‘ಸಾಧನೆಯ ವಿಷಯದಲ್ಲಿ ಕೆಲವರು ಕೇವಲ ಪ್ರಶ್ನೆಗಳನ್ನು ಕೇಳುತ್ತಾರೆ; ಆದರೆ ಏನೂ ಕೃತಿ ಮಾಡುವುದಿಲ್ಲ. ಅವರು ಮುಂದೆ ನೀಡಿರುವ ಲಾರ್ಡ್ ಆಲ್‌ಫ್ರೆಡ್ ಟೆನಿಸನ್ ಇವರ ಸುವಚನವನ್ನು ಗಮನದಲ್ಲಿಟ್ಟುಕೊಂಡು ಸಾಧನೆಯನ್ನು ಮಾಡಬೇಕು. ‘ಏಕೆ ಮತ್ತು ಹೇಗೆ ?’ ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳುತ್ತಿರಬೇಡಿ, ಆದರೆ ಕಾರ್ಯದಲ್ಲಿ ನಿಮ್ಮನ್ನು ಸಮರ್ಪಿಸಿಕೊಳ್ಳಿ ಮತ್ತು ಸಮಯ ಬಂದಾಗ ಸರ್ವಸ್ವವನ್ನೂ ಅರ್ಪಿಸಿಕೊಳ್ಳಿ !’ – ಲಾರ್ಡ್ ಆಲ್ ಫ್ರೆಡ್ ಟೆನಿಸನ್ (Ours is not to reason why, ours is reason but to do or die – Lord Alfred Tennyson)’
ಹಿಂದೂಗಳೇ, ‘ಅಹೋರಾತ್ರಿ ಒಟ್ಟಾಗಿರುವುದು ಕಾಲದ ಆವಶ್ಯಕತೆ ಆಗಿದೆ’, ಎಂಬುದನ್ನೂ ಅರಿತುಕೊಳ್ಳಿ !
ಭಾರತವು ಸ್ವಾತಂತ್ರ್ಯ ಪಡೆದ ನಂತರ ೭೦ ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ಹಿಂದೂದ್ವೇಷ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಸಾಮ, ದಾಮ, ದಂಡ ಮತ್ತು ಭೇದ ಇಂತಹ ಎಲ್ಲಾ ನೀತಿಗಳನ್ನು ಉಪಯೋಗಿಸಿದೆ. ಕಾಲಾಂತರದಲ್ಲಿ ಹಿಂದೂಗಳು ಒಟ್ಟು ಸೇರಿ ಕಾಂಗ್ರೆಸ್ಸಿನ ಅಸ್ತಿತ್ವವನ್ನು ಸಮಾಪ್ತಗೊಳಿಸಿದ್ದಾರೆ. ಇದರಿಂದ ಹಿಂದೂಗಳೇ, ತಮ್ಮ ಒಗ್ಗಟ್ಟಿನ ಬಲವನ್ನು ತಿಳಿದುಕೊಳ್ಳಿ. ಕೇವಲ ಅಧಿಕಾರ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ’ ಸಂಘಟಿತರಾಗಿರುವುದು ಕಾಲದ ಆವಶ್ಯಕತೆ ಯಾಗಿದೆ’, ಎಂಬುದನ್ನು ಗಮನದಲ್ಲಿಡಿ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ