
ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆ ಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ. ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ನವೆಂಬರ್ ೨೦೨೧ ರ ವರೆಗೆ ಸನಾತನದ ೩೫೦ ಗ್ರಂಥಗಳ ೧೭ ಭಾಷೆಗಳಲ್ಲಿ ೮೩ ಲಕ್ಷ ೫೮ ಸಾವಿರ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಅಮೂಲ್ಯ ಅವಕಾಶವೇ ಆಗಿದೆ. ಅನುವಾದ ಮಾಡುವವರಿಗೆ ಮರಾಠಿ ಮತ್ತು ಕನ್ನಡ ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.
ಸಂಪರ್ಕ ಕ್ರ. : ೯೩೪೨೪೩೫೬೧೭
ವಿ-ಅಂಚೆ : [email protected]
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !