Israel Kobi Shoshani Statement : ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಂದರ್ಭದಲ್ಲಿ ಏನೆಲ್ಲ ನಡೆಯುತ್ತಿದೆ ಅದು ಸ್ವೀಕರಿಸಲು ಸಾಧ್ಯವಿಲ್ಲ !

ಇಸ್ರೇಲಿನ ಕನ್ಸಲ್ ಜನರಲ್ ಕೋಬಿ ಶೋಶನಿ ಇವರಿಂದ ಬಾಂಗ್ಲಾದೇಶದ ಕುರಿತು ವಾಗ್ದಾಳಿ

ಮುಂಬಯಿ – ‘ಯಾವಾಗ ತಮ್ಮ ನೆಚ್ಚಿನ ಜನರ ಮೇಲೆ ದೌರ್ಜನ್ಯವಾಗುತ್ತದೆ, ಆಗ ಹೇಗೆ ಅನಿಸುತ್ತದೆ, ಇದು ನಮಗೆ ತಿಳಿದಿದೆ. ಅಪರಾಧಿಗಳಿಂದ ಹುಡುಗ ಮತ್ತು ಹುಡುಗಿಯರ ಹತ್ಯೆ ನಡೆದರೆ ಹೇಗೆ ಇರುತ್ತದೆ ಇದನ್ನು ನಾವು ಅನುಭವಿಸಿದ್ದೇವೆ. ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಇರುವಾಗ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಮತ್ತು ಈ ವಾಸ್ತವ ಅಂತರಾಷ್ಟ್ರೀಯ ಸಮುದಾಯದಿಂದ ಕೂಡ ಮರೆಯಾಗಿಲ್ಲ. ಅಲ್ಲಿ ಏನೆಲ್ಲಾ ನಡೆಯುತ್ತಿದೆ, ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ’, ಎಂದು ಇಸ್ರೆಲೀನ ಕನ್ಸಲ್ ಜನರಲ್ ಕೋಬಿ ಶೋಶನಿ ಇವರು ವಾಗ್ದಾಳಿ ನಡೆಸಿದರು. ಅವರು ಇಲ್ಲಿ ಆಯೋಜಿಸಿದ್ದ ‘ವರ್ಲ್ಡ್ ಹಿಂದೂ ಎಕನಾಮಿಕ್ ಫೋರಂ ೨೦೨೪’ ನಲ್ಲಿ ಮಾತನಾಡುತ್ತಿದ್ದರು. ಇಸ್ರೇಲ್‌ಗೆ ನೀಡಿರುವ ಬೆಂಬಲದ ಕುರಿತು ಶೋಶನಿ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಕೊಬಿ ಶೋಶನಿ ಇವರು ಮಾತು ಮುಂದುವರೆಸಿ, ಇಸ್ರೇಲ್ ಮತ್ತು ಭಾರತ ಈ ಇಬ್ಬರಲ್ಲಿ ಸುರಕ್ಷೆ ಮತ್ತು ಭಯೋತ್ಪಾದನೆ ಸಂಬಂಧಿತ ಸವಾಲುಗಳಲ್ಲಿ ಸಾಮ್ಯತೆ ಇದೆ. ನಮ್ಮ ಕೌಟುಂಬಿಕ ಮೌಲ್ಯಗಳು, ಪರಂಪರೆ, ರೂಢಿ ಪದ್ಧತಿಗಳು, ಸಾಮಾಜಿಕ ರಚನೆ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟ ಇದರಿಂದಾಗಿ ನಾವು ಭಾರತವನ್ನು ಪ್ರೀತಿಸುತ್ತೇವೆ’. ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಇತರ ದೇಶದ ಕನ್ಸಲ್ ಜನರಲ್ ಮತ್ತು ರಾಯಭಾರಿಗಳು ಇದ್ದಾರೆ; ಆದರೆ ಅವರಲ್ಲಿ ಯಾರೂ ಕೂಡ ಬಾಂಗ್ಲಾದೇಶದಲ್ಲಿನ ಹಿಂದುಗಳ ಬಗ್ಗೆ ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ !