‘ಒಟ್ಟಾಗಿದ್ದರೆ, ಸುರಕ್ಷಿತವಾಗಿರುವೆವು’ ಪ್ರಧಾನಮಂತ್ರಿ ಅವರ ಈ ಮಂತ್ರದ ಆಧಾರದಲ್ಲಿ ನಡೆಯಬೇಕು ! – ಪ್ರಮೋದ ಸಾವಂತ್, ಮುಖ್ಯಮಂತ್ರಿ, ಗೋವಾ

  • ‘ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ’ ನ ವಾರ್ಷಿಕ ಸಭೆ

  • ‘ಸಮಾನ ನಾಗರಿಕ ಕಾನೂನು’ ದೇಶದಲ್ಲಿ ಜಾರಿ ಆಗುವುದರ ಕುರಿತು ಪ್ರತಿಪಾದನೆ !

ಮುಂಬಯಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ಆತ್ಮ ನಿರ್ಭರ ಭಾರತ’ ಅಭಿಯಾನ ಆರಂಭಿಸಿ ‘ಏಕ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದರೆ, ಸುರಕ್ಷಿತವಾಗಿರುವೆವು) ಮಂತ್ರ ನೀಡಿದ್ದಾರೆ. ಅದರ ಆಧಾರದಲ್ಲಿ ನಾವು ವಿಕಾಸದ ದೃಷ್ಟಿಯಿಂದ ಬಹಳಷ್ಟು ಮಾಡಬಹುದು. ಆದ್ದರಿಂದ ಪ್ರತಿಯೊಬ್ಬರೂ ಈ ಮಂತ್ರದ ಜೊತೆಗೆ ನಡೆಯಬೇಕು, ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ ಇವರು ಪ್ರತಿಪಾದಿಸಿದರು. ‘ವಾಂದ್ರೆ ಕುರ್ಲಾ ಸಂಕುಲ’ದಲ್ಲಿನ ‘ಜಿಯೋ ವರ್ಡ್ ಕನ್ವೆನ್ಷನ್ ಸೆಂಟರ್’ ಇಲ್ಲಿ ಆಯೋಜಿಸಿರುವ ‘ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ’ ನ ವಾರ್ಷಿಕ ಸಭೆಗೆ ಉದ್ದೇಶಿಸಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಾವಂತ್ ಇವರು ಮಾತು ಮುಂದುವರೆಸಿ,

೧. ಗೋವಾದಲ್ಲಿ ಹಿಂದೆ ಮತಾಂತರದ ಘಟನೆಗಳು ಯಾವಾಗ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದವೋ ಮಂದಿರಗಳು ಧ್ವಂಸ ಮಾಡುತ್ತಿದ್ದರು, ಆಗ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರು ಅದನ್ನು ತಡೆಯುವ ಕೆಲಸ ಮಾಡಿದರು. ಅದರ ನಂತರ ಹೀಗೆ ಆಗಬಾರದೆಂದು ಅವರು ಪೋರ್ತುಗಿಜರ ಜೊತೆಗೆ ಒಪ್ಪಂದ ಮಾಡಿಕೊಂಡರು. ಅದರ ನಂತರ ಗೋವಾದಲ್ಲಿ ಮತ್ತೆ ಅಂತಹ ಘಟನೆಗಳು ಘಟಿಸಲಿಲ್ಲ.

೨. ‘ಶಿವಾಜಿ ಜಯಂತಿ ಮತ್ತು ಶಿವರಾಜ್ಯಾಭಿಷೇಕೋತ್ಸವ ಆಚರಿಸುವ ಮಹಾರಾಷ್ಟ್ರದ ನಂತರ ಗೋವಾ ರಾಜ್ಯ ಇರಬಹುದು’, ಎಂದು ನನಗೆ ಅನಿಸುತ್ತದೆ.

೩. ‘ಸಮಾನ ನಾಗರಿಕ ಕಾನೂನು’ ದೇಶದಲ್ಲಿ ಜಾರಿಗೊಳಿಸುವುದು ಆವಶ್ಯಕವಾಗಿದೆ. ಗೋವಾದಲ್ಲಿ ಜಾರಿಗೊಳಿಸಿದ ನಂತರ ಯಾವುದೇ ಧರ್ಮ ಅಥವಾ ಜಾತಿಗೆ ಅದರ ತೊಂದರೆ ಆಗಿಲ್ಲ. ದೇಶಾದ್ಯಂತ ಆದಷ್ಟು ಬೇಗನೆ ‘ಸಮಾನ ನಾಗರಿಕ ಕಾನೂನು’ ಜಾರಿಗೊಳಿಸಬೇಕು.

೪. ಜಗತ್ತಿನಲ್ಲಿ ಎಲ್ಲು ಇರದಂತಹ ‘ಸ್ಟಾಕ್ ಮಾರ್ಕೆಟ್’ (ಶೇರ್ ಮಾರುಕಟ್ಟೆ) ಭಾರತದಲ್ಲಿ ಇದೆ. ಭಾರತದಲ್ಲಿನ ನಾಗರಿಕರ ಕೆಳಮಟ್ಟದ ಉದ್ಯಮಿಗಳ ಮೇಲೆ ವಿಶ್ವಾಸವಿದೆ. ಆದ್ದರಿಂದ ಅವರು ಬಹಳ ವಿಶ್ವಾಸದಿಂದ ಅವರ ಕಂಪನಿಗಳಲ್ಲಿ ತಮ್ಮ ಹೂಡಿಕೆ ಮಾಡುತ್ತಾರೆ. ಉದ್ಯಮಿಗಳ ಮೇಲಿನ ವಿಶ್ವಾಸವೇ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ. ಬರುವ ೫೦ ವರ್ಷಗಳಲ್ಲಿ ಭಾರತದ ಆರ್ಥಿಕ ಪ್ರಗತಿ ಬೃಹತ್ ಪ್ರಮಾಣದಲ್ಲಿ ಆಗುವುದು.