ಮುಂದಿನ ೨೪ ಗಂಟೆ ಅತ್ಯಂತ ಮಹತ್ತರವಾಗಿದೆ ! – ಯುಕ್ರೇನ ರಾಷ್ಟ್ರಾಧ್ಯಕ್ಷ

ಬೆಲರೂಸ ರಷ್ಯಾದ ಪರವಾಗಿ ಯುದ್ಧಕ್ಕೆ ಇಳಿಯಲಿದೆ !

ಕೀವ (ಯುಕ್ರೇನ) – ‘ಮುಂದಿನ ೨೪ ಗಂಟೆ ಅತ್ಯಂತ ಮಹತ್ತರವಾಗಿದೆ’, ಎಂದು ಯುಕ್ರೇನ ರಾಷ್ಟ್ರಾಧ್ಯಕ್ಷರಾದ ವ್ಲಾದಿಮಿರ ಝೆಲೆಂಸ್ಕೀಯವರು ಹೇಳಿದ್ದಾರೆ. ಯುಕ್ರೇನ ಸೈನಿಕರು ರಷ್ಯಾದ ಸೈನ್ಯವನ್ನು ಕಳೆದ ೪ ದಿನಗಳಿಂದ ರಾಜಧಾನೀ ಕೀವನ ಗಡಿಯಲ್ಲಿ ತಡೆಹಿಡಿದಿದ್ದಾರೆ. ಸಾಕಷ್ಟು ಪ್ರಯತ್ನ ಮಾಡಿದರೂ ರಷ್ಯಾದ ಸೈನಿಕರು ಹೆಚ್ಚು ಒಳಗೆ ನುಸುಳಲು ಆಗಲಿಲ್ಲ. ಆದ್ದರಿಂದ ರಷ್ಯಾದ ರಾಷ್ಟ್ರಾಧ್ಯಕ್ಷರಾದ ವ್ಲಾದಿಮಿರ ಪುತಿನರವರು ಆಕ್ರೋಶಗೊಂಡಿದ್ದಾರೆ. ಅದರಲ್ಲಿ ಅವರು ಅಣ್ವಸ್ತ್ರದ ದಾಳಿಗೆ ಸಿದ್ಧರಾಗಲು ಘೋಷಿಸಿದ್ದಾರೆ. ಅಣ್ವಸ್ತ್ರದ ಮೂಲಕ ದಾಳಿ ನಡೆಯುವ ಸಾಧ್ಯತೆಯಿಂದ ವಿಶ್ವ ಸಂಸ್ಥೆಯಿಂದ ತುರ್ತು ಸಭೆಯನ್ನು ಕರೆದಿದೆ.

೧. ರಷ್ಯಾದ ಸೈನಿಕರಿಗೆ ಕೀವ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನೋಡಿ ರಷ್ಯಾದ ಮಿತ್ರ ದೇಶ ಬೆಲಾರೂಸ ಸಹ ಈಗ ಯುದ್ಧಕ್ಕೆ ಇಳಿಯಲಿದೆ. ಅದು ಯುಕ್ರೇನ್‌ನಲ್ಲಿ ಸೈನ್ಯವನ್ನು ಕಳುಹಿಸುವುದಾಗಿ ಅಮೇರಿಕಾದ ಅಧಿಕಾರಿಗಳು ಹೇಳಿದ್ದಾರೆ. ಈ ಎರಡೂ ದೇಶಗಳು ಯುದ್ಧದ ಮೊದಲು ದೊಡ್ಡ ಅಭ್ಯಾಸ ಮಾಡಿತ್ತು. ಆದ್ದರಿಂದ ಯುಕ್ರೇನ ಈಗ ಎರಡು ದೇಶಗಳ ಸೈನ್ಯದೊಂದಿಗೆ ಹೋರಾಡ ಬೇಕಾಗುವುದು.

೨. ಯುಕ್ರೆನ್ ಜಾರಿಗೊಳಿಸಿದ ಮನವಿಯ ಪ್ರಕಾರ, ಕಳೆದ ೪ ದಿನಗಳಿಂದ ರಷ್ಯಾದ ದಾಳಿಯಲ್ಲಿ ೩೫೨ ನಾಗರಿಕರು ಹತರಾಗಿದ್ದಾರೆ. ಅದರಲ್ಲಿ ೧೪ ಮಕ್ಕಳೂ ಸೇರಿದ್ದಾರೆ.