ಇಂದು ನ್ಯಾಯಾಲಯದಲ್ಲಿ ವಿಚಾರಣೆ!
ಮುಂಬಯಿ – 2019 ರಿಂದ 2021 ಈ 3 ವರ್ಷಗಳ ಕಾಲಾವಧಿಯಲ್ಲಿ ಮಹಾರಾಷ್ಟ್ರದಿಂದ 1 ಲಕ್ಷ ಹುಡುಗಿಯರು ನಾಪತ್ತೆಯಾಗಿರುವ ಬಗ್ಗೆ ಸಾಂಗ್ಲಿಯ ಶಾಹಾಜಿ ಜಗತಾಪ್ ಇವರು ಆಘಾತಕಾರಿ ಮಾಹಿತಿ ನೀಡುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಂಬಯಿ ಉಚ್ಚನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಈ ಅರ್ಜಿಯಲ್ಲಿ ಅವರು, ಗೃಹ ಸಚಿವಾಲಯ ಪ್ರಕಟಿಸಿದ ವರದಿಯ ಪ್ರಕಾರ 2019 ರಲ್ಲಿ 35 ಸಾವಿರದ 990, 2020 ರಲ್ಲಿ 30 ಸಾವಿರದ 89 ಮತ್ತು 2021 ರಲ್ಲಿ 34 ಸಾವಿರದ 763 ಹುಡುಗಿಯರು ಕೇವಲ ಮಹಾರಾಷ್ಟ್ರದಿಂದ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಅರ್ಜಿಯಲ್ಲಿ ನ್ಯಾಯಾಲಯದ ನಿರೀಕ್ಷಣೆಯನ್ನು ಕೂಡ ತಿಳಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಜಗತಾಪ ಇವರ ಮಗಳು ವಿಜ್ಞಾನ ಶಾಖೆಯ ಮೂರನೇ ವರ್ಷದಲ್ಲಿ ಕಲಿಯುತ್ತಿದ್ದರು ಆಕೆ ಡಿಸೆಂಬರ್ 2021 ರಿಂದ ಕಾಣೆಯಾಗಿದ್ದಾಳೆ. ಇಲ್ಲಿನ ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಅಲ್ಲಿನ ಪೊಲೀಸರಿಗೆ ಹುಡುಗಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜಗತಾಪ ಇವರಿಗೆ, ಅವರ ಹುಡುಗಿಯ ವಿವಾಹವಾಗಿದ್ದು, ಅವಳನ್ನು ಇಸ್ಲಾಂಗೆ ಮತಾಂತರಗೊಳಿಸಲಾಗಿದೆಯೆಂದು ತಿಳಿದುಬಂದಿದೆ.
ಜಗತಾಪ ಇವರು ಅರ್ಜಿಯಲ್ಲಿ, ಅವರು ಕಳೆದ ಎರಡೂವರೆ ವರ್ಷಗಳಲ್ಲಿ ಕೇವಲ 2 ನಿಮಿಷ ಮಾತ್ರ ಪುತ್ರಿಯನ್ನು ಬೇಟಿಯಾಗಿದ್ದಾರೆ ಮತ್ತು ಅವರ ಕುಟುಂಬದೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಬಾಲಕಿ ವಯಸ್ಕಳಾಗಿದ್ದರಿಂದ ಪೊಲೀಸರು ಅವಳನ್ನು ಪತ್ತೆ ಮಾಡಲು ಯಾವುದೇ ಪ್ರಯತ್ನವನ್ನು ನಡೆಸಿಲ್ಲ. ಕಾಣೆಯಾಗಿರುವ ಹುಡುಗಿಗೆ ಪೀಡಿಸುತ್ತಿರುವ ಅಥವಾ ಬಲವಂತವಾಗಿ ಮತಾಂತರಗೊಳಿಸಿರಬಹುದು ಎಂದು ಹೇಳಲಾಗಿದೆ. (ಈ ದಾವೆಯಲ್ಲಿ ಸತ್ಯವಿದ್ದರೆ, ಮಹಾರಾಷ್ಟ್ರ ಪೊಲೀಸರಿಗೆ ನಾಚಿಕೆಗೇಡು – ಸಂಪಾದಕರು)
ಸಂಪಾದಕೀಯ ನಿಲುವುಈ ದುಸ್ಥಿತಿ ಮಹಾರಾಷ್ಟ್ರದ ಪೊಲೀಸ್ ಆಡಳಿತದ ಕಾರ್ಯಕ್ಷಮತೆಯ ಮೇಲೆ ಪ್ರಶ್ನೆಚಿಹ್ನೆ ಮೂಡುತ್ತದೆ. ಸರಕಾರವು ನಿರ್ಲಕ್ಷತೆ ತೋರಿಸುವ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು! |