ಭಾರತೀಯ ವಿದ್ಯಾರ್ಥಿಗಳನ್ನು ರಷ್ಯಾದ ಮೂಲಕ ಹೊರತರಲು ಸಹಾಯ ಮಾಡುವೆವು ! – ಭಾರತದಲ್ಲಿನ ರಷ್ಯಾದ ರಾಜದೂತರ ಆಶ್ವಾಸನೆ

ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವರವರು ‘ಯುಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಿಂದೆ ಕರೆತರಲು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ರಷ್ಯಾದ ಕ್ಷೇತ್ರದಿಂದ ಈ ವಿದ್ಯಾರ್ಥಿಗಳನ್ನು ಹೊರತರುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

ಏಟಿಎಮ್‌ನ ಹೊರಗೆ ಹಣ ಪಡೆಯಲು ರಷ್ಯಾದ ನಾಗರೀಕರ ಸಾಲು !

ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೭ ದಿನಗಳಾಗುತ್ತಿದ್ದರೂ ರಷ್ಯಾಗೆ ಇನ್ನೂ ವಿಜಯ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆಯಲ್ಲಿ ಜಗತ್ತಿನಾದ್ಯಂತ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲಾಗುತ್ತಿದೆ. ರಷ್ಯಾದ ಬ್ಯಾಂಕಗಳಲ್ಲಿರುವ ಖಾತೆಗಳನ್ನು ಹೆಪ್ಪುಗಟ್ಟಿಸಲಾಗಿದೆ.

ಖಾರಕಿವಾದಲ್ಲಿ ರಷ್ಯಾದ ಆಕ್ರಮಣದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಯ ಸಾವು

ಭಾರತದ ನವೀನ ಶೇಖರಪ್ಪ ಈ ೨೧ ವರ್ಷದ ವಿದ್ಯಾರ್ಥಿ ರಷ್ಯಾದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿ ರಾಷ್ಟ್ರೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವಾಲಯ ಈ ವಿದ್ಯಾರ್ಥಿಯ ಕುಟುಂಬದವರ ಸಂಪರ್ಕದಲ್ಲಿದ್ದಾರೆ.

ತಕ್ಷಣವೇ ಕೀವ್ ಅನ್ನು ತೊರೆಯಿರಿ ! – ರಾಯಭಾರ ಕಚೇರಿಯಿಂದ ಭಾರತಿಯರಿಗೆ ಸೂಚನೆ

ಮಾರ್ಚ್ ೧ ರಂದು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ವಾಹನಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ತಕ್ಷಣವೇ ಕೀವ್ ನಿಂದ ಹೊರಡುವಂತೆ ಸೂಚಿಸಿದೆ. ರಷ್ಯಾದ ಸೇನೆಯು ಕೀವ್ ಕಡೆಗೆ ವೇಗವಾಗಿ ಮುನ್ನಡೆಯುತ್ತಿರುವುದರಿಂದ ಈ ಸಲಹೆಯನ್ನು ನೀಡಲಾಗಿದೆ.

ಮುಂದಿನ ೨೪ ಗಂಟೆ ಅತ್ಯಂತ ಮಹತ್ತರವಾಗಿದೆ ! – ಯುಕ್ರೇನ ರಾಷ್ಟ್ರಾಧ್ಯಕ್ಷ

‘ಮುಂದಿನ ೨೪ ಗಂಟೆ ಅತ್ಯಂತ ಮಹತ್ತರವಾಗಿದೆ’, ಎಂದು ಯುಕ್ರೇನ ರಾಷ್ಟ್ರಾಧ್ಯಕ್ಷರಾದ ವ್ಲಾದಿಮಿರ ಝೆಲೆಂಸ್ಕೀಯವರು ಹೇಳಿದ್ದಾರೆ. ಯುಕ್ರೇನ ಸೈನಿಕರು ರಷ್ಯಾದ ಸೈನ್ಯವನ್ನು ಕಳೆದ ೪ ದಿನಗಳಿಂದ ರಾಜಧಾನೀ ಕೀವನ ಗಡಿಯಲ್ಲಿ ತಡೆಹಿಡಿದಿದ್ದಾರೆ. ಸಾಕಷ್ಟು ಪ್ರಯತ್ನ ಮಾಡಿದರೂ ರಷ್ಯಾದ ಸೈನಿಕರು ಹೆಚ್ಚು ಒಳಗೆ ನುಸುಳಲು ಆಗಲಿಲ್ಲ.

ರಷ್ಯಾದ ದಾಳಿಯಲ್ಲಿ ಜಗತ್ತಿನ ಅತಿದೊಡ್ಡ ಸರಕು ವಾಹಕ ವಿಮಾನ ಸುಟ್ಟು ಭಸ್ಮ !

ರಷ್ಯಾದ ದಾಳಿಯಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಸರಕು ವಾಹಕ ವಿಮಾನ ಸುಟ್ಟು ಭಸ್ಮವಾಗಿದೆ. ಯುಕ್ರೇನನ ‘ಆಟೊನೋವ -೨೨೫ ಮ್ರಿಯಾ’ ಇದು ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಸರಕು ವಾಹಕ ವಿಮಾನವಾಗಿದೆ. ಈ ವಿಮಾನವನ್ನು ಯುಕ್ರೇನನ ರಾಜಧಾನಿ ಕೀವ ಸನಿಹದಲ್ಲಿರುವ ಹೊಸ್ತೊಮೀಲ ವಿಮಾನನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.

ಯುಕ್ರೇನಿನಲ್ಲಿರುವ ಆಸ್ಪತ್ರೆಗಳಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ

ಯುಕ್ರೇನನಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ ನಿರ್ಮಾಣವಾಗಿದೆ. ಇದರಿಂದ ಮೊದಲೇ ಸಂಕಟದಲ್ಲಿರುವ ಯುಕ್ರೇನ ಇನ್ನೂ ಸಂಕಟದಲ್ಲಿ ಸಿಲುಕಿದೆ. ಆದುದರಿಂದ ಜಾಗತಿಕ ಆರೋಗ್ಯ ಸಂಘಟನೆಯು ಚಿಂತೆ ವ್ಯಕ್ತಪಡಿಸಿದ್ದು ‘ಯುಕ್ರೇನಿನಲ್ಲಿರುವ ಆಸ್ಪತ್ರೆಗಳಿಗೆ ತಕ್ಷಣ ಆಮ್ಲಜನಕವನ್ನು ನೀಡದಿದ್ದರೆ ದೊಡ್ಡ ಅನರ್ಥ ಸಂಭವಿಸಬಹುದು

ಬೆಲಾರುಸ್ ರಷಿಯಾದ ಪಕ್ಷದಲ್ಲಿ ಯುದ್ಧ ಮಾಡುವುದು !

ರಷಿಯಾದ ಮಿತ್ರದೇಶ ಬೆಲಾರುಸ್ ಇದು ರಷಿಯಾಗೆ ತನ್ನ ದೇಶದಲ್ಲಿ ಅಣ್ವಸ್ತ್ರ ನಿಯೋಜನೆ ಮತ್ತು ಅಲ್ಲಿಂದ ಪ್ರಯೋಗಿಸಲು ಅನುಮತಿ ನೀಡಿದೆ. ಅದಕ್ಕಾಗಿ ಬೆಲಾರುಸ್ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದೆ.

ಕೀವ (ಯುಕ್ರೇನ)ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯಾದ ಗಡಿಯಿಂದ ಕರೆತರಲು ವಿಶೇಷ ರೈಲು ಸೇವೆ

ಸಂಚಾರ ನಿಷೇಧಾಜ್ಞೆಯನ್ನು ಹಿಂಪಡೆದ ನಂತರ ಭಾರತೀಯ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗೆ ತರಲು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಈ ರೈಲಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯಾದ ಗಡಿಯಿಂದ ಕರೆತರಲಾಗುವುದು.

ಇನ್ನೂ ೧೦ ದಿನಗಳ ವರೆಗೆ ಯುದ್ಧ ನಡೆದರೆ ರಷ್ಯಾವು ದೀವಾಳಿತನದ ಹೊಸ್ತಿಲನ್ನು ತಲುಪುತ್ತದೆ ! – ಸಂರಕ್ಷಣಾ ತಜ್ಞರ ಹೇಳಿಕೆ

ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೫ ದಿನಗಳಾದವು; ಆದರೆ ಇನ್ನೂ ರಷ್ಯಾಗೆ ಯುಕ್ರೇನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಷ್ಯಾವು ‘ಯುಕ್ರೇನಿನ ಮೇಲೆ ಬೇಗನೇ ಹಿಡಿತವನ್ನು ಸಾಧಿಸಬಹುದು’ ಎಂದು ತಿಳಿದಿತ್ತು; ಆದರೆ ಅದು ತಪ್ಪಾಯಿತು.