‘ಅಮೆಜಾನ್’ನಿಂದ ನಿರಂತರವಾಗಿ ಭಾರತದ ಭೂಪಟ ಮತ್ತು ರಾಷ್ಟ್ರಧ್ವಜದ ಅವಮಾನ !

‘ಅಮೆಜಾನ್’ ಮೇಲೆ ತಕ್ಷಣ ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ಇದನ್ನು ಏಕೆ ಹೇಳಬೇಕಾಗುತ್ತದೆ ? ಪೊಲೀಸ, ಆಡಳಿತ ಮತ್ತು ಸರಕಾರ ತಾವಾಗಿಯೇ ಮಾಡುವುದು ಅಪೇಕ್ಷಿತವಾಗಿದೆ !

ಮುಂಬಯಿ – ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ನಕಾಶೆ ಅಂದರೆ ನಕ್ಷೆಯು ಕೋಟಿಗಟ್ಟಲೆ ಭಾರತೀಯರ ರಾಷ್ಟ್ರೀಯ ಭಾವೈಕ್ಯದ ವಿಷಯವಾಗಿದೆ. ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ‘ಧ್ವಜ ಸಂಹಿತೆ’ಯಲ್ಲಿ ನೀಡಲಾಗಿದೆ. ಅದನ್ನು ಉಲ್ಲಂಘಿಸುವುದು ಅಪರಾಧವಾಗಿದೆ. ಅದೇ ರೀತಿ ಭಾರತದ ಭೂಪಟವನ್ನು ವಿರೂಪಗೊಳಿಸುವುದು ಕೂಡ ಅಪರಾಧವಾಗಿದೆ. ಆದಾಗ್ಯೂ ‘ಅಮೆಜಾನ್’ ಸಂಸ್ಥೆ ಧ್ವಜಸಂಹಿತೆಯನ್ನು ಉಲ್ಲಂಘಿಸಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಟೀ-ಶರ್ಟ್‌ಗಳು, ಬೂಟುಗಳು ಇತ್ಯಾದಿ ಉತ್ಪನ್ನಗಳನ್ನು ಹಾಗೆಯೇ ವಿರೂಪಗೊಳಿಸಿದ ಭಾರತದ ನಕ್ಷೆಯ ‘ವಿನೈಲ್ ಸ್ಟಿಕ್ಕರ್’ಗಳನ್ನು ಜಾಲತಾಣಗಳ ಮೂಲಕ ಮಾರಾಟ ಮಾಡುತ್ತಿದೆ. ಈ ಹಿಂದೆ ‘ಅಮೆಜಾನ್’ಗೆ ಹಲವು ಬಾರಿ ತಿಳಿಸಿದ್ದರೂ ಸಂಸ್ಥೆಯು ಯಾವುದೇ ಬದಲಾವಣೆ ಮಾಡದೆ ಮಾರಾಟವನ್ನು ಮುಂದುವರೆಸಿದೆ.

ಭಾರತದ ರಾಷ್ಟ್ರೀಯ ಚಿಹ್ನೆಗಳಿಗೆ ‘ಅಮೆಜಾನ್’ ನಿರಂತರವಾಗಿ ಮಾಡುತ್ತಿರುವ ಉದ್ಧಟತನನ್ನು ಈಗ ನಿಲ್ಲಿಸಬೇಕು. ಎಲ್ಲಿಯವರೆಗೆ ‘ಅಮೆಜಾನ್’ ಭಾರತ ಸರಕಾರ ಮತ್ತು ಭಾರತೀಯರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಿಲ್ಲವೋ, ಅಲ್ಲಿಯವರೆಗೆ ಭಾರತ ಸರಕಾರವು ‘ಅಮೆಜಾನ್’ ಸಂಸ್ಥೆಯನ್ನು ಬಹಿಷ್ಕರಿಸಬೇಕು, ಭಾರತ ಸರಕಾರವು ‘ಅಮೆಜಾನ್’ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಕರೆ ನೀಡುತ್ತಾ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಪರವಾಗಿ ಕೇಂದ್ರ ಗೃಹ ಸಚಿವ ಗೌ. ಅಮಿತ ಶಹಾ ಇವರಲ್ಲಿ ಬೇಡಿಕೆ ಸಲ್ಲಿಸಲಾಯಿತು. ಈ ಬಗ್ಗೆ ಇತ್ತೀಚೆಗೆ ಒಂದು ಮನವಿಯನ್ನು ಕಳುಹಿಸಲಾಗಿದೆ.

ಈ ಮನವಿಯಲ್ಲಿ,

೧. ಅಮೆಜಾನ್ ಭಾರತದ ನಕ್ಷೆಯಿಂದ ಪಾಕಿಸ್ತಾನ ಆಕ್ರಮಿತ ಮತ್ತು ಚೀನಾ ಆಕ್ರಮಿತ ಕಾಶ್ಮೀರದ ಭೂಭಾಗವನ್ನು ಬೇರ್ಪಡಿಸಿ ಭಾರತದ ನಕ್ಷೆ ಇರುವ ವಿನೈಲ್ ಸ್ಟಿಕ್ಕರ್‌ಗಳನ್ನು, ಅದೇ ರೀತಿ ಅಶೋಕಚಕ್ರದ ತ್ರಿವರ್ಣ ಧ್ವಜವನ್ನು ಮುದ್ರಿಸಲಾದ ಟೀ ಶರ್ಟ್‌ಗಳು ಮತ್ತು ಬೂಟುಗಳನ್ನು ಮಾರಾಟ ಮಾಡಿರುವುದು ಇದೇ ಮೊದಲ ಘಟನೆಯಾಗಿರದೇ ಇದಕ್ಕೂ ಮುನ್ನ ಅಮೆಜಾನ್ ‘ತ್ರಿವರ್ಣ ಮಾಸ್ಕ್’, ‘ತ್ರಿವರ್ಣ ಟೋಪಿ’ಯಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ರಾಷ್ಟ್ರಧ್ವಜದ ಅವಹೇಳನ ಮಾಡಿದೆ. ಕೆಲವು ದಿನಗಳ ಹಿಂದೆ ‘ಅಮೆಜಾನ್’ನಲ್ಲಿ ಗಾಂಜಾ ಮಾರಾಟವಾಗುತ್ತಿರುವುದು ಆರೋಪಿಸಲಾಗಿತ್ತು. ಈ ಕುರಿತು ಸಮಿತಿಯು ‘ಸುರಾಜ್ಯ ಅಭಿಯಾನ’ದ ವತಿಯಿಂದ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಿತ್ತು.

೨. ‘ರಾಷ್ಟ್ರೀಯ ಲಾಂಛನಗಳ ದುರುಪಯೋಗ ತಡೆಗಟ್ಟುವಿಕೆ ಕಾಯಿದೆ, ೧೯೫೦ ರ ಕಲಂ ೨ ಮತ್ತು ೫ ರ ಅಡಿಯಲ್ಲಿ, ಹಾಗೂ ‘ರಾಷ್ಟ್ರ ಪ್ರತಿಷ್ಠಾ ಪ್ರತಿಬಂಧಕ ಅಧಿನಿಯಮ ೧೯೭೧’ ಕಲಂ ೨ ರ ಅಡಿಯಲ್ಲಿ ಹಾಗೂ ‘ಬೋಧಚಿಹ್ನೆ ಮತ್ತು ಹೆಸರು (ಅನುಚಿತ ಉಪಯೋಗ ಪ್ರತಿಬಂಧ)ಕಾಯಿದೆ ೧೯೫೦’ ಈ ಮೂರೂ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧಗಳಾಗಿವೆ. ಆದ್ದರಿಂದ ಅಮೆಜಾನ್ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು, ನಾವು ಒತ್ತಾಯಿಸುತ್ತೇವೆ. ಸರಕಾರವು ಅದಕ್ಕನುಸಾರ ಕ್ರಮ ಕೈಗೊಳ್ಳದೇ ಇದ್ದರೆ, ‘ಭಾರತೀಯ ಕಾನೂನುಗಳು ನಿಷ್ಪ್ರಯೋಜಕವಾಗಿದೆ’, ಎಂಬ ಚಿತ್ರಣ ನಿರ್ಮಾಣವಾಗಲಿದೆ ಹಾಗೂ ರಾಷ್ಟ್ರಧ್ವಜ ಮತ್ತು ನಕ್ಷೆಯ ಅಪಮಾನ ಯಾರು ಬೇಕಾದರೂ ಮಾಡಲು ಮುಂದಡಿಯಿಡಬಹುದು ! ಇದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರಕಾರ ಈ ಗಂಭೀರ ವಿಷಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ‘ಸುರಾಜ್ಯ ಅಭಿಯಾನ’ದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಈ ಚಿತ್ರ ಹಾಕುವುದರ ಉದ್ದೇಶ ಯಾರ ರಾಷ್ಟ್ರೀಯ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ !