American Hindu MP Statement : ಅಮೇರಿಕಾವು ಬಾಂಗ್ಲಾದೇಶದ ಮೇಲೆ ಕ್ರಮ ಕೈಗೊಳ್ಳುವ ಸಮಯ ಬಂದಿದೆ ! – ಅಮೇರಿಕಾದ ಸಂಸದ ಶ್ರೀ ಠಾಣೆದಾರ್

ಭಾರತೀಯ ಮೂಲದ ಅಮೇರಿಕಾದ ಸಂಸದ ಶ್ರೀ ಠಾಣೆದಾರ್ ಇವರ ಆಗ್ರಹ

ಅಮೇರಿಕಾದ ಸಂಸದ ಶ್ರೀ ಠಾಣೆದಾರ್

ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಗುಂಪಿನಿಂದ ಹಿಂದುಗಳ ದೇವಸ್ಥಾನಗಳು ಧ್ವಂಸ ಮಾಡಿದ್ದಾರೆ. ಈಗ ಅಮೆರಿಕಾದ ಸಂಸದ ಮತ್ತು ಅಮೆರಿಕ ಸರಕಾರ ಇವರು ಬಾಂಗ್ಲಾದೇಶದ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ನಿಲ್ಲಿಸುವುದಕ್ಕಾಗಿ ಇಲ್ಲಿ ಪ್ರತ್ಯೇಕ ಅಗತ್ಯ ಸಾಧನ ಬಳಸುವ ಅಗತ್ಯವಿದೆ ಎಂದು ಭಾರತೀಯ ಮೂಲದ ಅಮೆರಿಕಾದ ಸಂಸದ ಶ್ರೀ ಠಾಣೆದಾರ್ ಇವರು ಆಗ್ರಹಿಸಿದ್ದಾರೆ.

೧. ಶೇಖ ಹಸೀನಾ ಸರಕಾರ ಪದಚ್ಯುತಗೊಂಡ ನಂತರ ಶ್ರೀ ಠಾಣೆದಾರ್ ಇವರು ಹಿಂದುಗಳ ಮೇಲಿನ ದಾಳಿಯ ಅಂಶಗಳು ನಿರಂತರವಾಗಿ ಮಂಡಿಸುತ್ತಿದ್ದಾರೆ. ಅವರು ಮಾತನಾಡಿ, ಬಾಂಗ್ಲಾದೇಶ ೧೯೭೧ ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಾಗಲಿಂದಲೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇತ್ತೀಚಿಗೆ ಓರ್ವ ಹಿಂದೂ ಅರ್ಚಕರಿಗೆ ಬಂಧಿಸಿ ಅವರ ನ್ಯಾಯವಾದಿಯ ಹತ್ಯೆ ಮಾಡುವ ಪ್ರಯತ್ನ ಮಾಡಿರುವುದನ್ನು ನಾವು ನೋಡಿದ್ದೇವೆ.

೨. ಭಾರತೀಯ ಅಮೆರಿಕ ಸಂಸದ ರಾಜಾ ಕೃಷ್ಣಮೂರ್ತಿ ಇವರು ಸಂಸದ ರುಬಿಯೊ ಇವರಿಗೆ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ, ಮುಖ್ಯವಾಗಿ ಹಿಂದುಗಳ ಮೇಲಿನ ಹಿಂಸಾಚಾರದ ಅಂಶಗಳು ಪರಿಹರಿಸಲು ವಿನಂತಿಸಿದ್ದಾರೆ. ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುವ ದಾಳಿಯ ವಿರುದ್ಧ ಬೃಹತ್ ಪ್ರಮಾಣದಲ್ಲಿ ಭಾರತೀಯ ಅಮೆರಿಕದವರು ಪ್ರತಿಭಟನೆ ನಡೆಸಿದರು.

ಸಂಪಾದಕೀಯ ನಿಲುವು

ಅಮೇರಿಕಾದಲ್ಲಿನ ಓರ್ವ ಹಿಂದೂ ಸಂಸದ ಅವರ ಸರಕಾರದ ಬಳಿ ಈ ರೀತಿ ಆಗ್ರಹಿಸುತ್ತಾರೆ; ಆದರೆ ಭಾರತದಲ್ಲಿನ ಒಬ್ಬನೇ ಒಬ್ಬ ಹಿಂದೂ ಸಂಸದ ಕೇಂದ್ರ ಸರಕರದ ಬಳಿ ಈ ರೀತಿಯ ಆಗ್ರಹ ಮಾಡುವುದಿಲ್ಲ, ಇದು ಲಜ್ಜಾಸ್ಪದ !