ಸುಜಾತಾ ರೇಣಕೆ ಇವರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಗಮನಕ್ಕೆ ಬಂದ ವೈಶಿಷ್ಟ್ಯಗಳು

ಸೌ. ಸುಜಾತಾ ಅಶೋಕ ರೇಣಕೆ

೧. ‘ಸನಾತನ ಪ್ರಭಾತ’ದಲ್ಲಿ ವಿವಿಧ ವಿಷಯಗಳಿರುವುದರಿಂದ ಅದನ್ನು ಓದುವಾಗ ಆನಂದವನ್ನು ಅನುಭವಿಸುವುದು

‘ದೈನಿಕ ‘ಸನಾತನ ಪ್ರಭಾತ’ ವನ್ನು ನಿಯಮಿತವಾಗಿ ಓದುವುದರಿಂದ ನನಗೆ ಒಂದು ಬೇರೆಯೇ ಆನಂದವನ್ನು ಅನುಭವಿಸಲು ಸಿಗುತ್ತಿದೆ. ಇದರ ಕಾರಣವನ್ನು ಹುಡುಕುತ್ತಿರುವಾಗ ನನ್ನ ಗಮನಕ್ಕೆ ಬಂದ ವಿಷಯವೆಂದರೆ ‘ಶಾಲಾ ಶಿಕ್ಷಣದಲ್ಲಿ (ಅಭ್ಯಾಸದಲ್ಲಿ) ಹೇಗೆ ಇತಿಹಾಸ, ಭೂಗೋಲ, ವಿಜ್ಞಾನ, ಗಣಿತ, ಪರಿಸರ ಮುಂತಾದ ಅನೇಕ ವಿಷಯಗಳಿರುತ್ತವೆಯೋ, ಹಾಗೆಯೇ ‘ಸನಾತನ ಪ್ರಭಾತ’ದಲ್ಲಿಯೂ ವಿವಿಧ ವಿಷಯಗಳಿರುತ್ತವೆ.

೨. ದೈನಿಕ ‘ಸನಾತನ ಪ್ರಭಾತ’ದ ವೈಶಿಷ್ಟ್ಯಗಳು

೨ ಅ. ಅನೇಕ ವಿಷಯಗಳನ್ನು ವಿಜ್ಞಾನದ ಆಧಾರದಲ್ಲಿ ಶೋಧಿಸಿ ಶೋಧದ ಲೇಖನಗಳನ್ನು ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸಮಾಜದ ಮುಂದೆ ಮಂಡಿಸಲಾಗುತ್ತದೆ.

೨ ಆ. ಪತ್ರಿಕೆಯಲ್ಲಿ ‘ಅಧ್ಯಾತ್ಮವು ಹೇಗೆ ಪರಿಪೂರ್ಣ ಶಾಸ್ತ್ರವಾಗಿದೆ ?’, ಎಂಬುದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸಲಾಗುತ್ತದೆ : ಈಗಿನ ಪೀಳಿಗೆಗೆ ಪ್ರತಿಯೊಂದು ವಿಷಯವನ್ನು ವಿಜ್ಞಾನದ ಪರಿಭಾಷೆಯಲ್ಲಿ ಪರಿಚಯ ಮಾಡಿಕೊಡಲು ‘ಅಧ್ಯಾತ್ಮ’ವು ಹೇಗೆ ಪರಿಪೂರ್ಣ ಶಾಸ್ತ್ರವಾಗಿದೆ?’, ಎಂಬುದನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಅದರಲ್ಲಿನ ಎಲ್ಲ ವಿಷಯಗಳಲ್ಲಿ ‘ಅಧ್ಯಾತ್ಮ ಹೇಗೆ ಅಡಗಿದೆ ?’, ಎಂಬುದನ್ನು ತೋರಿಸಲಾಗುತ್ತದೆ. ಇದು ಪ್ರತಿಯೊಂದು ವಿಷಯದಲ್ಲಿ ಅಧ್ಯಾತ್ಮವನ್ನು ಕಲಿಸುವ ಏಕೈಕ ಪತ್ರಿಕೆಯಾಗಿದೆ.

೨ ಇ. ಅನೇಕ ಯುಗಗಳಲ್ಲಿ ಋಷಿಮುನಿಗಳು ಅನೇಕ ವಿಷಯಗಳ ಬಗ್ಗೆ ಬರೆದಿಟ್ಟಿರುವ ಗ್ರಂಥಸಂಪತ್ತು ಹಬ್ಬಗಳು, ಧಾರ್ಮಿಕ ಉತ್ಸವಗಳು ಮತ್ತು ವಿವಿಧ ಪ್ರಸಂಗಗಳಿಗನುಸಾರ ‘ಸನಾತನ ಪ್ರಭಾತ’ದಲ್ಲಿ ಪ್ರಕಟವಾಗುತ್ತಿರುವುದರಿಂದ ಜಿಜ್ಞಾಸೆ ಹೆಚ್ಚಾಗುತ್ತದೆ : ಭಾರತ ದೇಶದಲ್ಲಿ ಅನೇಕ ಮಹಾನ ಋಷಿಮುನಿಗಳಾಗಿ ಹೋದರು. ಈ ಋಷಿಮುನಿಗಳು ಅನೇಕ ಯುಗಗಳಲ್ಲಿ ಅನೇಕ ವಿಷಯಗಳ ಬಗ್ಗೆ ಬರೆದಿರುವ ಗ್ರಂಥಸಂಪತ್ತು ಮತ್ತು ಅವರ ಅದ್ಭುತ ಜ್ಞಾನವು ಇಂದಿನ ಮನುಕುಲಕ್ಕೆ ಆಧಾರಸ್ತಂಭವಾಗಿದೆ. ಅದರ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ ಆಗಿದೆ. ಹಬ್ಬಗಳು, ಧಾರ್ಮಿಕ ಉತ್ಸವಗಳು ಮತ್ತು ವಿವಿಧ ಪ್ರಸಂಗಗಳಿಗನುಸಾರ ಋಷಿಮುನಿಗಳ ಈ ಅದ್ಭುತಜ್ಞಾನವನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಇಂತಹ ಅನೇಕ ವಿಷಯಗಳು ಪ್ರಕಟವಾಗುತ್ತಿರುವುದರಿಂದ ಸನಾತನ ಪ್ರಭಾತವನ್ನು ನಿಯಮಿತವಾಗಿ ಓದಿ ಅದರಂತೆ ಕೃತಿಗಳನ್ನು ಮಾಡುವವರ ಜಿಜ್ಞಾಸೆಯಲ್ಲಿ ಹೆಚ್ಚಳವಾಗಿ ಅವರ ಆಧ್ಯಾತ್ಮಿಕ ಉನ್ನತಿಯಾಗುವುದರಲ್ಲಿ ಸಂದೇಹವೇ ಇಲ್ಲ.

೨ ಉ. ಸನಾತನ ಪ್ರಭಾತವು ಸತತವಾಗಿ ಈಶ್ವರನನ್ನು ಅರ್ತತೆಯಿಂದ ಸ್ಮರಿಸಿ, ಅನೇಕ ವಿಷಯಗಳನ್ನು ಅಧ್ಯಯನ ಮಾಡಿ ಈಶ್ವರನಿಂದ ಲಭಿಸಿದ ಜ್ಞಾನದಿಂದ ಸಿದ್ಧವಾಗಿದೆ.

೨ ಊ. ‘ಮಿತವ್ಯಯ’ ಇದು ಈಶ್ವರನ ಗುಣವಾಗಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಮಿತವ್ಯಯ ಮಾಡಿ ಸಾಧಕರಿಗೂ ಪ್ರತಿಯೊಂದು ವಿಷಯದಲ್ಲಿ ಮಿತವ್ಯಯ ಮಾಡಲು ಕಲಿಸುವುದು : ಇಂದು ಸಮಾಜದಲ್ಲಿ ಸಣ್ಣಪುಟ್ಟ ವಿಷಯಗಳಿಗಾಗಿ ಕೋಟಿಗಟ್ಟಲೆ ರೂಪಾಯಿಗಳ ದುಂದುವೆಚ್ಚವನ್ನು ಮಾಡಲಾಗುತ್ತದೆ; ಆದರೆ ಸನಾತನ ಸಂಸ್ಥೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸಣ್ಣಪುಟ್ಟ ವಿಷಯಗಳಿಗಾಗಿಯೂ ಸ್ವತಃ ಮಿತವ್ಯಯ ಮಾಡಿ ಸಾಧಕರನ್ನೂ ಅದೇ ರೀತಿ ತಯಾರಿಸಿದ್ದಾರೆ. ಇದರ ಅನೇಕ ಉದಾಹರಣೆಗಳನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯವನ್ನು ಮಾಡುವಾಗ ಕೋಟಿಗಟ್ಟಲೆ ರೂಪಾಯಿಗಳು ಬೇಕಾಗುತ್ತವೆ. ಈ ಎಲ್ಲ ಕಾರ್ಯಗಳು ಕೇವಲ ಸಮಾಜದಿಂದ ದೊರಕಿದ ಅರ್ಪಣೆಯಿಂದ ನಡೆಯುತ್ತವೆ.

೩. ಸನಾತನ ಪ್ರಭಾತದ ಮಾಧ್ಯಮದಿಂದಾಗುವ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ

೩ ಅ. ಕ್ರಾಂತಿಕಾರರಂತೆ ಸನಾತನದ ಸಾಧಕರು ಪತ್ರಿಕೆಯ ಮಾಧ್ಯಮದಿಂದ ‘ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಿದ್ದಾರೆ : ಆಂಗ್ಲರ ಗುಲಾಮಗಿರಿಯಿಂದ ಭಾರತದ ರಕ್ಷಣೆಯಾಗಲು ಅನೇಕ ಕ್ರಾಂತಿಕಾರರು ತಮ್ಮ ಪ್ರಾಣದ ಆಹುತಿಯನ್ನು ನೀಡಿದರು. ಇಂದಿನ ಪೀಳಿಗೆಗೆ ಇಂತಹ ಮಹಾನ್ ಕ್ರಾಂತಿಕಾರರ ಹೆಸರುಗಳು ಸಹ ಗೊತ್ತಿಲ್ಲ. ಈ ಮಹಾನ್ ಕ್ರಾಂತಿಕಾರರ ಆದರ್ಶವನ್ನು ಪಡೆದುಕೊಂಡು ಅನೇಕ ಸಾಧಕರು ‘ಸಾಧನೆ’ ಎಂದು ಪರಾತ್ಪರ ಗುರು  ಡಾ. ಆಠವಲೆಯವರ ಮಾರ್ಗದರ್ಶನಕ್ಕಸುಸಾರ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಿದ್ದಾರೆ.

೩ ಆ. ನೈತಿಕಮೌಲ್ಯಗಳ ಅಧಃಪತನ ಮತ್ತು ಧರ್ಮಶಿಕ್ಷಣದ ಕೊರತೆಯನ್ನು ದೂರಗೊಳಿಸಲು ‘ಸನಾತನ ಪ್ರಭಾತ’ ದೈನಿಕದ ಮೂಲಕ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಬಗ್ಗೆ ಪ್ರಬೋಧನೆ ಮಾಡುವುದು ಮತ್ತು ಅದಕ್ಕನುಸಾರ  ಕೃತಿಗಳನ್ನು ಮಾಡುವುದು : ಹಿಂದಿನ ಜನರು, ‘ನಮ್ಮ ದೇಶದಲ್ಲಿ ಸುವರ್ಣಯುಗವಿತ್ತು ಎಂದು ಹೇಳುತ್ತಿದ್ದರು,  ಆದರೆ ಇಂದು ‘ದುಷ್ಟ ಪ್ರವೃತ್ತಿಯ ಹೊಗೆ ಹಾಯುತ್ತಿದೆ ಮತ್ತು ನಾವು ಈಗ ಅದನ್ನು ನೋಡುತ್ತಿದ್ದೇವೆ. ಇದಕ್ಕೆ ಕಾರಣವೆಂದರೆ ನೈತಿಕಮೌಲ್ಯಗಳ ಅಧಃಪತನ ಮತ್ತು ಧರ್ಮಶಿಕ್ಷಣದ ಕೊರತೆ. ದೇಶದಲ್ಲಿ ಸುವ್ಯವಸ್ಥೆಯನ್ನು ಪುನರ್ಸ್ಥಾಪಿಸಲು ಕಳೆದ ೩೦ ವರ್ಷಗಳಿಂದ ಪರಾತ್ಪರ ಗುರು ಡಾ. ಆಠವಲೆಯವರು ವ್ಯಷ್ಟಿ ಸಾಧನೆಯ ಜೊತೆಗೆ ‘ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ’ಗಾಗಿ ಆಚರಣೆಸಹಿತ ಅಮೂಲ್ಯ ಬೋಧನೆಯನ್ನು ನೀಡುತ್ತಿದ್ದಾರೆ. ಇಂದು ಅವರ ಆದರ್ಶವನ್ನು ಅಂಗೀಕರಿಸಿ ಅನೇಕ ಸಾಧಕರು ಸರ್ವಸ್ವದ ತ್ಯಾಗವನ್ನು ಮಾಡಿ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಊರೂರುಗಳಿಗೆ ಹೋಗಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಹಾಗೂ ಧರ್ಮಾಚರಣೆಯ ಪ್ರಸಾರಕಾರ್ಯವನ್ನು ಮಾಡುತ್ತಿದ್ದಾರೆ. ಈ ಪ್ರಸಾರಕಾರ್ಯವನ್ನು ಮಾಡುವಾಗ ಸಾಧಕರು ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ; ಆದರೂ ಸಹ ಪ್ರಾಣದ ಭಯವಿಲ್ಲದೇ ಸಾಧಕರು ಹಗಲು-ರಾತ್ರಿ ಸಾಧನೆ ಎಂದು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಅನೇಕ ಉದಾಹರಣೆಗಳು ‘ಸನಾತನ ಪ್ರಭಾತ’ದಲ್ಲಿ ಓದಲು ಸಿಗುತ್ತವೆ.

೪. ಸನಾತನ ಪ್ರಭಾತವನ್ನು ನಿಯಮಿತವಾಗಿ ಓದಿದರೆ ಖಚಿತವಾಗಿ ಆಧ್ಯಾತ್ಮಿಕ ಪ್ರಗತಿಯಾಗುವುದು

‘ಸನಾತನ ಪ್ರಭಾತ’ವನ್ನು ನಿಯಮಿತವಾಗಿ ಓದುವುದೆಂದರೆ ‘ಪಿ.ಎಚ್.ಡಿ.’ ಮಾಡಿದಂತಾಗಿದೆ. ಸಮಾಜದಲ್ಲಿ ‘ಪಿ.ಎಚ್.ಡಿ.’ ಮಾಡಿದ ನಂತರ ‘ಡಾಕ್ಟರೇಟ್’ ಪದವಿ ಸಿಗುತ್ತದೆ; ಆದರೆ ‘ಸನಾತನ ಪ್ರಭಾತ’ವನ್ನು ಜಿಜ್ಞಾಸೆಯಿಂದ ಓದಿ ಅದರಂತೆ ಆಚರಣೆಯನ್ನು ಮಾಡಿದರೆ, ಖಚಿತವಾಗಿ ಆ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಮತ್ತು ಇದೇ ಆ ಜೀವಕ್ಕೆ ದೊರಕಿದ ಪದವಿಯಾಗುತ್ತದೆ.

೫. ಕೃತಜ್ಞತೆ

‘ಹೇ ಗುರುದೇವಾ, ‘ಸನಾತನ ಪ್ರಭಾತ’ದಲ್ಲಿ ನೀವು ನಮಗೆ ಕೊಡುತ್ತಿರುವ ಅಮೂಲ್ಯ ಬೋಧನೆ ಮತ್ತು ನಮ್ಮಿಂದ ಮಾಡಿಸಿಕೊಳ್ಳುತ್ತಿರುವ ಸಾಧನೆಯ ಬಗ್ಗೆ ತುಂಬಾ ಬರೆಯಬೇಕು’, ಎಂದು ಅನಿಸುತ್ತದೆ. ತಮ್ಮ ಕೃಪೆಯಿಂದಲೇ ಹೊಳೆದ ಈ ವಿಚಾರಗಳನ್ನು ಶಬ್ದದಲ್ಲಿ ಮಂಡಿಸಿದ್ದೇನೆ. ಕೃತಜ್ಞತೆ ಗುರುದೇವಾ !’

– ಸೌ. ಸುಜಾತಾ ಅಶೋಕ ರೇಣಕೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೬.೨೦೨೦)