ರೈಲುಗಳ ಹಳಿತಪ್ಪುವ ಹಿಂದೆ ಮದರಸಾಗಳ ಕೈವಾಡದ ಶಂಕೆ ! – ರಾಷ್ಟ್ರೀಯ ತನಿಖಾ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳ

ರಾಷ್ಟ್ರೀಯ ತನಿಖಾ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸುತ್ತಿದೆ

ನವ ದೆಹಲಿ – ರಾಷ್ಟ್ರೀಯ ತನಿಖಾ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ಉತ್ತರ ಪ್ರದೇಶದ ಝಾನ್ಸಿ ಮತ್ತು ಕಾನ್ಪುರದಲ್ಲಿ ರೈಲು ಹಳಿತಪ್ಪಿಸುವ ಸಂಚಿನಲ್ಲಿ ಮದರಸಾಗಳ ಕೈವಾಡವಿರುವ ಬಗ್ಗೆ ಮಾಹಿತಿ ಲಭಿಸಿದೆ. ಇಸ್ಲಾಮಿಕ್ ಕಟ್ಟರವಾದಿಗಳು ಮತ್ತು ಭಯೋತ್ಪಾದಕರು ಮುಸ್ಲಿಂ ಯುವಕರನ್ನು ಬ್ರೈನ್ ವಾಶ್ ಮಾಡಲು ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲು ಆನ್ಲೈನ್ ಮಾಧ್ಯಮವನ್ನು ಬಳಸುತ್ತಿದ್ದಾರೆ. ಮದರಸಾಗಳೊಂದಿಗೆ ಅವರು ಸಂಬಂಧ ಹೊಂದಿದ್ದಾರೆ. ಇದನ್ನು ಕಂಡುಹಿಡಿಯಲು, ಈ ತನಿಖಾ ದಳಗಳು ಅನೇಕ ಸ್ಥಳಗಳ ಮೇಲೆ ದಾಳಿ ನಡೆಸುತ್ತಿವೆ. ಹಾಗೆಯೇ ಇದರ ಹಿಂದಿರುವ ವಿದೇಶಿ ಬಂಡವಾಳದ ಮೂಲಗಳನ್ನೂ ಹುಡುಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2 ದಿನಗಳ ಹಿಂದೆ ಝಾನ್ಸಿ ಮೇಲೆ ದಾಳಿ ನಡೆಸಿ ಮದರಸಾ ಶಿಕ್ಷಕ ಮುಫ್ತಿ ಖಾಲಿದ್ ನದ್ವಿ ಅವರನ್ನು 18 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈ ಸಮಯದಲ್ಲಿ, ಸ್ಥಳೀಯ ಮುಸ್ಲಿಮರು, ವಿಶೇಷವಾಗಿ ಮಹಿಳೆಯರು, ನದ್ವಿ ಅವರನ್ನು ದಳದ ಅಧಿಕಾರಿಗಳಿಂದ ರಕ್ಷಿಸಿದ್ದರು; ಆದರೆ ನಂತರ ಮತ್ತೆ ಬಂಧಿಸಲಾಯಿತು. ವಿಚಾರಣೆ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ.

1. ಕಳೆದ 3 ತಿಂಗಳುಗಳಲ್ಲಿ ಸಾಬರಮತಿ ಎಕ್ಸ್ಪ್ರೆಸ್ ಮತ್ತು ಕಾನಲಿಡಿ ಎಕ್ಸ್ಪ್ರೆಸ್ ಈ ಮಹತ್ವದ ರೈಲುಗಳು ಝಾನ್ಸಿ ಮತ್ತು ಕಾನ್ಪುರದ ಹತ್ತಿರ ಹಳಿತಪ್ಪಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ‘ವಂದೇ ಭಾರತ್’ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.

2. ಆನ್ಲೈನ್ ಮೂಲಕ ಧಾರ್ಮಿಕ ಶಿಕ್ಷಣ ನೀಡುವ ಅನೇಕ ಜನರ ವಿಡಿಯೋ ಬಹಿರಂಗವಾಗಿದೆ. ಅದರಲ್ಲಿ ಅನುಯಾಯಿಗಳನ್ನು ರೈಲುಗಳನ್ನು ಹಳಿತಪ್ಪಿಸಲು ಪ್ರಚೋದಿಸಲಾಗಿದೆ. ತನಿಖಾ ದಳಗಳು ಈಗ ಅಂಥವರನ್ನು ಹುಡುಕುತ್ತಿವೆ.

ಸಂಪಾದಕೀಯ ನಿಲುವು

ಇದರಿಂದ ಜಿಹಾದಿ ಭಯೋತ್ಪಾದನೆ ಕೇವಲ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಕ್ಕೆ ಸೀಮಿತವಾಗದೆ ಇಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ಭಾರತಕ್ಕೆ ಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಈಗ ದೇಶದಲ್ಲಿ ಮದರಸಾಗಳನ್ನು ನಿಷೇಧಿಸಬೇಕೆಂಬ ಆಗ್ರಹಿಸುವುದು ಈಗ ಅಅಗತ್ಯವಾಗಿದೆ. ಇದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು !