ಮಹಾಕುಂಭಮೇಳದಲ್ಲಿ ಕಾಲ್ತುಳಿತದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ – ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನದಂದು ಬೆಳಗಿನ ಜಾವ ಕಾಲ್ತುಳಿತ ಸಂಭವಿಸಿತು. ಅದರಲ್ಲಿ 30 ಜನರು ಪ್ರಾಣ ಕಳೆದುಕೊಂಡರು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿದೆ. ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ವಕೀಲ ವಿಶಾಲ ತಿವಾರಿ ಸಲ್ಲಿಸಿದ್ದಾರೆ. ಅರ್ಜಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದು, ಅಂತಹ ಘಟನೆಗಳು ಸಂಭವಿಸದಂತೆ ತಡೆಯಲು ಮಾರ್ಗಸೂಚಿಗಳು ಮತ್ತು ಸುರಕ್ಷತಾ ಕ್ರಮಗಳನ್ನು ಹೊರಡಿಸಲು ನಿರ್ದೇಶನಗಳನ್ನು ಕೋರಿದೆ.

ಮಹಾಕುಂಭ ಕ್ಷೇತ್ರದಲ್ಲಿ ಅಪಘಾತಗಳನ್ನು ತಡೆಗಟ್ಟಲು ಮತ್ತು ಅಪಘಾತಗಳ ನಂತರ ತಕ್ಷಣದ ಸಹಾಯವನ್ನು ಒದಗಿಸಲು ಈ ಕೆಳಗಿನ ಬೇಡಿಕೆಗಳನ್ನು ಮಾಡಲಾಗಿದೆ.

1. ಕಾಲ್ತುಳಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

2. ಕಾಲ್ತುಳಿತದಲ್ಲಿ ಗಾಯಗೊಂಡ 60 ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು.

3. ಕುಂಭಮೇಳ ನಡೆಯುವ ಸ್ಥಳದಲ್ಲಿ ಪ್ರತಿಯೊಂದು ರಾಜ್ಯವೂ ಸಹಾಯ ಕೇಂದ್ರವನ್ನು ಸ್ಥಾಪಿಸಲು ಅವಕಾಶ ನೀಡುವುದು.

4. ದೇಶದ ಪ್ರಮುಖ ಭಾಷೆಗಳಲ್ಲಿ ಮಾಹಿತಿ ಫಲಕ(ಡಿಸ್ ಪ್ಲೇ ಬೋರ್ಡ) ಅಳವಡಿಸಿದರೆ, ಭಕ್ತರಿಗೆ ತಮ್ಮ ಭಾಷೆಯಲ್ಲಿ ಸೂಚನೆಗಳು ದೊರೆತು ಅನುಕೂಲವಾಗುವುದು.

5. ಹಿಂದಿಯೇತರ ಜನರಿಗೆ ವೈದ್ಯಕೀಯ ಸಹಾಯ ಕಕ್ಷೆಯನ್ನು ಸ್ಥಾಪಿಸುವುದು.

6. ಉತ್ತರ ಪ್ರದೇಶ ಸರಕಾರದ ಸಮನ್ವಯದೊಂದಿಗೆ, ಎಲ್ಲಾ ರಾಜ್ಯಗಳು ಮಹಾ ಕುಂಭಮೇಳದಲ್ಲಿ ವೈದ್ಯರು ಮತ್ತು ದಾದಿಯರು ಸೇರಿದಂತೆ ತಮ್ಮದೇ ಆದ ವೈದ್ಯಕೀಯ ತಂಡಗಳನ್ನು ಸ್ಥಾಪಿಸಬೇಕು.