Bangladesh Court Rejects Chinmoy’s Bail Application: ಚಿನ್ಮಯ ಪ್ರಭು ಇವರ ಜಾಮೀನಿಗಾಗಿ ಸ್ಥಳೀಯ ನ್ಯಾಯವಾದಿಗಳಿಗೆ ಕರೆತರಲು ನ್ಯಾಯಾಲಯದ ಆದೇಶ

ನ್ಯಾಯವಾದಿ (ಪೂ.) ರವೀಂದ್ರ ಘೋಷ್ ಇವರು ಪಡೆದಿರುವ ವಕೀಲಿ ಪತ್ರ ನಿರಾಕರಣೆ !

ಚೀತಗಾವ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತಗಾವ್ ಇಲ್ಲಿಯ ಮೆಟ್ರೋಪಾಲಿಟನ್ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದ್ ಸೈಫುಲ್ ಇಸ್ಲಾಂ ಇವರು ಇಸ್ಕಾನ್‌ನ ಸದಸ್ಯ ಚಿನ್ಮಯ ಪ್ರಭು ಇವರ ಪ್ರಕರಣದಲ್ಲಿ ಡಿಸೆಂಬರ್ ೧೨ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ (ಪೂ.) ರವೀಂದ್ರ ಘೋಷ್ ಇವರಿಗೆ ಈ ಮೊಕದ್ದಮೆಯಲ್ಲಿ ಚಿತಗಾವ ಇಲ್ಲಿಯ ಸ್ಥಳೀಯ ನ್ಯಾಯವಾದಿ ಹುಡುಕಲು ಹೇಳಿದ್ದಾರೆ. ಅದರ ನಂತರ ನ್ಯಾಯವಾದಿ (ಪೂ.) ರವೀಂದ್ರ ಘೋಷ ಇವರು ಸ್ಥಳಿಯ ನ್ಯಾಯವಾದಿ ಸುಮಿತ ಆಚಾರ್ಯ ಇವರನ್ನು ನೇಮಿಸಿದರು. ಈ ಹಿಂದೆ ನ್ಯಾಯಾಲಯವು ನ್ಯಾಯವಾದಿ (ಪೂ.) ರವೀಂದ್ರ ಘೋಷ್ ಇವರ ಬಳಿ ಪ್ರಭು ಇವರ ವಕೀಲಿ ಪತ್ರ ಇಲ್ಲ ಎಂದು ಹೇಳುತ್ತಾ ಚೈತನ್ಯ ಪ್ರಭು ಇವರ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ನ್ಯಾಯವಾದಿ (ಪೂ.) ರವೀಂದ್ರ ಘೋಷ್ ಇವರು, ಡಿಸೆಂಬರ್ ೧೧ ರಂದು ನ್ಯಾಯಾಲಯವು ನನ್ನ ಮಾತು ಕೇಳಿಸಿಕೊಳ್ಳಲಿಲ್ಲ; ಕಾರಣ ನನ್ನ ಹತ್ತಿರ ಚೈತನ್ಯ ಪ್ರಭು ಇವರ ವಕೀಲಿ ಪತ್ರ ಇರಲಿಲ್ಲ. ನಂತರ ನನಗೆ ಅದು ದೊರೆಯಿತು. ಚಿನ್ಮಯ ಪ್ರಭು ಇವರು ಜೈಲಿನಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಅದರ ಕುರಿತು ನ್ಯಾಯಾಲಯವು ನನಗೆ ಸ್ಥಳೀಯ ನ್ಯಾಯವಾದಿಯನ್ನು ಜೊತೆಗೆ ಕರೆತನ್ನಿ ಎಂದು ಹೇಳಿದರು. ಅದರಂತೆ ನಾನು ನ್ಯಾಯವಾದಿ ಸುಮಿತ ಆಚಾರ್ಯ ಇವರನ್ನು ಜೊತೆಗೆ ಕರೆದುಕೊಂಡಿದ್ದೇನೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ನ್ಯಾಯಾಲಯ ಕೂಡ ಹಿಂದುದ್ವೇಷಿಯಾಗಿದ್ದು ಅದು ಹಿಂದುಗಳಿಗೆ ಕಿರುಕುಳ ನೀಡುತ್ತದೆ, ಇದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಇದರ ವಿರುದ್ಧ ಭಾರತದಲ್ಲಿ ಪ್ರಜಾಪ್ರಭುತ್ವ ಪ್ರೇಮಿ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !