|
ಸಂಭಲ್ (ಉತ್ತರ ಪ್ರದೇಶ) – ಇಲ್ಲಿನ ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಡಿಸೆಂಬರ್ 14 ರಂದು ಬೆಳಿಗ್ಗೆಯಿಂದ ಜಿಲ್ಲಾಡಳಿತವು ಅತಿಕ್ರಮಣ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಇಲ್ಲಿ ಮಹಮೂದ ಖಾ ಸರಾಯ ಪ್ರದೇಶದಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಶಿವ ಮಂದಿರ ಪತ್ತೆಯಾಗಿದೆ. ಈ ದೇವಸ್ಥಾನದಲ್ಲಿ ಶಿವಲಿಂಗ, ಶ್ರೀ ಹನುಮಾನ, ಶ್ರೀ ಕಾರ್ತಿಕೇಯ ಮೂರ್ತಿಗಳು ಕಂಡುಬಂದಿವೆ. ಆಡಳಿತ ಮತ್ತು ಪೊಲೀಸರು ಈ ದೇವಸ್ಥಾನವನ್ನು ತೆರೆದಿದ್ದಾರೆ. ಈ ದೇವಸ್ಥಾನವನ್ನು 1978 ರ ಹಿಂದೂ-ಮುಸ್ಲಿಂ ಗಲಭೆಯ ಸಮಯದಲ್ಲಿ ಮುಚ್ಚಲಾಗಿತ್ತು. ಈ ಗಲಭೆಯ ನಂತರ, ಈ ಪ್ರದೇಶದ 20 ರಿಂದ 25 ಹಿಂದೂ ಕುಟುಂಬಗಳು ಪಲಾಯನ ಮಾಡಿದ್ದವು. ಈ ದೇವಸ್ಥಾನವು ಅವರಲ್ಲಿನ ಒಂದು ಹಿಂದೂ ಕುಟುಂಬಕ್ಕೆ ಸೇರಿತ್ತು. ಅವರು ಈ ದೇವಸ್ಥಾನವನ್ನು ಮಾರಾಟ ಮಾಡಿದರು ಮತ್ತು ಅಂದಿನಿಂದ ಅದು ಮುಚ್ಚಿತ್ತು. ಇಲ್ಲಿನ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಅವರ ಮನೆಯಿಂದ ಈ ದೇವಸ್ಥಾನವು ಹತ್ತಿರದಲ್ಲಿದೆ. (ಹೀಗಿದ್ದರೂ ಅವರು ಈ ದೇವಸ್ಥಾನದ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಇದು ಸಮಾಜವಾದಿ ಪಕ್ಷದ ಮತ್ತು ಅದರಲ್ಲಿಯೂ ಮುಸ್ಲಿಂ ಸಂಸದರ ಮನಃಸ್ಥಿತಿ ಹೇಗಿದೆ ? ಎನ್ನುವುದು ಗಮನಕ್ಕೆ ಬರುತ್ತದೆ ! – ಸಂಪಾದಕರು) ಜಿಲ್ಲಾದಂಡಾಧಿಕಾರಿ ರಾಜೇಂದ್ರ ಪೆನ್ಸಿಯಾ ಮತ್ತು ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ ಬಿಷ್ಣೋಯಿ ಅವರ ಮೇಲ್ವಿಚಾರಣೆಯಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು. ಮತ್ತು ಇಲ್ಲಿ ಕಟ್ಟಡ ನಿರ್ಮಾಣ ಮಾಡಿ ಮುಚ್ಚಲಾಗಿದ್ದ ಬಾವಿಯನ್ನು ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ಈ ಮನೆಯ ಮಾಲೀಕರ ಶೋಧ ನಡೆಸಲಾಗುತ್ತಿದೆ. ಪುರಾತತ್ವ ಇಲಾಖೆಗೆ ದೇವಸ್ಥಾನವನ್ನು ಪರಿಶೀಲಿಸಲು ಕಾರ್ಬನ್ ಡೇಟಿಂಗ್ (ಈ ಪರೀಕ್ಷೆಯಿಂದ ಸಂಬಂಧಿಸಿದ ವಸ್ತುವಿನ ವಯಸ್ಸನ್ನು ನಿರ್ಧರಿಸಲಾಗುತ್ತದೆ) ಕೈಗೊಳ್ಳಲು ಕೇಳಲಾಗಿದೆ.
1. ವಿದ್ಯುತ್ ಕಳ್ಳತನದ ವಿರುದ್ಧದ ಈ ಅಭಿಯಾನದಲ್ಲಿ 300ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಕಳ್ಳತನ ಪತ್ತೆಯಾಗಿದೆ. ಇವುಗಳಲ್ಲಿ ಹಲವು ಮಸೀದಿಗಳೂ ಸೇರಿವೆ. ಮಸೀದಿಯಲ್ಲಿ 59 ಫ್ಯಾನ್‌ಗಳು, ಒಂದು ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು 25 ರಿಂದ 30 ‘ಲೈಟ್ ಪಾಯಿಂಟ್‌ಗಳು’ (ಮನೆ ಅಥವಾ ಕಟ್ಟಡಗಳಿಗೆ ವಿದ್ಯುತ್ ಹರಿಯುವ ಸ್ಥಳಗಳು) ವಿದ್ಯುತ್ ಕಳ್ಳತನ ಮಾಡಿ ನಡೆಸುತ್ತಿರುವುದನ್ನು ತಂಡವು ಕಂಡುಹಿಡಿದಿದೆ.
2. ವಿದ್ಯುತ್ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ನವೀನ ಗೌತಮ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಇಲಾಖೆ ತಂಡಗಳ ಭದ್ರತೆಗಾಗಿ ಪೊಲೀಸರು ಈ ಪ್ರದೇಶದಲ್ಲಿ ಪೊಲೀಸ್ ಪಡೆಯ 2 ತುಕಡಿಗಳನ್ನು ನಿಯೋಜಿಸಿದ್ದಾರೆ ಎಂದು ಹೇಳಿದ್ದಾರೆ.
3. ಜಿಲ್ಲಾಧಿಕಾರಿ ಮಾತನಾಡಿ, ಸಂಭಲ್ ನಗರವು ಅತಿ ಹೆಚ್ಚು ವಿದ್ಯುತ್ ಕಳ್ಳತನವಾಗಿರುವ ಪ್ರದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿದ್ಯುತ್ ಕಳ್ಳತನವಾಗುತ್ತಿದೆ. ಆದುದರಿಂದ ಇಲ್ಲಿ ಬೆಳಗ್ಗೆಯಿಂದಲೇ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಅತಿಕ್ರಮಣಗಳನ್ನು ತೆಗೆಯಲಾಗುತ್ತಿದೆ. ವಿದ್ಯುತ್ ಕಳ್ಳತನದ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಅತಿಕ್ರಮಣದಿಂದಾಗಿ ಮುಚ್ಚಿದ ದೇವಸ್ಥಾನ ಕಂಡುಬಂದಿದೆ ಎಂದು ಹೇಳಿದರು.
4. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಶ ಚಂದ್ರ ಇವರು ಮಾತನಾಡಿ, ಯಾವುದೇ ಧಾರ್ಮಿಕ ಸ್ಥಳ ಅಥವಾ ಸಾರ್ವಜನಿಕ ಆಸ್ತಿಯ ಅತಿಕ್ರಮಣವನ್ನು ಸಹಿಸುವುದಿಲ್ಲ. ಅತಿಕ್ರಮಣದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಭಯದಿಂದ ದೇವಸ್ಥಾನದ ಪೂಜೆಗಾಗಿ ಅರ್ಚಕರು ಅಲ್ಲಿ ವಾಸಿಸಲು ಧೈರ್ಯ ಮಾಡುತ್ತಿರಲಿಲ್ಲ !
ನಗರ ಹಿಂದೂ ಸಭೆಯ ಸಂರಕ್ಷಕ ವಿಷ್ಣು ಶರಣ ರಸ್ತೋಗಿ ಮಾತನಾಡಿ, ನಾವು ಖಗ್ಗು ಸಾರಾಯಿ ಪ್ರದೇಶದಲ್ಲಿ ವಾಸಿಸುತ್ತಿದ್ದೆವು. 1978ರ ನಂತರ ನಮ್ಮ ಮನೆಯನ್ನು ಮಾರಿದೆವು. ಇಲ್ಲಿ ಶಿವನ ದೇವಸ್ಥಾನವಿತ್ತು. ನಮಗೆ ಈ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳಲಾಗಲಿಲ್ಲ. ಈ ಸ್ಥಳದಲ್ಲಿ ಯಾವುದೇ ಅರ್ಚಕರು ವಾಸಿಸುವುದಿಲ್ಲ. ಅರ್ಚಕರು ಇಲ್ಲಿ ಉಳಿಯಲು ಧೈರ್ಯ ಮಾಡುತ್ತಿರಲಿಲ್ಲ. (ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಹಿಂದೂಗಳು ವಾಸಿಸಲು ಹೆದರುತ್ತಾರೆ, ಆದರೆ ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮರು ದಾದಾಗಿರಿ ಮಾಡುತ್ತಾ ವಾಸಿಸುತ್ತಾರೆ ! – ಸಂಪಾದಕರು) ಅಂದಿನಿಂದ ದೇವಸ್ಥಾನ ಮುಚ್ಚಲಾಗಿತ್ತು ಮತ್ತು ಇಂದು ಅದು ತೆರೆದಿದೆ. ಪೊಲೀಸರಿಂದಾಗಿ ದೇವಸ್ಥಾನ ತೆರೆಯಲ್ಪಟ್ಟಿತು ಎಂದು ಹೇಳಿದರು.
A Shiva temple closed for 46 years discovered in a Mu$l!m-majority area in Sambhal (Uttar Pradesh). 🛕
Due to fear, the priest did not dare to stay for worship in the temple when Hindus migrated after the riots in 1978!
It should be noted that in India, Hindus compelled migrate… pic.twitter.com/4pdmZWZBK7
— Sanatan Prabhat (@SanatanPrabhat) December 14, 2024
ಸಂಪಾದಕೀಯ ನಿಲುವು
|