ಹಿಂದಿ ಚಿತ್ರರಂಗದ ಕಲಾವಿದರಿಂದ ಪಹಲಗಾಮ್ ಘಟನೆಯ ಖಂಡನೆ!

ಮುಂಬಯಿ – ಈ ಘಟನೆಯ ದುಃಖ ಇದ್ದೇ ಇದೆ; ಆದರೆ ಕೋಪಕ್ಕೆ ಈಗ ಎಲ್ಲೆಯೇ ಇಲ್ಲ. ನನ್ನ ಅನುಭವದಿಂದ ಕಾಶ್ಮೀರದಲ್ಲಿ ಹಿಂದೂಗಳೊಂದಿಗೆ ಹೀಗಾಗುವುದನ್ನು ನಾನು ಬಹಳಷ್ಟು ನೋಡಿದ್ದೇನೆ. ‘ಕಾಶ್ಮೀರ್ ಫೈಲ್ಸ್’ ಆ ಚಲನಚಿತ್ರ ಅದರ ಒಂದು ಸಣ್ಣ ತುಣುಕಾಗಿತ್ತು. ಜನರು ಅದನ್ನು ‘ಪ್ರಚಾರದ ಚಲನಚಿತ್ರ’ ಎಂದರು. ಹೃದಯದಲ್ಲಿ ನಡೆಯುತ್ತಿರುವುದನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ. ಇಂದು ಮಾತುಗಳು ನಪುಂಸಕವಾಗಿವೆ ಎಂದು ಮೂಲತಃ ಕಾಶ್ಮೀರಿ ಪಂಡಿತರಾದ ನಟ ಅನುಪಮ ಖೇರ್ ಪ್ರತಿಕ್ರಿಯಿಸಿದ್ದಾರೆ.
ಭಯೋತ್ಪಾದಕ ಸುದ್ದಿಯನ್ನು ಕೇಳಿ ಹೃದಯ ಹಿಂಡಿದಂತಾಗಿದೆ. ಮುಗ್ಧ ಜನರ ಇಂತಹ ಹತ್ಯೆ ಅಕ್ಷರಶಃ ರಾಕ್ಷಸೀಯ ಕೃತ್ಯ ಎಂದು ಚಲನಚಿತ್ರ ನಟ ಅಕ್ಷಯ ಕುಮಾರ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಹೃದಯ ವಿದ್ರಾವಕ ಮತ್ತು ಅಮಾನವೀಯ ಎಂದು ನಟ ಅಜಯ ದೇವಗನ ಹೇಳಿದ್ದಾರೆ. ನಟ ಸೋನು ಸೂದ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ‘ಇದು ಸಹಿಸಲಾಗದು’ ಎಂದು ಅವರು ಹೇಳಿದ್ದಾರೆ.
ವಿವಿಧ ಮರಾಠಿ ಚಿತ್ರರಂಗದ ಕಲಾವಿದರು ಸಹ ಈ ಘಟನೆಯನ್ನು ಖಂಡಿಸಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!