ಸಮಾಜಮನಸ್ಸಿನಲ್ಲಿ ಶ್ರದ್ಧೆಯ ಬೀಜವನ್ನು ಭಿತ್ತಿ ಶ್ರದ್ಧಾವಂತ ಮತ್ತು ಸಾತ್ತ್ವಿಕ ಸಮಾಜವನ್ನು ರೂಪಿಸಲು ಅವಿರತ ಪರಿಶ್ರಮಿಸುತ್ತಿರುವ ‘ಸನಾತನ ಪ್ರಭಾತವು ಸಾಧನೆ ಮಾಡುವ ವ್ಯಕ್ತಿಗಳಿಗೆ ದೊರೆತ ಅಮೂಲ್ಯ ಸತ್ಸಂಗ !

೧. ವ್ಯಕ್ತಿಯಲ್ಲಿ ಸಾಧನೆಯ ಬೀಜವನ್ನು ಭಿತ್ತಿ, ವ್ಯಕ್ತಿಗೆ ಮನುಷ್ಯ ಜನ್ಮದ ಉದ್ದೇಶದ ಅರಿವು ಮಾಡಿಕೊಡುವ ‘ಸನಾತನ ಪ್ರಭಾತ!

‘ಸನಾತನ ಪ್ರಭಾತದಿಂದಾಗಿ ಓದುಗರಿಗೆ ಅನೇಕ ಸ್ತರಗಳಲ್ಲಿ ಲಾಭ ಸಿಗುವುದು. ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗುವ ಓದುಗರ ಅನುಭೂತಿಗಳಿಂದ ಈ ವಿಷಯವು ನಮ್ಮ ಗಮನಕ್ಕೆ ಬರುತ್ತದೆ. ಆದರೆ ‘ಸನಾತನ ಪ್ರಭಾತವನ್ನು ಓದುವುದರಿಂದ ಆಗುವ ಬಹುದೊಡ್ಡ ಲಾಭವೆಂದರೆ, ‘ಮನುಷ್ಯ ಜನ್ಮದ ಉದ್ದೇಶವು ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾಗಿದೆ, ಎನ್ನುವುದು ಓದುಗರ ಗಮನಕ್ಕೆ ಬರುತ್ತದೆ. ‘ಸನಾತನ ಪ್ರಭಾತದಿಂದ ಓದುಗರಿಗೆ ಸಾಧನೆಯ ಮಾರ್ಗದರ್ಶನ ಸಿಗುವುದರೊಂದಿಗೆ ಸಾಧನೆಯ ಪ್ರತಿಯೊಂದು ಹಂತದ ಸೂಕ್ಷ್ಮತೆಗಳು ಕೂಡ ಅವರಿಗೆ ಸ್ಪಷ್ಟವಾಗುತ್ತವೆ. ಇದರಲ್ಲಿ ಪ್ರಕಟಿಸಲಾಗುವ ಓದುಗರ ಅನುಭೂತಿ ಗಳು, ಆಧ್ಯಾತ್ಮಿಕ ಸ್ತರದಲ್ಲಿ ಉನ್ನತ ಸಾಧಕರು ಮಾಡಿದ ವಿಶೇಷ ಪ್ರಯತ್ನಗಳು, ಇದರೊಂದಿಗೆ ಮಾರ್ಗದರ್ಶನ ನೀಡುವ ಸಂತರ ಲೇಖನ ಇತ್ಯಾದಿಗಳನ್ನು ಓದಿ, ಓದುಗರಿಗೆ ಅಮೂಲ್ಯ ಮಾರ್ಗದರ್ಶನ ಸಿಗುತ್ತದೆ. ಇದರಲ್ಲಿ ‘ಗೃಹಸ್ಥ ಜೀವನದಲ್ಲಿದ್ದು, ಯಾವ ರೀತಿ ಸಾಧನೆಯನ್ನು ಮಾಡಬಹುದು ?, ಅಲ್ಲದೇ, ‘ದೈನಂದಿನ ಪ್ರತಿಯೊಂದು ಕಾರ್ಯದಲ್ಲಿ ಆಧ್ಯಾತ್ಮಿಕ ಉದ್ದೇಶವನ್ನು ಹೇಗೆ ಸಾಧಿಸಬೇಕು ?, ಎನ್ನುವುದನ್ನೂ ಉದಾಹರಣೆಗಳೊಂದಿಗೆ ಕಲಿಸಲಾಗುತ್ತದೆ.

೨. ಅಶ್ರದ್ಧೆಯ ಕಡೆಗೆ ವಾಲುತ್ತಿರುವ ಸಮಾಜದ ಮನಸ್ಸಿನ ಮೇಲೆ ಶ್ರದ್ಧೆಯ ಮಹತ್ವವನ್ನು ಬಿಂಬಿಸುವುದು

ಇಂದಿನ ಕಲಿಯುಗದಲ್ಲಿ ಮನುಷ್ಯನು ತನ್ನನ್ನು ಅತ್ಯಧಿಕ ಬುದ್ಧಿಜೀವಿ ಎಂದು ತಿಳಿದುಕೊಂಡು ಅಶ್ರದ್ಧೆಯ ಕಡೆಗೆ ವಾಲುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಗೆ ಶಾಸ್ತ್ರಾಧಾರಿತ ಉಪಾಸನೆಯನ್ನು ಕಲಿಸಿ ಅವನ ಮನಸ್ಸಿನಲ್ಲಿ ಅದಕ್ಕನುಸಾರ ಕೃತಿಯನ್ನು ಮಾಡುವ ಆಸಕ್ತಿಯನ್ನು ಉತ್ಪನ್ನ ಮಾಡುವ ಮಹತ್ವಪೂರ್ಣ ಕಾರ್ಯವನ್ನು ‘ಸನಾತನ ಪ್ರಭಾತವು ಮಾಡುತ್ತಿದೆ. ‘ಸನಾತನ ಪ್ರಭಾತವು ಸಾವಿರಾರು ಸಾಧಕರೊಂದಿಗೆ ಸಾವಿರಾರು ಓದುಗರ ಮನಸ್ಸಿನಲ್ಲಿ ದೇವತೆಗಳ ಹಾಗೂ ಧರ್ಮದ ಬಗ್ಗೆ ಶ್ರದ್ಧೆಯನ್ನು ಹೆಚ್ಚಿಸಿದೆ. ಇಂತಹ ಶ್ರದ್ಧಾಳು ಮತ್ತು ಸಾತ್ತ್ವಿಕ ಸಮಾಜವೇ ದೇವತೆಗಳು, ಧರ್ಮ ಹಾಗೂ ರಾಷ್ಟ್ರದ ಬಗ್ಗೆ ಮಹತ್ವಪೂರ್ಣ ಪಾತ್ರ ವಹಿಸಬಹುದು.

೩. ‘ಸನಾತನ ಪ್ರಭಾತವನ್ನು ಓದುವಾಗ ತೊಂದರೆದಾಯಕ ಆವರಣ ದೂರವಾಗುವ ಅನುಭೂತಿ ಬರುವುದು

‘ಸನಾತನ ಪ್ರಭಾತವು ವಿವಿಧ ರೀತಿಯ ಮಾಹಿತಿಯನ್ನು ನೀಡುವುದರೊಂದಿಗೆ ‘ಆಧ್ಯಾತ್ಮಿಕ ತೊಂದರೆಗಳೆಂದರೆ ಏನು ಎಂಬುದರ ಜ್ಞಾನವನ್ನೂ ನೀಡುತ್ತದೆ. ಇದರಿಂದ ಓದುಗರಿಗೆ ‘ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳಾದಾಗ ಮಾಡಬೇಕಾದ ಉಪಾಯಗಳ ಬಗ್ಗೆ ಅರಿವಾಗಿ, ಅವರಿಗೆ ಈ ಸಂದರ್ಭದಲ್ಲಿ ಅನುಭೂತಿಗಳೂ ಬರುತ್ತಿವೆ. ಕೆಲವು ಓದುಗರು ‘ಸನಾತನ ಪ್ರಭಾತವನ್ನು ಓದುವಾಗ ‘ತಮ್ಮ ಮೇಲೆ ಉಪಾಯವಾಗುತ್ತಿರುವ ಮತ್ತು ಇದರಿಂದ ಅವರ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆಯಾಗಿರುವುದನ್ನು ಅನುಭವಿಸಿದ್ದಾರೆ.

೪. ಓದುಗರ ಮನಸ್ಸಿನ ಮೇಲೆ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಮಹತ್ವವನ್ನು ಬಿಂಬಿಸಿ, ‘ಜೀವನವನ್ನು ಹೇಗೆ ಆನಂದಮಯವನ್ನಾಗಿ ಮಾಡಿಕೊಳ್ಳಬೇಕು ?, ಎನ್ನುವ ಪಾಠವನ್ನು ಕಲಿಸುವ ‘ಸನಾತನ ಪ್ರಭಾತ

‘ಸನಾತನ ಪ್ರಭಾತದಿಂದ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಪ್ರಕ್ರಿಯೆ ತಿಳಿದಿದ್ದರಿಂದ, ಅನೇಕ ಓದುಗರು ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಇದು ‘ಸನಾತನ ಪ್ರಭಾತದ ಬಹುದೊಡ್ಡ ಉಪಲಬ್ಧತೆಯಾಗಿದೆ. ಇದರಿಂದ ಅನೇಕ ಜನರಿಗೆ ಜೀವನದಲ್ಲಿ ವೈಯಕ್ತಿಕ ಹಾಗೂ ಸಾಂಸಾರಿಕ ಸಮಸ್ಯೆಗಳಿಗೆ ಸಮಾಧಾನ ದೊರೆತು, ಅವರು ಜೀವನದಲ್ಲಿ ಆನಂದವನ್ನು ಅನುಭವಿಸುತ್ತಿದ್ದಾರೆ. ‘ಸನಾತನ ಪ್ರಭಾತವು ತೊಂದರೆಗೀಡಾದ, ನೊಂದವರ, ಜೀವನದಲ್ಲಿ ಮತ್ತು ನಿರಾಶೆ ಹೊಂದಿರುವವರ ಜೀವನದಲ್ಲಿ ಭಾವ, ಭಕ್ತಿ, ಚೈತನ್ಯ ಮತ್ತು ಆನಂದವನ್ನು ನೀಡುವ ‘ಸಂಜೀವನಿ ಆಗಿದೆ.

‘ಸನಾತನ ಪ್ರಭಾತದ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ೨೧ ವರ್ಷಗಳ ಹಿಂದೆ ಅನೇಕ ಉದ್ದೇಶಗಳೊಂದಿಗೆ ಹಾಗೂ ತಮ್ಮ ದೂರದೃಷ್ಟಿಯಿಂದ ‘ಸನಾತನ ಪ್ರಭಾತವನ್ನು ಪ್ರಾರಂಭಿಸಿದರು. ತನ್ಮೂಲಕ ಅವರು ಓದುಗರನ್ನು ರಾಷ್ಟ್ರರಕ್ಷಣೆ ಹಾಗೂ ಧರ್ಮಜಾಗೃತಿಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಮಹತ್ವಪೂರ್ಣ ಸಹಾಯಹಸ್ತವನ್ನು ನೀಡುವ ‘ಸನಾತನ ಪ್ರಭಾತಕ್ಕೆ ಹಾಗೂ ಅದನ್ನು ನಿರ್ಮಿಸಿರುವ ಪರಾತ್ಪರ ಗುರು ಡಾಕ್ಟರರ ಚರಣಗಳಿಗೆ ಶತಕೋಟಿ ಪ್ರಣಾಮಗಳು.

೫. ವ್ಯಾಪಕ ಸ್ತರದಲ್ಲಿ ಹಾಗೂ ಪ್ರಭಾವಶಾಲಿಯಾಗಿ ಧರ್ಮಪ್ರಸಾರ ಮಾಡುವ ‘ಸನಾತನ ಪ್ರಭಾತ

ಅನೇಕ ಕಾರ್ಯಕರ್ತರು ಪ್ರತಿದಿನ ೧೦ ಗಂಟೆ ಸೇವೆಯನ್ನು ಮಾಡಿ ಎಷ್ಟು ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಾರೆಯೋ, ಅದರ ಅನೇಕ ಪಟ್ಟು ಹೆಚ್ಚು ಪರಿಣಾಮಕಾರಿ ಧರ್ಮಪ್ರಸಾರವನ್ನು ‘ಸನಾತನ ಪ್ರಭಾತ ವರ್ತಮಾನ ಪತ್ರಿಕೆಗಳು ಮಾಡುತ್ತಿವೆ. ಈ ವರ್ತಮಾನ ಪತ್ರಿಕೆಗಳಿಂದ ವ್ಯಾಪಕ ಸ್ತರದಲ್ಲಿ ಮತ್ತು ಪ್ರಭಾವಶಾಲಿ ಧರ್ಮಪ್ರಸಾರವಾಗುತ್ತಿದೆ.

– (ಶ್ರೀಸತ್‌ಶಕ್ತಿ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ .(೨೦.೪.೨೦೧೯)

“೩೩ ಮಂದಿ ಓದುಗರು ಶೇ. ೬೦ ರಷ್ಟು ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಿಕೊಂಡಿರುವುದು, ‘ಸನಾತನ ಪ್ರಭಾತದ ೨೧ ವರ್ಷಗಳ ಕಾರ್ಯದ ಸರ್ವೋತ್ತಮ ಫಲನಿಷ್ಪತ್ತಿಯಾಗಿದೆ!

‘ಸನಾತನ ಪ್ರಭಾತದ ವಾಚನದಿಂದ ಓದುಗರು ‘ಜಿಜ್ಞಾಸುವಿನಿಂದ ಹಿಡಿದು ಕ್ರಿಯಾಶೀಲ ಓದುಗರು ಮತ್ತು ‘ಕ್ರಿಯಾಶೀಲ ಓದುಗರಿಂದ ಹಿಡಿದು ಸಾಧಕ ಹೀಗೆ ಸಾಧನೆಯ ಅನೇಕ ಸ್ತರಗಳನ್ನು ದಾಟುತ್ತಿದ್ದಾರೆ. ‘ಸನಾತನ ಪ್ರಭಾತದ ಅನೇಕ ಓದುಗರು ಈಗ ಸಾಧನೆಯನ್ನು ಪ್ರಾರಂಭಿಸಿದ್ದಾರೆ. ಹಾಗೆಯೇ ಇಲ್ಲಿಯವರೆಗೆ ೩೩ ಜನ ಓದುಗರು ಶೇ.೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಸ್ತರವನ್ನು ಪ್ರಾಪ್ತಮಾಡಿಕೊಂಡಿದ್ದಾರೆ. ಇನ್ನಿತರ ಯಾವುದೇ ಸತ್ಸಂಗವಿಲ್ಲದೇ, ಕೇವಲ ಸನಾತನ ಪ್ರಭಾತದ ಸತ್ಸಂಗದ ಬಲದಿಂದ ಸಾಧನೆಯನ್ನು ಮಾಡಿ ಅವರು ಜನ್ಮ-ಮರಣದ ಚಕ್ರದಿಂದ ಮುಕ್ತಿಯನ್ನು ಪಡೆದಿದ್ದಾರೆ. ‘ಸಾಧಕರೊಂದಿಗೆ ಓದುಗರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಂಡು ಮನುಷ್ಯಜನ್ಮವನ್ನು ಸಾರ್ಥಕಪಡಿಸಿಕೊಂಡಿರುವುದೇ ಕಳೆದ ೨೧ ವರ್ಷಗಳ ‘ಸನಾತನ ಪ್ರಭಾತ ವರ್ತಮಾನ ಪತ್ರಿಕೆಯ ಕಾರ್ಯದ ಸಫಲತೆಯ ಸರ್ವೋತ್ತಮ ಫಲನಿಷ್ಪತ್ತಿಯಾಗಿದೆ, ಎಂದು ಹೇಳಬಹುದು.