ಕೊಲಕಾತಾದಲ್ಲಿ ಧರ್ಮದ್ರೋಹಿ ಹಿಂದೂ ಚಿತ್ರಕಾರನಿಂದ ಹಿಜಾಬ್ ತೊಟ್ಟಿರುವ ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ದೇವಿಯ ಘೋರ ವಿಡಂಬನೆ !

ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.

ಪಾಟಲಿಪುತ್ರ (ಬಿಹಾರ)ದಲ್ಲಿ ಶಿಲ್ಪಿಯಿಂದ ಕ್ರಿಕೆಟ್ ಆಡುವ ಶ್ರೀ ಗಣೇಶನ ಮೂರ್ತಿಯ ನಿರ್ಮಾಣ

ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಹಿಂದೂಗಳೇ ಈ ರೀತಿ ವಿಡಂಬನೆ ಮಾಡುತ್ತಾರೆ ಮತ್ತು ಅದಕ್ಕೆ ಸರಕಾರದಿಂದ ಪ್ರಶಸ್ತಿ ನೀಡಲಾಗುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ !

ಸಾಮಾಜಿಕ ಜಾಲತಾಣದಲ್ಲಿ ಶ್ರೀಗಣೇಶನ ಹೆಸರಿನ ಪಾಸ ಪೋರ್ಟ್ ಪ್ರಸಾರ ಮಾಡಿ ಶ್ರೀಗಣೇಶನ ವಿಡಂಬನೆ !

‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಶ್ರೀಗಣೇಶನ ಆಗಮನ ಆಗಲಿದೆ’, ಎಂಬ ಸಂಕಲ್ಪನೆಯನ್ನು ಇಟ್ಟುಕೊಂಡು ಶ್ರೀಗಣೇಶನ ಚಿತ್ರ ಇರುವ ಪಾಸ್ ಪೋರ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀಗಣೇಶ ದೇವರನ್ನು ಅಪಮಾನಿಸುತ್ತಿರುವ ಘಟನೆಯು ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲಿ ಜಾಹೀರಾತಿನ ಮೂಲಕ ಹಿಂದೂ ಸಾಧುಗಳ ಅಶ್ಲೀಲ ವಿಡಂಬನೆಯನ್ನು ಮಾಡಿದ ಮತಾಂಧರ ಒಡೆತನದ `ನಿಯಾಜ್ ಹೋಟೆಲ್’!

ಮತಾಂಧರಿಗೆ ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ?

ಹಿಂದೂ ಜನಜಾಗೃತಿ ಸಮಿತಿಯ ಪ್ರಬೋಧನೆ, ಶ್ರೀ ಹನುಮಂತನ ವಿಡಂಬನೆಗೆ ತಡೆ

ಸ್ಥಳೀಯ ಎಸ್.ಆರ್.ಜೆ. ಎಂಬ ಹೆಸರಿನ ಖಾಸಗಿ ಸಂಸ್ಥೆಯು ಉಪ್ಪಿನ ಪೊಟ್ಟಣದ ಮೇಲೆ ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುತ್ತಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದಾಗ ‘ಇದರಿಂದ ದೇವತೆಗಳ ಅವಮಾನ ಹೇಗಾಗುತ್ತಿದೆ?’, ಎಂಬುವುದರ ಬಗ್ಗೆ ಪ್ರಬೋಧನೆ ಮಾಡಿದ ನಂತರ ಅವರು ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುವುದನ್ನು ನಿಲ್ಲಿಸಲು ಒಪ್ಪಿದರು.

‘ನೆಟ್‌ಫ್ಲಿಕ್ಸ್’ನಲ್ಲಿ ಪ್ರಸಾರವಾಗುವ ‘ಲುಡೋ’ ಚಲನಚಿತ್ರದಲ್ಲಿಯೂ ಹಿಂದೂ ದೇವತೆಗಳ ವಿಡಂಬನೆ !

ಎ ಸೂಟಬಲ್ ಬಾಯ್’ ಎಂಬ ವೆಬ್ ಸರಣಿಯು ಮುಸ್ಲಿಂ ಹುಡುಗನೊಬ್ಬ ದೇವಾಲಯದ ಆವರಣದಲ್ಲಿ ಹಿಂದೂ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಚಿತ್ರಿಸಿದರೆ, ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ‘ಲುಡೋ’ ಚಲನಚಿತ್ರವು ಹಿಂದೂ ದೇವತೆಗಳನ್ನು ಬಹುರೂಪಿಗಳ (ಛದ್ಮವೇಷ ಧರಿಸುವವರ) ಹಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೆಮೊಕ್ರಟಿಕ್ ಪಕ್ಷದಿಂದ ಶ್ರೀ ದುರ್ಗಾದೇವಿಯ ವಿಡಂಬನೆ

ಮುಂದಿನ ತಿಂಗಳು ನಡೆಯಲಿರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಪಕ್ಷದ ಜೋ ಬಿಡನ್ ಸ್ಪರ್ಧಿಸಲಿದ್ದಾರೆ. ಭಾರತೀಯ ಮೂಲದ ಮಹಿಳೆಯ ಮಗಳು ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯಾಗಿದ್ದಾರೆ. ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಗಣೇಶೋತ್ಸವದ ಕಾಲಾವಧಿಯಲ್ಲಿ ವಿವಿಧ ಮಾಧ್ಯಮಗಳಿಂದ ಆಗುತ್ತಿರುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ದೊರೆತ ಯಶಸ್ಸು

ಗಣೇಶೋತ್ಸವದ ಕಾಲದಲ್ಲಿ ವಿವಿಧ ಮಾಧ್ಯಮಗಳಿಂದಾಗುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು ಸಿಕ್ಕಿದೆ. ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ , ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರು ಚಿತ್ರಗಳ ಮಾಧ್ಯಮದಿಂದ ಮಾಡಿದ ಶ್ರೀ ಗಣೇಶನ ವಿಡಂಬನೆಯನ್ನು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿ ತಡೆಗಟ್ಟಿದರು.

ಮ್ಯಾಕಡೊನಾಲ್ಡ್‌ನಿಂದ ಆಗುತ್ತಿದ್ದ ಶ್ರೀ ಗಣೇಶನ ವಿಡಂಬನೆಯ ವಿರುದ್ಧ ಧರ್ಮಾಭಿಮಾನಿಗಳಿಂದ ಪತ್ರ

ಮ್ಯಾಕಡೊನಾಲ್ಡ್ ಸಂಸ್ಥೆಯಿಂದ ‘ಫ್ರೆಂಚ್ ಫ್ರೈಜ’ ಈ ಆಹಾರ ಪದಾರ್ಥದ ಉತ್ಪಾದನೆಯ ಜಾಹೀರಾತಿನಲ್ಲಿ ಫ್ರೆಂಚ್ ಫ್ರೈಜನಿಂದ ಶ್ರೀ ಗಣೇಶನ ಕೇವಲ ಸೊಂಡಿಲಿನ ಆಕಾರ ಮಾಡಿದ್ದರು ಮತ್ತು ಸೊಂಡಿಲಿನ ಕೊನೇಯ ಭಾಗದಲ್ಲಿ ಸಾಸ್‌ನ ಬಟ್ಟಲು ಇಡಲಾಗಿತ್ತು. ಇನ್ನೊಂದು ಚಿತ್ರದಲ್ಲಿ ಫ್ರೆಂಚ ಫ್ರೈಜನಿಂದ ಶ್ರೀ ಗಣೇಶನ ಚಿತ್ರ ಬಿಡಿಸಿ ಸಮಸ್ತ ಹಿಂದೂ ಭಕ್ತರ ಭಾವನೆಯನ್ನು ನೋಯಿಸಲಾಗಿದೆ.

ಚಿತಗಾಂವ (ಬಾಂಗ್ಲಾದೇಶ) ನಲ್ಲಿಯ ಹಿಂದೂಗಳ ದೇವಾಲಯದಲ್ಲಿ ಗೋಮಾಂಸವನ್ನು ಎಸೆದು ವಿಡಂಬನೆ !

ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು.