ರಷ್ಯಾದ ದಾಳಿಯಲ್ಲಿ ಜಗತ್ತಿನ ಅತಿದೊಡ್ಡ ಸರಕು ವಾಹಕ ವಿಮಾನ ಸುಟ್ಟು ಭಸ್ಮ !

ಕೀವ (ಯುಕ್ರೇನ) – ರಷ್ಯಾದ ದಾಳಿಯಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಸರಕು ವಾಹಕ ವಿಮಾನ ಸುಟ್ಟು ಭಸ್ಮವಾಗಿದೆ. ಯುಕ್ರೇನನ ‘ಆಟೊನೋವ -೨೨೫ ಮ್ರಿಯಾ’ ಇದು ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಸರಕು ವಾಹಕ ವಿಮಾನವಾಗಿದೆ. ಈ ವಿಮಾನವನ್ನು ಯುಕ್ರೇನನ ರಾಜಧಾನಿ ಕೀವ ಸನಿಹದಲ್ಲಿರುವ ಹೊಸ್ತೊಮೀಲ ವಿಮಾನನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿ ರಷ್ಯಾವು ವೈಮಾನಿಕ ದಾಳಿ ನಡೆಸಿ ಆ ವಿಮಾನವನ್ನು ನಾಶ ಮಾಡಿದೆ.

ಈ ವಿಮಾನವು ಸುಮಾರು ೮೪ ಮೀಟರ ಉದ್ದ ಹಾಗೂ ೧೮ ಮೀಟರ ಎತ್ತರವಾಗಿದೆ. ಅದರ ಒಳಗೆ ನಾನಾಭಗೆಯ ಸರಕುಗಳನ್ನು ಇಡಲು ಸುಮಾರು ೪೩ ಮೀಟರ ಉದ್ದ, ೬.೪ ಮೀಟರ ಅಗಲ ಹಾಗೂ ೪.೪ ಮೀಟ ಎತ್ತರ ಇಷ್ಟು ದೊಡ್ಡ ಜಾಗ ಇತ್ತು. ೨೫೦ ಟನಗಿಂತ ಹೆಚ್ಚು ತೂಕವಿರುವ ಸರಕುಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಆ ವಿಮಾನಕ್ಕಿತ್ತು. ಈ ವಿಮಾನವು ಸಪ್ಟೆಂಬರ ೨೦೦೧ ರಲ್ಲಿ ೪ ಯುದ್ಧನೌಕೆಗಳನ್ನು ತೆಗೆದುಕೊಂಡು ಆಕಾಶದಲ್ಲಿ ಹಾರಾಟ ನಡೆಸಿತ್ತು. ಅದರ ಒಟ್ಟು ತೂಕ ಸುಮಾರು ೨೫೩ ಟನನಷ್ಟಿತ್ತು. ಆ ವಿಮಾನವು ಅತಿಹೆಚ್ಚು ತೂಕವನ್ನು ತೆಗೆದುಕೊಂಡು ಹಾರಾಟ ನಡೆಸುವ ಇಲ್ಲಿಯವರೆಗಿನ ವಿಶ್ವ ದಾಖಲೆ ಮಾಡಿದೆ.