ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ
ರಾಮನಾಥಿ ಮತ್ತು ದೇವದನ ಸನಾತನ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಅನೇಕ ಸಾಧಕರು ಇರುತ್ತಾರೆ. ಇದರಲ್ಲಿ ಅನಾರೋಗ್ಯವಿರುವ ಕೆಲವು ಸಾಧಕರಿಗಾಗಿ ಆಗಾಗ ಆಕ್ಸಿಜನ್‌ನ ಆವಶ್ಯಕತೆ ಬೀಳುತ್ತದೆ. ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ.