ಹಿಂದೂ ಹೆಸರನ್ನು ಬಳಸಿ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ ಮುಸ್ಲಿಂ ಯುವಕ !

ಮುಜಾಫರ್ ಪುರ (ಬಿಹಾರ) – ಶಮಶಾದ್ ಎಂಬ ಹೆಸರಿನ ಮುಸ್ಲಿಂ ಯುವಕನೊಬ್ಬನು ತಾನು ಸೂರಜ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸಿದ್ದಾನೆ. ಇಷ್ಟಕ್ಕೇ ನಿಲ್ಲದ ಯುವಕ ನಿಧಾನವಾಗಿ ಯುವತಿಯೊಂದಿಗೆ ಸಾಮಿಪ್ಯವನ್ನು ಬೆಳೆಸಿ ಆಕೆಯ ಲೈಂಗಿಕ ಶೋಷಣೆ ಮಾಡಲು ಪ್ರಾರಂಭಿಸಿದನು. ಸಂತ್ರಸ್ತೆ ಮದುವೆಯ ಬಗ್ಗೆ ಕೇಳಿದಾಗ ಯುವಕ ಆಗ ತನ್ನ ನಿಜವಾದ ಹೆಸರು ಶಮಶಾದ್ ಎಂದು ಹೇಳಿದನು. ಯುವಕ ಸಂತ್ರಸ್ತೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದನು. ಅಲ್ಲದೇ ಯುವತಿಗೆ ಗೋಮಾಂಸ ತಿನ್ನಿಸಿದ್ದನು. ಸಂತ್ರಸ್ತ ಯುವತಿ ಏಪ್ರಿಲ್ 21 ರಂದು ಪೊಲೀಸರಿಗೆ ದೂರು ದಾಖಲಿಸಿದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಶಮಶಾದ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಸಿಲುಕಿಸುವ ಮುಸಲ್ಮಾನರ ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಯುವತಿಯರು ಎಚ್ಚರಿಕೆಯಿಂದ ಇರಬೇಕು!