ನವ ದೆಹಲಿ – ಅಮೇರಿಕಾದಿಂದ ಪ್ರತಿ ವರ್ಷ ಪ್ರಸ್ತುತಪಡಿಸುವ ‘ಕಂಟ್ರಿ ರಿಪೋರ್ಟ ಆಫ್ ಟೆರೇರಿಸಂ’ ಈ ಅಂತರಾಷ್ಟ್ರೀಯ ಭಯೋತ್ಪಾದಕರ ಕುರಿತಾದ ವರದಿಯಲ್ಲಿ ಪಾಕಿಸ್ತಾನದ ಹೆಸರು ಕೈ ಬಿಟ್ಟಿದ್ದರಿಂದ ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ. ಭಾರತ ಸರಕಾರವು ಅನೇಕ ಸಲ ಪಾಕಿಸ್ತಾನದ ಮೇಲೆ ಭಯೋತ್ಪಾದಕರಿಗೆ ಪ್ರಶಿಕ್ಷಣ, ಹಣ ಮತ್ತು ಸಹಾಯ ನೀಡಿರುವ ಆರೋಪ ಮಾಡಿದೆ. ಪಾಕಿಸ್ತಾನವು ಇಲ್ಲಿಯವರೆಗೆ ಭಾರತದ ಮೇಲೆ ಅನೇಕ ಭಯೋತ್ಪಾದಕ ದಾಳಿಗಳು ನಡೆಸಿದೆ. ಅಮೇರಿಕಾದ ಭಯೋತ್ಪಾದಕರ ಪಟ್ಟಿಯಲ್ಲಿ ಇಂತಹ ಅನೇಕ ಪಾಕಿಸ್ತಾನಿ ಭಯೋತ್ಪಾದಕರು ಇದ್ದಾರೆ, ಅವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ.
೧. ಈ ವರದಿಯಲ್ಲಿ ಕಳೆದ ಕೆಲವು ದಶಕಗಳಿಂದ ಇರಾನನ್ನು ‘ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ದೇಶ’ ಎಂದು ಹೇಳಲಾಗಿದೆ. ಹಿಜ್ಬುಲ್ಲಾ, ಹಮಾಸ್ ಮತ್ತು ಹುತಿ ಈ ಜಿಹಾದಿ ಭಯೋತ್ಪಾದಕ ಸಂಘಟನೆಗೆ ಇರಾನ್ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದರಿಂದ ಅದರ ಹೆಸರು ತೆಗೆದುಕೊಳ್ಳಲಾಗಿದೆ.
೨. ಇರಾನ್ ಅಲ್ಲದೆ ಸಿರಿಯಾ, ಉತ್ತರ ಕೋರಿಯಾ ಮತ್ತು ಕ್ಯೂಬಾ ಇವುಗಳಂತಹ ಇತರ ದೇಶಗಳು ಕೂಡ ‘ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ದೇಶ’ ಎಂದು ಘೋಷಿಸಲಾಗಿದೆ. ಇರಾನನಿಂದ ಅನೇಕ ಭಯೋತ್ಪಾದಕ ಗುಂಪುಗಳಿಗೆ ಹಣ, ಪ್ರಶಿಕ್ಷಣ, ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಪೂರೈಸಿದೆ. ಇದರಿಂದ ಅನೇಕ ಭಯೋತ್ಪಾದಕ ದಾಳಿಗಳು ನಡೆಸಲಾಗಿದೆ. ಹಮಾಸದಿಂದ ಅಕ್ಟೋಬರ್ ೭, ೨೦೨೩ ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು. ಅದರ ನಂತರ ಇರಾನ್ ಬೆಂಬಲಿಸುವ ಗುಂಪು ಅವರ ಉದ್ದೇಶ ಮುಂದುವರೆಸಲು ಸಂಘರ್ಷದ ಲಾಭ ಪಡೆಯುತ್ತಿದೆ’, ಎಂದು ಇದರಲ್ಲಿ ಹೇಳಿದ್ದಾರೆ.
ಸಂಪಾದಕೀಯ ನಿಲುವುಇದರಿಂದ ಅಮೆರಿಕ ಎಷ್ಟು ವಿಶ್ವಾಸದ್ರೋಹಿಯಾಗಿದೆ, ಇದು ಮತ್ತೊಮ್ಮೆ ಗಮನಕ್ಕೆ ಬರುತ್ತದೆ ! ಒಂದು ಕಡೆ ‘ಜಗತ್ತಿನಲ್ಲಿನ ಭಯೋತ್ಪಾದಕರಿಂದ ನಾವೇ ರಕ್ಷಿಸುವೆವು’, ಎಂದು ಬೀಗುತ್ತದೆ ಮತ್ತು ಇನ್ನೊಂದು ಕಡೆ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ, ಈ ರೀತಿ ದ್ವಿಮುಖ ನೀತಿ ಅಮೇರಿಕಾ ಅನುಸರಿಸುತ್ತದೆ. ಇಂತಹ ಅಮೇರಿಕಾದ ಜೊತೆಗೆ ಭಾರತ ಜಾಗರೂಕತೆಯಿಂದ ಇರುವುದು ಆವಶ್ಯಕವಾಗಿದೆ ! |