ಈಶ್ವರನ ಕೃಪೆಯ ಅದ್ವಿತೀಯತೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಏಕಮೇವಾದ್ವಿತೀಯ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು !
‘ಸನಾತನ ಪ್ರಭಾತ’ದಲ್ಲಿ ಶೇ. 30 ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿದ್ದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಆರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ.
ಅಧ್ಯಾತ್ಮದ ಅಧ್ಯಯನ ಮಾಡುವಲ್ಲಿ ಶಬ್ದಗಳಿಗಿರುವ ಮಿತಿ
ಅಧ್ಯಾತ್ಮದಲ್ಲಿ ಹೆಚ್ಚೆಂದರೆ ಶೇ. ೫೦ ರಷ್ಟು ಜ್ಞಾನ ವನ್ನು ಮಾತ್ರ ಶಬ್ದಗಳಿಂದ ಪಡೆದುಕೊಳ್ಳಬಹುದು. ಅದರ ಮುಂದಿನ ಎಲ್ಲ ಜ್ಞಾನವು ಅನುಭೂತಿ ಗಳಿಂದಲೇ ಸಿಗುತ್ತದೆ.
ಬುದ್ಧಿಯ ಸ್ತರದ ವಿಜ್ಞಾನ ಮತ್ತು ಬುದ್ಧಿಯನ್ನು ಮೀರಿದ ಅಧ್ಯಾತ್ಮ !
‘ವಿಜ್ಞಾನವು ಅನೇಕ ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಬುದ್ಧಿ ಯಿಂದ ಸ್ಥೂಲದ ಕಾರಣ ಹುಡುಕುತ್ತದೆ; ಏಕೆಂದರೆ ಕಾರಣವು ತಿಳಿಯದೇ, ಅದಕ್ಕೆ ಉಪಾಯ ತಿಳಿಯುವುದಿಲ್ಲ. ತದ್ವಿರುದ್ಧವಾಗಿ ಅಧ್ಯಾತ್ಮವು ಬುದ್ಧಿಯ ಆಚೆಗಿನ ಸೂಕ್ಷ್ಮದ ಶಾಸ್ತ್ರ ಮತ್ತು ಅದಕ್ಕೆ ಉಪಾಯ ತಕ್ಷಣ ತಿಳಿಸುತ್ತದೆ.
ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ !
ಹಿಂದೂಗಳೇ, ಕೇವಲ ರಾಮಮಂದಿರಕ್ಕಾಗಿ ಅಲ್ಲ, ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಶೀಲರಾಗಿರಿ; ಇಲ್ಲದಿದ್ದರೆ ಭಯೋತ್ಪಾದಕರು ರಾಮ ಮಂದಿರವನ್ನು ನಾಶ ಮಾಡಿಬಿಡುವರು.’
ಮನಸ್ಸಿನಲ್ಲಿರುವ ವಿಚಾರಗಳು ಕಡಿಮೆಯಾಗಲು, ಭಾವಾವಸ್ಥೆಯಲ್ಲಿರುವುದು ಮತ್ತು ಅವುಗಳನ್ನು ಸಾಕ್ಷಿಭಾವದಲ್ಲಿ ನೋಡುವುದು ಆವಶ್ಯಕ !
ತೀವ್ರ ಆಧ್ಯಾತ್ಮಿಕ ತೊಂದರೆಗಳಿದ್ದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಪ್ರಮಾಣವು ತೀವ್ರವಾಗಿರುತ್ತದೆ, ಅಂತಹ ಸಂದರ್ಭದಲ್ಲಿ, ಆ ವಿಚಾರಗಳು ಕಡಿಮೆಯಾಗಲು ಅವರು ಸ್ವಯಂಸೂಚನೆಗಳನ್ನು ನೀಡಿದರೆ ಉಪಯೋಗವಾಗುವುದಿಲ್ಲ.