ಖಾರಕಿವಾದಲ್ಲಿ ರಷ್ಯಾದ ಆಕ್ರಮಣದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಯ ಸಾವು

  • ಭಾರತವು ಯುಕ್ರೇನ್ ಮತ್ತು ರಷ್ಯಾಗೆ ಇವರಿಗೆ ಭಾರತದ ರಾಯಭಾರಿಗಳಿಗೆ ಉತ್ತರ ಕೋರಿದರು

  • ಭಾರತೀಯ ವಿದ್ಯಾರ್ಥಿಗಳಿಗೆ ಹೊರಬರಲು ಸುರಕ್ಷಿತ ಮಾರ್ಗ ನೀಡುವುದಕ್ಕಾಗಿ ಭಾರತದಿಂದ ಯುಕ್ರೇನ್‌ಗೆ ಒತ್ತಾಯಿಸಿದೆ

ಖಾರಕಿವ (ಯುಕ್ರೇನ್) – ಇಲ್ಲಿ ಭಾರತದ ನವೀನ ಶೇಖರಪ್ಪ ಈ ೨೧ ವರ್ಷದ ವಿದ್ಯಾರ್ಥಿ ರಷ್ಯಾದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿ ರಾಷ್ಟ್ರೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವಾಲಯ ಈ ವಿದ್ಯಾರ್ಥಿಯ ಕುಟುಂಬದವರ ಸಂಪರ್ಕದಲ್ಲಿದ್ದಾರೆ. ನವೀನ ಇವನು ಕರ್ನಾಟಕದ ಚಳಗೇರಿ ಇಲ್ಲಿಯ ನಿವಾಸಿಯಾಗಿದ್ದು. ೨ ದಿನಗಳ ಹಿಂದೆ ಅವನು ‘ವಿಡಿಯೋ ಕಾಲ್’ ಮುಲಕ ಕುಟುಂಬದವರನ್ನು ಸಂಪರ್ಕಿಸಿದ್ದನು. ಖಾರಕಿವದಲ್ಲಿ ಅವನು ಶಿಬಿರದಲ್ಲಿ ವಾಸಿಸುತ್ತಿದ್ದನು. ಆಹಾರ ಪದಾರ್ಥ ಕೊಂಡುಕೊಳ್ಳಲು ಹೊರಗೆ ಬಂದಿರುವಾಗ ನಡೆದಿರುವ ಆಕ್ರಮಣದಲ್ಲಿ ಅವನು ಸಾವನ್ನಪ್ಪಿದನು. ಈ ಘಟನೆಯ ನಂತರ ಭಾರತದಲ್ಲಿನ ವಿದೇಶಾಂಗ ಸಚಿವಾಲಯ ಭಾರತದಲ್ಲಿ ಯುಕ್ರೇನ್ ಮತ್ತು ರಷ್ಯಾದ ರಾಯಭಾರಿಗಳಿಗೆ ಈ ವಿಷಯವಾಗಿ ವಿಚಾರಣೆ ನಡೆಸಿದ್ದಾರೆ ಹಾಗೂ ಭಾರತೀಯ ವಿದ್ಯಾರ್ಥಿಗಳಿಗೆ ಯುದ್ಧಗ್ರಸ್ಥ ನಗರಗಳಿಂದ ಹೊರ ಬರಲು ತಕ್ಷಣದಿಂದಲೇ ಸುರಕ್ಷಿತ ಮಾರ್ಗ ಒದಗಿಸಬೇಕೆಂದು, ಯುಕ್ರೇನ್ ಬಳಿ ಒತ್ತಾಯಿಸಿದೆ.