ಶ್ರೀನಗರ – ಕಾಶ್ಮೀರದ ಡೋಡಾ ಜಿಲ್ಲೆಯ ಭದ್ರವಾಹದ ಶಿಕ್ಷಕ ಡಾ. ವಾರೀಸ್ ಅಲಿಯನ್ನು ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲಾಯಿತು. ಅಲಿ 12 ನೇ ತರಗತಿಯ ವಿದ್ಯಾರ್ಥಿನಿಗೆ “ನನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸು ಇಲ್ಲದಿದ್ದರೆ ನಾನು ನಿನ್ನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುತ್ತೇನೆ” ಎಂದು ಬೆದರಿಸುವ ಮೂಲಕ ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಡ ಹೇರಿದ್ದನು. ಏಪ್ರಿಲ್ 16 ರಂದು ವಿದ್ಯಾರ್ಥಿನಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ ನಂತರ ಆತನನ್ನು ಬಂಧಿಸಲಾಯಿತು.
ವಿದ್ಯಾರ್ಥಿನಿ ಹೇಳಿದಂತೆ, ದೈಹಿಕ ಸಂಬಂಧ ಹೊಂದಿದರೆ, ಪಂಜಾಬಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಅಲಿ ಹೇಳಿದ್ದ. ಅಲ್ಲದೇ, ವಾಟ್ಸಾಪ್ ನಲ್ಲಿ ನನಗೆ ಕೆಲವು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನು. ಅವನು ಅನ್ಯ ವಿದ್ಯಾರ್ಥಿನಿಯರಿಗೂ ಕೂಡ ದೈಹಿಕ ಸಂಬಂಧಕ್ಕಾಗಿ ಒತ್ತಾಯಿಸಿದ್ದನು ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಮಾಹಿತಿ ನೀಡಿದ್ದಾಳೆ. “ಒಂದು ವೇಳೆ ನೀನು ನಿನ್ನ ಮನೆಯವರಿಗೆ ಈ ಬಗ್ಗೆ ಹೇಳಿದರೆ ಅಥವಾ ಸಂಬಂಧ ಹೊಂದಲು ನಿರಾಕರಿಸಿದರೆ, ನಾನು ನಿನ್ನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುತ್ತೇನೆ” ಎಂದೂ ಸಹ ಸಂತ್ರಸ್ತೆಗೆ ಅಲಿ ಬೆದರಿಕೆ ಹಾಕಿದ್ದನು.
ಸಂಪಾದಕೀಯ ನಿಲುವುಯಾರಾದರೂ ಇಂತಹ ಕಾಮುಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರೆ ಆಶ್ಚರ್ಯವೇನಿಲ್ಲ! |