|
ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಶ್ರೀ ಗಣೇಶನ ಯಾವರೀತಿ ವಿಡಂಬನೆ ಮಾಡಿದ್ದಾರೆ, ಎಂಬುದನ್ನು ತಿಳಿಸಲು ಪ್ರಕಾಶಿಸಿದ್ದೇವೆ.
ನ್ಯೂಯಾರ್ಕ್ – ಮುಂದಿನ ತಿಂಗಳು ನಡೆಯಲಿರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಪಕ್ಷದ ಜೋ ಬಿಡನ್ ಸ್ಪರ್ಧಿಸಲಿದ್ದಾರೆ. ಭಾರತೀಯ ಮೂಲದ ಮಹಿಳೆಯ ಮಗಳು ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯಾಗಿದ್ದಾರೆ. ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆ ಮಾಡಿದರೇ ಗೆಲುವು ಸಾಧಿಸಿದ ಅಭ್ಯರ್ಥಿಯ ಉಮೇದ್ವಾರಿಕೆಯು ರದ್ದಾಗಬಹುದು. ಅಮೇರಿಕಾದಲ್ಲಿ ಮಾತ್ರ ಚುನಾವಣಾ ಪ್ರಚಾರವು ಯಾವುದೇ ಸ್ತರಕ್ಕೆ ಹೋಗಬಲ್ಲದು. ಇದಕ್ಕೆ ಉದಾಹರಣೆಯೆಂದರೆ ಇಲ್ಲಿಯ ‘ಗ್ಲೋಬಲ್ ಹಿಂದೂ ನೆಟ್‌ವರ್ಕ್’ ಈ ಸಂಘಟನೆಯು ಶ್ರೀ ದುರ್ಗಾ ದೇವಿಯ ವಿಡಂಬನಾತ್ಮಕ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ಅದರಲ್ಲಿ ಶ್ರೀ ದುರ್ಗಾದೇವಿಯ ಮುಖವಿರುವಲ್ಲಿ ಕಮಲಾ ಹ್ಯಾರಿಸ್ ಅವರ ಚಿತ್ರವಿದೆ. ಜೋ ಬಿಡನ್ ಅವರ ಮುಖವನ್ನು ದೇವಿಯ ವಾಹನವಾದ ಸಿಂಹದ ಮುಖವಿರುವಲ್ಲಿ ತೋರಿಸಿ ಹಾಗೂ ದೇವಿಯು ಸಂಹರಿಸುತ್ತಿರುವ ರಾಕ್ಷಸನ ಮುಖವಿರುವಲ್ಲಿ ಡೊನಾಲ್ಡ್ ಟ್ರಂಪ್ ಎಂದು ಚಿತ್ರಿಸಲಾಗಿದೆ. ಅಂದರೆ ಕಮಲಾ ಹ್ಯಾರಿಸ್‌ನನ್ನು ಶ್ರೀ ದುರ್ಗಾದೇವಿ, ಜೋ ಬಿಡನ್ ಸಿಂಹ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಮಹಿಷಾಸುರ ಎಂಬಂತೆ ಚಿತ್ರಿಸಲಾಗಿದೆ.
ಈ ರೀತಿಯಾಗಿ ಚುನಾವಣೆಯಲ್ಲಿ ಹಿಂದೂ ಧರ್ಮದ ದೇವರನ್ನು ನವರಾತ್ರಿಯ ಸಮಯದಲ್ಲಿಯೇ ವಿಡಂಬನೆ ಮಾಡಿದ್ದರಿಂದ ಅಮೇರಿಕದ ಹಿಂದೂಗಳು ಆಕ್ರೋಶಗೊಂಡಿದ್ದಾರೆ. ಅವರು ಚುನಾವಣಾ ಪ್ರಚಾರದಲ್ಲಿರುವ ಸಂಘಟನೆಯಾದ ‘ಗ್ಲೋಬಲ್ ಹಿಂದೂ ನೆಟ್‌ವರ್ಕ್’ಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿ ನಿಷೇಧವನ್ನು ನೊಂದಾಯಿಸಿದ್ದಾರೆ.