ರಸ್ತೆಯ ನಡುನಡುವೆ ಮಜಾರಗಳು ಕಟ್ಟುತ್ತಿದ್ದರೆ, ಸಭ್ಯ ಸಮಾಜ ಹೇಗೆ ಇರಲು ಸಾಧ್ಯ ?

ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ ದೆಹಲಿಯ ಉಚ್ಚ ನ್ಯಾಯಾಲಯ

(ಮಜಾರ ಎಂದರೆ ಇಸ್ಲಾಮಿ ಪೀರ್ ಅಥವಾ ಫಕೀರ್ ಇವರ ಸಮಾಧಿ)

ನವದೆಹಲಿ – ದೆಹಲಿ ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ವೇಳೆ ಭಜನಪುರ ಮತ್ತು ಹಸನಪೂರ ಡಿಪೋ ಭಾಗದ ರಸ್ತೆಯ ಮೇಲೆ ಅನಧಿಕೃತ ಕಟ್ಟಲಾದ ಮಜಾರ್‌ನ ವಿಷಯವಾಗಿ ಅಸಮಧಾನ ವ್ಯಕ್ತಪಡಿಸಿದೆ.ಅದೇ ರೀತಿ ನ್ಯಾಯಾಲಯವು ದೆಹಲಿ ಸರಕಾರ ಮತ್ತು ಇತರ ವಿಭಾಗಗಳಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ‘ರಸ್ತೆಯ ನಟ್ಟನಡುವೆ ಈ ರೀತಿಯ ಧಾರ್ಮಿಕ ಕಟ್ಟಡ(ಮಜಾರ) ಕಟ್ಟಲಾಗುತ್ತಿದ್ದರೇ ಸಭ್ಯತೆ ಸಮಾಜ ಅಲ್ಲಿ ಹೇಗೆ ಇರಲು ಸಾಧ್ಯ ?’ ಎಂದು ವಿಚಾರಿಸಿದೆ.

ಅರ್ಜಿದಾರ ಎಸ್.ಡಿ. ವಿಂಡಲೇಶ ಇವರು, ಈ ೨ ಮಜಾರ್‌ನಿಂದಾಗಿ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ನಾಗರೀಕರಿಗೆ ತೊಂದರೆಯಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಈ ಮಜಾರನ್ನು ತೆರವುಗೊಳಿಸುವ ಆದೇಶ ನೀಡಬೇಕೆಂದು ಒತ್ತಾಯಿಸಿದೆ. (ಮೂಲತಃ ಈ ರೀತಿ ಏಕೆ ಒತ್ತಾಯಿಸಬೇಕಾಗುತ್ತದೆ, ಈ ರೀತಿಯ ಕಾನೂನುಬಾಹಿರ ಕಟ್ಟಡ ಕಾರ್ಯ ನಡೆಯುತ್ತಿರುವಾಗ ಸರಕಾರ, ಆಡಳಿತ ನಿದ್ದೆ ಮಾಡುತ್ತಿತ್ತೆ ? ಮತ್ತು ನಂತರ ಅದರ ಮೇಲೆ ಕ್ರಮ ಏಕೆ ಕೈಗೊಳ್ಳಲಿಲ್ಲ ? ಇದಕ್ಕೆ ಹೊಣೆಗಾರರಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! – ಸಂಪಾದಕರು) ಇದಕ್ಕೆ ದೆಹಲಿ ಸರಕಾರ ನ್ಯಾಯಾಲಯದಲ್ಲಿ, ಕಾನೂನುಬಾಹಿರ ಕಟ್ಟಡದ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮನವಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಹೇಳಿದೆ.

ಸರಕಾರ ಮೂಕ ದರ್ಶಕವಾಗಿ ಹೇಗೆ ಇರಲು ಸಾಧ್ಯ ? – ದೆಹಲಿ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಅರ್ಜಿಯಲ್ಲಿ, ಸರಕಾರ ಈ ಪ್ರಕರಣದಲ್ಲಿ ಮೂಕ ದರ್ಶಕವಾಗಿ ಹೇಗೆ ಇರಲು ಸಾಧ್ಯ ಎಂಬುದು ನಮಗೆ ಅರ್ಥವಾಗುತ್ತಿಲ್ಲ ? ಮತ್ತು ಈ ರೀತಿಯ ಕಾನೂನುಬಾಹಿರ ವಿಷಯ ಹೇಗೆ ನಡೆಯಲು ಬಿಡಲಾಗುತ್ತದೆ ! ನಮ್ಮ ಅಭಿಪ್ರಾಯದ ಪ್ರಕಾರ ಇಂತಹ ಪ್ರಕರಣದಲ್ಲಿ ರಾಜ್ಯ ಸರಕಾರ ಒಂದು ಸ್ಪಷ್ಟ, ನಿಶ್ಚಿತ ಮತ್ತು ಧೃಢವಾದ ಧೋರಣೆ ಇಟ್ಟುಕೊಳ್ಳಬೇಕು. ಈ ರೀತಿಯ ಅತಿಕ್ರಮಣ ಸಹಿಸಲಾಗುವುದಿಲ್ಲ, ಎಂಬ ಸಂದೇಶ ಅತಿಕ್ರಮಣ ಮಾಡುವವರಿಗೆ ನೀಡಬೇಕು ಮತ್ತು ಶೀಘ್ರದಲ್ಲೇ ಅತಿಕ್ರಮಣ ಮಾಡಿರುವುದು ತೆರವುಗೊಳಿಸಬೇಕು. ಹಾಗೂ ಇಂತಹವರ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನ್ಯಾಯಾಲಯವು ಸರಕಾರದ ಕಿವಿ ಹಿಂಡಿದಂತೆ ಕಟ್ಟಡಗಳಿಗೆ ಒಪ್ಪಿಗೆ ನೀಡಿದವರ ಮೇಲೆಯೂ ಕೂಡ ಕ್ರಮ ಕೈಗೊಳ್ಳಬೇಕೆಂಬ ಜನತೆಯ ಅಪೇಕ್ಷೆ ಆಗಿದೆ ! -ಸಂಪಾದಕರು