ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ಸಾಧನೆ ಕಲಿಸದ್ದರಿಂದ ಮಕ್ಕಳು ನೀತಿವಂತರಾಗಿಲ್ಲ. ಈ ಕಾರಣದಿಂದ ದೊಡ್ಡವರಾದಾಗ ಅವರು ಬಲಾತ್ಕಾರ, ಭ್ರಷ್ಟಾಚಾರ, ಗೂಂಡಾಗಿರಿ ಇತ್ಯಾದಿ ಮಾಡುತ್ತಾರೆ. ಆ ಸಮಯದಲ್ಲಿ ಬಲಾತ್ಕಾರ ಇತ್ಯಾದಿ ಮಾಡುವವರನ್ನು ತಡೆಯಲು ಪೊಲೀಸರ ಆವಶ್ಯಕತೆ ಇರುತ್ತದೆ. ಇಂದಿನ ಪೊಲೀಸರು ಸಹ ಭ್ರಷ್ಟಾಚಾರಿಗಳಾಗಿದ್ದಾರೆ. ಭ್ರಷ್ಟಾಚಾರ ಇತ್ಯಾದಿ ಮಾಡುವವರಿಗೆ ಮತ್ತು ಭ್ರಷ್ಟಾಚಾರಿ ಪೊಲೀಸರನ್ನು ತಡೆಯಲು ಸರಕಾರಿ ಅಧಿಕಾರಿಗಳ ಆವಶ್ಯಕತೆ ಇರುತ್ತದೆ. ಸರಕಾರಿ ಅಧಿಕಾರಿಗಳು ಸಹ ಭ್ರಷ್ಟಾಚಾರಿಗಳಾಗಿದ್ದಾರೆ. ಅವರ ಬೆಂಬಲಕ್ಕೆ ಭ್ರಷ್ಟಾಚಾರಿ ರಾಜಕಾರಣಿಗಳಿರುತ್ತಾರೆ. ಈ ಕಾರಣದಿಂದ ಕಲಿಯುಗ ಉತ್ತುಂಗದಲ್ಲಿದೆ. ಇವೆಲ್ಲವೂ ಸಂಭವಿಸಬಾರದೆಂದು ಅಪರಾಧ ನಡೆಯುವುದರ ಕಾರಣದ ಮೂಲಕ್ಕೆ ಹೋಗಿ ಉಪಾಯ ಮಾಡಬೇಕು. ಅಂದರೆ ಸಾಧನೆ ಕಲಿಸಬೇಕು. ಇಂದು ಇದು ಯಾರಿಗೂ ತಿಳಿಯುವುದಿಲ್ಲ, ಈ ಕಾರಣದಿಂದ ದೇಶವು ಪರಾಕಾಷ್ಠೆಯ ರಸಾತಳಕ್ಕೆ ತಲುಪಿದೆ. ಇದಕ್ಕೆ ಒಂದೇ ಉಪಾಯವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಎಲ್ಲರಿಗೂ ಸಾಧನೆ ಕಲಿಸುವುದು.’
ಎಲ್ಲಿ ರಾಷ್ಟ್ರಪ್ರಮುಖರು ಮತ್ತು ಎಲ್ಲಿ ಋಷಿಮುನಿಗಳು !
‘ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇಲ್ಲಿಯ ತನಕದ ಎಷ್ಟು ರಾಷ್ಟ್ರಪತಿಗಳ ಮತ್ತು ಪ್ರಧಾನಮಂತ್ರಿಗಳ ಹೆಸರು ಜನರಿಗೆ ನೆನಪಿದೆ ? ತದ್ವಿರುದ್ಧ ಋಷಿ-ಮುನಿಗಳ ಹೆಸರುಗಳನ್ನು ಸಾವಿರಾರು ವರ್ಷಗಳಿಂದ ನೆನಪಿನಲ್ಲಿಟ್ಟು ಕೊಂಡಿದ್ದಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ