ಹಿಂದೂಗಳೇ, ಈ ಯಶಸ್ಸಿಗೆ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿರಿ. ಸಮಸ್ತ ಹಿಂದೂಗಳು ಇದೇ ರೀತಿ ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿದರೆ ಸಮಾಜದಲ್ಲಾಗುವ ಧರ್ಮಹಾನಿಯನ್ನು ಸಹಜವಾಗಿ ತಡೆಗಟ್ಟಬಹುದು !
ಮುಂಬಯಿ – ಗಣೇಶೋತ್ಸವದ ಕಾಲದಲ್ಲಿ ವಿವಿಧ ಮಾಧ್ಯಮಗಳಿಂದಾಗುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು ಸಿಕ್ಕಿದೆ. ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ , ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರು ಚಿತ್ರಗಳ ಮಾಧ್ಯಮದಿಂದ ಮಾಡಿದ ಶ್ರೀ ಗಣೇಶನ ವಿಡಂಬನೆಯನ್ನು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿ ತಡೆಗಟ್ಟಿದರು.
ಇತ್ತೀಚೆಗೆ ಜರುಗಿದ ಗಣೇಶೋತ್ಸವದಲ್ಲಿ ಅನೇಕ ಸಂಸ್ಥೆಗಳು ತಮ್ಮ ಆರ್ಥಿಕ ಲಾಭದ ಸ್ವಾರ್ಥಕ್ಕಾಗಿ ಚಿತ್ರಗಳ ಮಾಧ್ಯಮದಿಂದ ಶ್ರೀ ಗಣೇಶನ ವಿಡಂಬನೆಯನ್ನು ಮಾಡಿ ಗಣೇಶನ ಘೋರ ಅವಮಾನವನ್ನು ಮಾಡಿದರು. ಈ ವರ್ಷವೂ ಕೂಡಾ ಕೆಲವು ಧರ್ಮಪ್ರೇಮಿಗಳು ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯವರ ಗಮನಕ್ಕೆ ತಂದುಕೊಟ್ಟರು. ಇದಕ್ಕೆ ಸಮಿತಿಯು ತನ್ನ ಜಾಲತಾಣ ಹಾಗೂ ಸಾಮಾಜಿಕ ಪ್ರಸಾರ ಮಾಧ್ಯಮಗಳಿಂದ ಹಿಂದೂಗಳಿಗೆ ಇದನ್ನು ಕಾನೂನು ಮಾರ್ಗದಿಂದ ವಿರೋಧಿಸಲು ಕರೆ ನೀಡಿತ್ತು. ಪರಿಣಾಮ ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ಡ್ ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರಿಗೆ ಶ್ರೀ ಗಣೇಶನ ವಿಡಂಬನಾತ್ಮಕ ಚಿತ್ರವನ್ನು ತೆಗೆಯಬೇಕಾಯಿತು.
ಸಮಿತಿಗೆ ದೊರೆತ ಯಶಸ್ಸು
೧. ಫ್ಲಿಪ್‌ಕಾರ್ಟ್
‘ಈ-ಕಾಮರ್ಸ್’ ಜಾಲತಾಣವಾಗಿರುವ ಫ್ಲಿಪ್‌ಕಾರ್ಟ್ ಗಣೇಶೋತ್ಸವದ ನಿಮಿತ್ತ ಸಂಚಾರವಾಣಿಯ ಆಪ್‌ನಲ್ಲಿ ಫೆಡರಲ್ ಬ್ಯಾಂಕಿನ ವಿನಾಯತಿಯನ್ನು ನೀಡುವ ಜಾಹಿರಾತನ್ನು ಮಾಡುವಾಗ ಶ್ರೀ ಗಣೇಶನು ತನ್ನ ಸೊಂಡಲಿನಲ್ಲಿ ಸಂಚಾರವಾಣಿಯನ್ನು ಹಿಡಿದಿರುವಂತೆ ಚಿತ್ರವನ್ನು ತೋರಿಸಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯು ‘ಟ್ವಿಟರ್’ನ ಮೂಲಕ ಮಾಡಿದ ವಿರೋಧದಿಂದಾಗಿ ಕೆಲವೇ ಗಂಟೆಗಳಲ್ಲಿ ಆ ಚಿತ್ರವನ್ನು ತೆಗೆಯಲಾಯಿತು.
೨. ಮ್ಯಾಕ್‌ಡೊನಾಲ್ಡ್
ಮ್ಯಾಕ್‌ಡೊನಾಲ್ಡ್ ತನ್ನ ‘ಫ್ರೆಂಚ್ ಫ್ರೈಸ್’ ಈ ಆಹಾರವನ್ನು ಶ್ರೀ ಗಣೇಶನ ರೂಪದಲ್ಲಿ ತೋರಿಸುವಂತಹ ಚಿತ್ರವನ್ನು ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಮೂಲಕ ಪೋಸ್ಟ್ ಮಾಡಿದ್ದರು. ಹಿಂದೂಗಳು ಮಾಡಿದ ವಿರೋಧದ ನಂತರ ಮ್ಯಾಕ್‌ಡೊನಾಲ್ಡ್ ಈ ಎರಡೂ ಪೋಸ್ಟ್‌ಗಳನ್ನು ತೆಗೆದರು.
೩. ಮಧ್ಯಪ್ರದೇಶ ಸೈಬರ್ ಪೊಲೀಸ್
ಮಧ್ಯಪ್ರದೇಶದ ಸೈಬರ್ ಪೊಲೀಸರು ಚಿತ್ರದಲ್ಲಿ ಶ್ರೀ ಗಣೇಶನನ್ನು ಮಾನವೀಕರಣ ಮಾಡಿ ಮುಖದ ಮೇಲೆ ಗೌಪ್ಯ ಮಾಹಿತಿಯ ಬಗ್ಗೆ ತಿಳುವಳಿಕೆ ನೀಡುವ ವಾಕ್ಯವನ್ನು ಬರೆದಿರುವುದನ್ನು ತೋರಿಸಲಾಗಿತ್ತು. ಇದಕ್ಕೆ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಇತರ ಧರ್ಮಪ್ರೇಮಿಗಳು ಟ್ವಿಟರ್ ಮೂಲಕ ವಿರೋಧಿಸುತ್ತಾ ಈ ಚಿತ್ರವನ್ನು ತೆಗೆಯುವಂತೆ ಆಗ್ರಹಿಸಿದರು. ನಂತರ ಪೊಲೀಸರು ಈ ಟ್ವೀಟ್‌ಅನ್ನು ಅಳಿಸಿ(ಡಿಲೀಟ) ಹಾಕಿದರು.