ಹಿಂದೂ ಸಂಘಟನೆಗಳ ಪ್ರತಿಭಟನೆಯ ಬಳಿಕ ಮುಖ್ಯಾಧ್ಯಾಪಕರಿಂದ ಕ್ಷಮೆಯಾಚನೆ !
ಋಷಿಕೇಶ (ಉತ್ತರಾಖಂಡ) – ಇಲ್ಲಿ ಹಣೆ ಮೇಲೆ ಕುಂಕುಮವನ್ನು ಇಟ್ಟುಕೊಂಡು ಶಾಲೆಗೆ ಬಂದಿದ್ದಕ್ಕೆ 8 ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಯಿಂದ ಹೊರಗೆಹಾಕಿದ್ದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲೆಯ ಆಡಳಿತವನ್ನು ಘೇರಾವ ಹಾಕಿದರು. ಮುಖ್ಯೋಪಾಧ್ಯಾಯರು `ಮುಂದೆ ಹೀಗಾಗುವುದಿಲ್ಲ’ ಎಂದು ಭರವಸೆ ನೀಡಿದ ಬಳಿಕ ಪ್ರಕರಣ ಶಾಂತವಾಯಿತು.
ಕುಂಕುಮ ಹಚ್ಚಿಕೊಂಡು ಬಂದಿದ್ದರಿಂದ ಶಿಕ್ಷಕಿಯು ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಹಾಕಿ, ಕುಂಕುಮ ಅಳಿಸಿಕೊಂಡೇ ತರಗತಿಯಲ್ಲಿ ಬರುವಂತೆ ಹೇಳಿದರು. ಅದಕ್ಕೆ ಆ ಹುಡುಗಿ ಕುಂಕಮ ಅಳಿಸಿಕೊಂಡು ತರಗತಿಯೊಳಗೆ ಬಂದಳು. ಮನೆಗೆ ಹೋದ ಬಳಿಕ ಅವಳು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ಮರುದಿನ ವಿದ್ಯಾರ್ಥಿನಿಯ ಕುಟುಂಬದವರೊಂದಿಗೆ ರಾಷ್ಟ್ರೀಯ ಹಿಂದೂ ಶಕ್ತಿ ಸಂಘಟನೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಶಾಲೆಗೆ ಆಗಮಿಸಿ ಪ್ರಾಂಶುಪಾಲರನ್ನು ಘೇರಾವ ಹಾಕಿದರು. ಆಗ ಪ್ರಾಂಶುಪಾಲರು ಶಿಕ್ಷಕಿಯ ಪರವಾಗಿ ಲಿಖಿತ ಕ್ಷಮೆಯಾಚಿಸಿ ಈ ಘಟನೆಗೆ ಅವರು ವಿಷಾದ ವ್ಯಕ್ತಪಡಿಸಿ, ‘ಮುಂದೆ ಇಂತಹ ಘಟನೆ ನಡೆಯುವುದಿಲ್ಲ’ ಎಂದು ಭರವಸೆ ನೀಡಿದರು.
ಸಂಪಾದಕೀಯ ನಿಲುವುಇನ್ನು ಮುಂದೆ ಯಾರೂ ಈ ರೀತಿ ಮಾಡಲು ಧೈರ್ಯ ಮಾಡಬಾರದು ಎಂದು ಶಿಕ್ಷಣ ಇಲಾಖೆಯು ಸರಿಯಾದ ಪಾಠವನ್ನು ಕಲಿಸುವುದು ಅಗತ್ಯವಾಗಿದೆ. ಪ್ರತಿ ಬಾರಿಯೂ ಪೋಷಕರು ಮತ್ತು ಹಿಂದೂ ಸಂಘಟನೆಗಳು ಈ ರೀತಿ ಪ್ರತಿಭಟನೆಯನ್ನು ಮಾಡುತ್ತಿರಬೇಕೇ ? |