ಬೆಲಾರುಸ್ ರಷಿಯಾದ ಪಕ್ಷದಲ್ಲಿ ಯುದ್ಧ ಮಾಡುವುದು !

ಬೇಲಾರುಸದಲ್ಲಿ ರಷಿಯಾದ ಅಣ್ವಸ್ತ್ರ ನಿಯೋಜಿಸಲು ಅನುಮತಿ !

ಮಿನ್ಸ(ಬೆಲಾರುಸ್ ) – ರಷಿಯಾದ ಮಿತ್ರದೇಶ ಬೆಲಾರುಸ್ ಇದು ರಷಿಯಾಗೆ ತನ್ನ ದೇಶದಲ್ಲಿ ಅಣ್ವಸ್ತ್ರ ನಿಯೋಜನೆ ಮತ್ತು ಅಲ್ಲಿಂದ ಪ್ರಯೋಗಿಸಲು ಅನುಮತಿ ನೀಡಿದೆ. ಅದಕ್ಕಾಗಿ ಬೆಲಾರುಸ್ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದೆ.

೧. ಅಮೇರಿಕಾ ಈ ನಿರ್ಣಯ ಅಪಾಯಕಾರಿಯಾಗಿದೆ ಎಂದು ಹೇಳುತ್ತಾ ಅದನ್ನು ವಿರೋಧಿಸಿದೆ, ಹಾಗೂ ಚೀನಾ ಸಹ ಈ ನಿರ್ಣಯ ವಿರೋಧಿಸುವಂತೆ ಕರೆ ನೀಡಿದೆ. ಸಂಯುಕ್ತ ರಾಷ್ಟ್ರಗಳು ಈ ಕೃತಿಯನ್ನು ಬೇಜವಾಬ್ದಾರಿತನ ಎಂದು ಹೇಳುತ್ತಾ ಟೀಕಿಸಿದೆ.
೨. ಯುರೋಪಿಯನ್ ದೇಶ ಮತ್ತು ಅನ್ಯ ಕೆಲವು ದೇಶಗಳು ರಷಿಯಾದ ವಿಮಾನಗಳಿಗೆ ಅದರ ಆಕಾಶಮಾರ್ಗದ ಉಪಯೋಗ ನಿಷೇಧಿಸಿದೆ. ಹಾಗೂ ಜಪಾನ್ ಮತ್ತು ಯುರೋಪಿಯನ್ ಯೂನಿಯನ್ ವ್ಯಾಪಾರ ವ್ಯವಹಾರದ ಸ್ವಿಫ್ಟ್ ಪ್ರಣಾಲಿ ಇಂದ ರಷಿಯನ್ ಬ್ಯಾಂಕುಗಳನ್ನು ಹೊರ ಹಾಕಿರುವುದಾಗಿ ಘೋಷಿಸಿದೆ.

೩.ಬೆಲಾರುಸ್ ದ ರಾಷ್ಟ್ರಪತಿ ಅಲೆಗ್ಸಾಂಡರ್ ಲುಕಾಶೇಕೊ ಇವರು ಈ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಇದರಿಂದ ಮೂರನೇ ಮಹಾಯುದ್ಧ ನಡೆಯುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.