ಹರಿಯಾಣ – ವಿವಾಹೇತರ ಸಂಗಾತಿಯೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುವವರಿಗೆ ರಕ್ಷಣೆ ನೀಡುವುದು ತಪ್ಪುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 40 ವರ್ಷದ ಮಹಿಳೆ ಮತ್ತು 44 ವರ್ಷದ ಪುರುಷ ತಮ್ಮ ಕುಟುಂಬಗಳಿಂದ ಬೆದರಿಕೆಯ ನಂತರ ಹೈಕೋರ್ಟ್‌ನಲ್ಲಿ ರಕ್ಷಣೆ ಕೋರಿದ್ದರು. ಈ ಬಗ್ಗೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1. ‘ಲಿವ್-ಇನ್’ ನಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಮದುವೆಯಾಗಿದ್ದಾರೆ ಮತ್ತು ಇಬ್ಬರಿಗೂ ಮಕ್ಕಳಿದ್ದಾರೆ. ಇದರಲ್ಲಿ ಮಹಿಳೆ ತನ್ನ ಪತಿಯಿಂದ ಡೈವೋರ್ಸ್ ಪಡೆದಿದ್ದಾರೆ; ಆದರೆ ಪತಿ ಪತ್ನಿಯಿಂದ ಡೈವೋರ್ಸ್ ತೆಗೆದುಕೊಂಡಿಲ್ಲ.
2. ನ್ಯಾಯಾಲಯವು, ಅರ್ಜಿದಾರರಿಗೆ ತಾವು ವಿವಾಹವಾಗಿದ್ದೇವೆ ಎಂಬ ಸಂಪೂರ್ಣ ಅರಿವಿದ್ದು, ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದೆ.
3. ನ್ಯಾಯಾಲಯವು, ಅರ್ಜಿದಾರರು ತಮ್ಮ ಮನೆಯಿಂದ ಓಡಿಹೋಗುವ ಮೂಲಕ ಅವರ ಕುಟುಂಬವನ್ನು ಮಾನನಷ್ಟಗೊಳಿಸಿದ್ದಲ್ಲದೆ, ಘನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ.
4. ಮದುವೆ ಒಂದು ಪವಿತ್ರ ಸಂಬಂಧವಾಗಿದೆ. ಇಂತಹ ಮದುವೆಗಳಿಗೂ ಸಮಾಜದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ನಮ್ಮ ದೇಶದಲ್ಲಿ ನೈತಿಕತೆ ಮತ್ತು ಸಂಸ್ಕೃತಿ ಬಹಳ ಮುಖ್ಯವಾಗಿದೆ. ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದೇವೆ. ಈ ಸಂಸ್ಕೃತಿ ಭಾರತೀಯ ಸಂಸ್ಕೃತಿಗಿಂತ ಬಹಳ ಭಿನ್ನವಾಗಿದೆ ಎಂದೂ ಹೇಳಿದೆ.