‘ಕೊರೊನಾ ಲಸೀಕರಣದಲ್ಲಿ ಜಾತ್ಯತೀತವಾದಿಗಳಿಂದ ಹಿಂದೂ-ಮುಸ್ಲಿಮ್ ಬೇಧ’ ಈ ವಿಷಯದ ಮೇಲೆ ಆನ್‌ಲೈನ್ ವಿಶೇಷ ಚರ್ಚಾಕೂಟ
ರಾಜಸ್ಥಾನದ ಉಚ್ಚನ್ಯಾಯಾಲಯದ ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ ಅವರು, ಅಲ್ಪಸಂಖ್ಯಾತ ಆಯೋಗದ ಸ್ಥಾಪನೆ ಮಾಡುವುದೆಂದರೆ ಸಂವಿಧಾನದ ಮೂಲಭೂತ ಸಿದ್ಧಾಂತಗಳ ಅವಹೇಳನೆಯಾಗಿದೆ. ಪ್ರತಿಯೊಂದು ಪ್ರಾಣಿಗೆ ಬದುಕುವ ಹಕ್ಕಿದೆ. ಇಂತಹ ಸಮಯದಲ್ಲಿ ಸರಕಾರದಿಂದ ಧರ್ಮದ ಆಧಾರದಲ್ಲಿ ಭೇದಭಾವ ಮಾಡುವುದು, ಅಂದರೆ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೇಳಿದರು.