ಬೆಂಗಳೂರು ರೈಲು ನಿಲ್ದಾಣದಲ್ಲಿ ಕೂಲಿಗಳ ಕೊಠಡಿಯನ್ನು ಮತಾಂಧರು ನಿರ್ಮಿಸಿದ್ದ ಪ್ರಾರ್ಥನಾ ಸ್ಥಳದ ಸ್ವರೂಪದಲ್ಲಿ ಬದಲಾವಣೆ !

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಪರಿಣಾಮ !

ಪ್ರಾರ್ಥನಾ ಸ್ಥಳಕ್ಕೆ ಹಚ್ಚಲಾಗಿದ್ದ ಹಸಿರು ಬಣ್ಣವನ್ನು ತೆಗೆದು ಅಲ್ಲಿ ಬಿಳಿ ಬಣ್ಣ ಹಚ್ಚುತ್ತಿರುವುದು

ಬೆಂಗಳೂರು – ಇಲ್ಲಿಯ ದಕ್ಷಿಣ-ಪಶ್ಚಿಮ ರೈಲ್ವೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಸಂ. 5 ರಲ್ಲಿ ಕೂಲಿಗಳ ವಿಶ್ರಾಂತಿ ಗೃಹವನ್ನು ಪ್ರಾರ್ಥನಾ ಸ್ಥಳವನ್ನಾಗಿ ಬದಲಾಯಿಸಿರುವುದು ಬೆಳಕಿಗೆ ಬಂದನಂತರ ಹಿಂದುತ್ವನಿಷ್ಠ ಸಂಘಟನೆಗಳು ಅದನ್ನು ವಿರೋಧಿಸುತ್ತಾ ಅದನ್ನು ಮುಚ್ಚುವಂತೆ ರೇಲ್ವೆ ಇಲಾಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಈ ವಿರೋಧದ ಪರಿಣಾಮದಿಂದಾಗಿ ಪ್ರಾರ್ಥನಾ ಸ್ಥಳಕ್ಕೆ ಹಚ್ಚಲಾಗಿದ್ದ ಹಸಿರು ಬಣ್ಣವನ್ನು ತೆಗೆದು ಅಲ್ಲಿ ಬಿಳಿ ಬಣ್ಣ ಹಚ್ಚಲಾಗಿದೆ. ಅಲ್ಲಿ ಅಳವಡಿಸಲಾಗಿದ್ದ ಅರಬಿ ಭಾಷೆಯಲ್ಲಿನ ಪ್ರಾರ್ಥನಾ ಫಲಕವನ್ನು ತೆಗೆಯಲಾಗಿದೆ. ಈ ಕೊಠಡಿಯ ಹೊರಗೆ ಹೊಸ ಫಲಕವನ್ನು ಹಾಕಲಾಗಿದೆ. ಅದಕ್ಕೆ ‘ವಿಶ್ರಾಂತಿ ಗೃಹ’ ಎಂದು ಬರೆಯಲಾಗಿದೆ.

 

ವಿಶ್ರಾಂತಿ ಗೃಹದ ಹೊರಗೆ ಅಳವಡಿಸಲಾಗಿದ್ದ ಅರಬಿ ಭಾಷೆಯಲ್ಲಿನ ಪ್ರಾರ್ಥನಾ ಫಲಕವನ್ನು ತೆಗೆದೆ ಅದಕ್ಕೆ ‘ವಿಶ್ರಾಂತಿ ಗೃಹ’ ಎಂದು ಬರೆಯಲಾಗಿದೆ