ಏಟಿಎಮ್‌ನ ಹೊರಗೆ ಹಣ ಪಡೆಯಲು ರಷ್ಯಾದ ನಾಗರೀಕರ ಸಾಲು !

ರಷ್ಯಾದ ಮೇಲಿನ ಆರ್ಥಿಕ ನಿರ್ಬಂಧದ ಪರಿಣಾಮ !

* ಆವಶ್ಯಕ ಸಾಮಗ್ರಿಗಳ ಖರೀದಿಗಾಗಿಯೂ ಜನಜಂಗುಳಿ

* ಎಲ್ಲ ವಸ್ತುಗಳ ದರದಲ್ಲಿ ಅಪಾರ ಹೆಚ್ಚಳ

ಏಟಿಎಮ್‌ನ ಹೊರಗೆ ಹಣ ಪಡೆಯಲು ರಷ್ಯಾದ ನಾಗರೀಕರ ಸಾಲು

ಮಾಸ್ಕೋ (ರಷ್ಯಾ) – ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೭ ದಿನಗಳಾಗುತ್ತಿದ್ದರೂ ರಷ್ಯಾಗೆ ಇನ್ನೂ ವಿಜಯ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆಯಲ್ಲಿ ಜಗತ್ತಿನಾದ್ಯಂತ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲಾಗುತ್ತಿದೆ. ರಷ್ಯಾದ ಬ್ಯಾಂಕಗಳಲ್ಲಿರುವ ಖಾತೆಗಳನ್ನು ಹೆಪ್ಪುಗಟ್ಟಿಸಲಾಗಿದೆ. ಇದರಿಂದ ಗ್ರಾಹಕರಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಡಾಲರಿನ ತುಲನೆಯಲ್ಲಿ ರಷ್ಯಾದ ಮುದ್ರೆಯ ಮೌಲ್ಯವು ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ರಷ್ಯಾದಲ್ಲಿನ ಶ್ರೀಮಂತರಿಂದ ಬಡವರ ವರೆಗೆ ಎಲ್ಲರಿಗೂ ಹಣದ ಕೊರತೆಯ ಅರಿವಾಗುತ್ತಿದೆ. ಖಾದ್ಯ ತೈಲದ ಮೌಲ್ಯವು ಹೆಚ್ಚಿದೆ. ಇವುಗಳಿಂದ ರಷ್ಯಾದ ಸಾಮಾನ್ಯ ಜನರು ಕಂಗೆಟ್ಟಿದ್ದಾರೆ. ಇದರಿಂದ ರಷ್ಯಾದ ನಾಗರೀಕರು ಹಣ ತೆಗೆದುಕೊಳ್ಳಲು ಏಟಿಎಮ್‌ ನ ಹೊರಗೆ ಸಾಲು ನಿಂತಿರುವ ಚಿತ್ರವು ರಷ್ಯಾದಲ್ಲಿ ಕಂಡುಬರುತ್ತಿದೆ.

. ಅಮೇರಿಕಾದೊಂದಿಗೆ ‘ನಾಟೋ’ ದೇಶಗಳು ರಷ್ಯಾದ ಕೇಂದ್ರೀಯ ಬ್ಯಾಂಕಿನ ಸಂಪತ್ತನ್ನು ಹೆಪ್ಪುಗಟ್ಟಿಸಿವೆ. ಜಾಗತಿಕ ಬ್ಯಾಂಕಿನಿಂದ ರಷ್ಯಾವನ್ನು ವ್ಯರ್ಜ್ಯಗೊಳಿಸುವ ಚರ್ಚೆಗಳು ನಡೆಯುತ್ತಿವೆ. ಇದರಿಂದ ರಷ್ಯಾದ ಮೇಲೆ ಆರ್ಥಿಕ ಸಂಕಟಗಳು ಎರಗಿವೆ. ಅಮೇರಿಕಾವು ರಷ್ಯಾದಲ್ಲಿನ ನೇರವಾದ ಬಂಡವಾಳ ಹೂಡಿಕೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಇಲ್ಲಿಯ ವರೆಗೆ ರಷ್ಯಾಗೆ ೬೩೯ ಅರಬ ಡಾಲರಗಳ ಹಾನಿಯಾಗಿದೆ. ನಿರ್ಬಂಧದಿಂದಾಗಿ ರಷ್ಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂದತನ ಬರಬಹುದು. ಇದರಿಂದ ಹೆದರಿರುವ ರಷ್ಯಾದ ನಾಗರೀಕರು ಹಣ ತೆಗೆದುಕೊಳ್ಳುತ್ತಿದ್ದಾರೆ.

. ರಷ್ಯಾದಲ್ಲಿ ಯುದ್ಧದ ಮೊದಲು ೭೫ ರೂಬಲಿನ (ರಷ್ಯಾದ ನಾಣ್ಯಪದ್ಧತಿ)ಯ ಬೆಲೆಯು ೧ ಡಾಲರನಷ್ಟಿತ್ತು; ಆದರೆ ಈಗ ಯುದ್ಧದಿಂದಾಗಿ ಅದರಲ್ಲಿ ಇಳಿತವಾಗಿದೆ. ೧ ಡಾಲರಗಾಗಿ ಈಗ ಜನರಿಗೆ ೧೧೩ ರೂಬಲ ಎಣಿಸಬೇಕಾಗುತ್ತಿದೆ. ಇದರಿಂದ ಖಾದ್ಯಪದಾರ್ಥಗಳಿಂದ ಇಂಧನದವರೆಗೆ ಪ್ರತಿಯೊಂದು ವಸ್ತುವಿನ ಬೆಲೆಯು ಅಪಾರ ಪ್ರಮಾಣದಲ್ಲಿ ಹೆಚ್ಚಿದೆ. ರಷ್ಯಾದಲ್ಲಿ ಮುಂಬರುವ ಕಾಲದಲ್ಲಿ ನಿರುದ್ಯೋಗವು ಹೆಚ್ಚಲಿದ್ದು ಶೀಘ್ರವೇ ಮಾರುಕಟ್ಟೆಯಲ್ಲಿರುವ ಸರಕು ಖಾಲಿಯಾಗಲಿದೆ. ಇದರಿಂದಾಗಿ ರಷ್ಯಾದ ಜನರು ಅತ್ಯಂತ ಆವಶ್ಯಕ ವಸ್ತುಗಳ ಖರೀದಿಗಾಗಿ ಓಡಾಟ ಮಾಡುತ್ತಿದ್ದಾರೆ.

೩. ರಷ್ಯಾವು ಈ ಆರ್ಥಿಕ ಸಂಕಟವನ್ನು ಎದುರಿಸಲು ಉಪಾಯವನ್ನು ಹುಡುಕುತ್ತಿರುವಾಗ ದೇಶದಲ್ಲಿ ನಾಗರೀಕರಿಗೆ ವಿದೇಶಿ ಹಣ ಕಳಿಸಲು ನಿರ್ಬಂಧ ಹೇರಿದೆ. ರಫ್ತುದಾರರಿಗೆ ತಮ್ಮ ಆದಾಯದ ಶೇ. ೮೦ರಷ್ಟನ್ನು ರೂಬಲಿನಲ್ಲಿ ಬದಲಾಯಿಸಲು ಆದೇಶಿಸಲಾಗಿದೆ. ಅವಧಿಕ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.೯.೫ ರಿಂದ ಶೇ. ೨೦ ಮಾಡಲಾಗಿದೆ.