ತಕ್ಷಣವೇ ಕೀವ್ ಅನ್ನು ತೊರೆಯಿರಿ ! – ರಾಯಭಾರ ಕಚೇರಿಯಿಂದ ಭಾರತಿಯರಿಗೆ ಸೂಚನೆ

ಕೀವ್ (ಉಕ್ರೇನ್) – ಮಾರ್ಚ್ ೧ ರಂದು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ವಾಹನಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ತಕ್ಷಣವೇ ಕೀವ್ ನಿಂದ ಹೊರಡುವಂತೆ ಸೂಚಿಸಿದೆ. ರಷ್ಯಾದ ಸೇನೆಯು ಕೀವ್ ಕಡೆಗೆ ವೇಗವಾಗಿ ಮುನ್ನಡೆಯುತ್ತಿರುವುದರಿಂದ ಈ ಸಲಹೆಯನ್ನು ನೀಡಲಾಗಿದೆ.

೮೦೦೦ ಭಾರತಿಯರು ಉಕ್ರೇನ್ ತೊರೆದಿದ್ದಾರೆ !

ಇದುವರೆಗೆ ೮೦೦೦ ಭಾರತಿಯರು ಉಕ್ರೇನ್ ನಿಂದ ಹೊರ ನಡೆದಿದ್ದಾರೆ. ಇವರಲ್ಲಿ ೧ ಸಾವಿರದ ೩೯೬ ನಾಗರಿಕರನ್ನು ವಿಮಾನದ ಮೂಲಕ ಸ್ವದೇಶಕ್ಕೆ ಕಳುಹಿಸಲಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ, ಉಕ್ರೇನಿಯನ್ನರು ಸೇರಿದಂತೆ ವಿವಿಧ ದೇಶದ ೫ ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಹೊರಬಂದಿದ್ದು ಅವರು ನೆರೆಯ ಪೋಲೆಂಡ್, ರೂಮಾನಿಯಾ ಇತ್ಯಾದಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಕ್ರೇನ್‌ನ ನೆರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ !

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಯರನ್ನು ಸ್ವದೇಶಕ್ಕೆ ಕರೆತರಲು ಈಗ ಭಾರತಿಯ ವಾಯುದಳದ ಎಲ್ಲಕ್ಕಿಂದ ದೊಡ್ಡದಾಗಿರುವ ‘ಗ್ಲೋಬಮಾಸ್ಟರ’ ವಿಮಾನ ಹೋಗಲಿದೆ. ಮಾರ್ಚ ೨೮ ರ ರಾತ್ರಿ ಪ್ರಧಾನಿ ಮೋದಿ ಇವರು ವಿದ್ಯಾರ್ಥಿಗಳ ಬಗ್ಗೆ ನಡೆಸಿದ್ದ ಸಚಿವರೊಂದಿಗಿನ ಸಭೆಯ ನಂತರ ಈ ವಿಮಾನ ಕಳುಹಿಸಲು ನಿರ್ಧರಿಸಲಾಯಿತು. ಈ ಸಭೆಯ ನಂತರ ಪ್ರಧಾನಿ ಮೋದಿಯವರು ಉಕ್ರೇನ್‌ನಿಂದ ಭಾರತಿಯರನ್ನು ಹೊರಗೆ ಬರಲು ಬರಲು ಸಹಾಯ ಮಾಡಿ ಅವರಿಗೆ ಆಶ್ರಯ ನೀಡಿದ್ದ ಉಕ್ರೆನ್ ನ ನೆರೆಯ ದೇಶದ ಪ್ರಧಾನಿಗಳೊಂದಿಗೆ ದೂರವಾಣಿಯ ಮೂಲಕ ಚರ್ಚೆ ಮಾಡಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಉಕ್ರೆನ್‌ನಿಂದ ಭಾರತಿಯರನ್ನು ಸ್ವದೇಶಕ್ಕೆ ಕರೆತರಲು ರುಮಾನಿಯಾದಿಂದ ಮಾಡಲಾಗುತ್ತಿದ್ದ ಸಹಾಯಕ್ಕಾಗಿ ಪ್ರಧಾನಿ ಮೋದಿಯವರು ರೂಮಾನಿಯಾದ ಪ್ರಧಾನಿ ನಿಕೋಲ್- ಇಯೋನೆಲ್ ಸಿಉಕಾ ಮತ್ತು ಸ್ಲೋವ್ಹಾಕಿಯಾದ ಪ್ರಧಾನಿ ಎಡ್ವರ್ಡ್ ಹಿಜರ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು.

ಅಂತರಾಷ್ಟ್ರೀಯ ಫುಟಬಾಲನಿಂದ ರಷ್ಯಾ ತಂಡ ಅಮಾನತ್ತು ! – ‘ಫಿಫಾ’ದ ನಿರ್ಧಾರ

ಉಕ್ರೇನ್‌ನ ಮೇಲಿನ ರಷ್ಯಾದ ದಾಳಿಯು ಅಂತರಾಷ್ಟ್ರೀಯ ಫುಟಬಾಲ್ ಅಸೋಸಿಯೇಷನ್ ‘ಫಿಫಾ’ ಮತ್ತು ಯುರೋಪಿಯನ್ ಫುಟ್ ಬಾಲ್ ಸಂಸ್ಥೆ ‘ಯುಯಿಫಾ’ವು ರಷ್ಯಾದ ರಾಷ್ಟ್ರೀಯ ಸಂಘ ಹಾಗೂ ಕ್ಲಬ್‌ನನ್ನು ಅಂತರಾಷ್ಟ್ರೀಯ ಫುಟ್‌ಬಾಲ್ ನಿಂದ ಮುಂದಿನ ಸೂಚನೆ ಬರುವವರೆಗೆ ಅಮಾನತ್ತುಗೊಳಿಸಿದೆ. ಈ ನಿರ್ಧಾರದಿಂದ ಈ ವರ್ಷ ವಿಶ್ವಕಪ್ ಮತ್ತು ಮಹಿಳಾ ಯುರೋ ಸ್ಪರ್ದೆಗಳಿಂದ ರಷ್ಯಾವನ್ನು ಹೊರಗಿಡುವ ಸಾಧ್ಯತೆ ಇದೆ.