ಮುಂಬಯಿ – ಮ್ಯಾಕಡೊನಾಲ್ಡ್ ಸಂಸ್ಥೆಯಿಂದ ‘ಫ್ರೆಂಚ್ ಫ್ರೈಜ’ ಈ ಆಹಾರ ಪದಾರ್ಥದ ಉತ್ಪಾದನೆಯ ಜಾಹೀರಾತಿನಲ್ಲಿ ಫ್ರೆಂಚ್ ಫ್ರೈಜನಿಂದ ಶ್ರೀ ಗಣೇಶನ ಕೇವಲ ಸೊಂಡಿಲಿನ ಆಕಾರ ಮಾಡಿದ್ದರು ಮತ್ತು ಸೊಂಡಿಲಿನ ಕೊನೇಯ ಭಾಗದಲ್ಲಿ ಸಾಸ್‌ನ ಬಟ್ಟಲು ಇಡಲಾಗಿತ್ತು. ಇನ್ನೊಂದು ಚಿತ್ರದಲ್ಲಿ ಫ್ರೆಂಚ ಫ್ರೈಜನಿಂದ ಶ್ರೀ ಗಣೇಶನ ಚಿತ್ರ ಬಿಡಿಸಿ ಸಮಸ್ತ ಹಿಂದೂ ಭಕ್ತರ ಭಾವನೆಯನ್ನು ನೋಯಿಸಲಾಗಿದೆ. ಇದನ್ನು ಖಂಡಿಸಿದ ಧರ್ಮಾಭಿಮಾನಿ ಶ್ರೀ. ಗಿರೀಶ ಢವಳಿಕರ ಇವರು ಮ್ಯಾಕಡೊನಾಲ್ಡ್ ಸಂಸ್ಥೆಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡರು ಹಾಗೂ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಶ್ರೀ. ಢವಳಿಕರ ಇವರು ಪತ್ರದಲ್ಲಿ, ತಮ್ಮಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಇಲ್ಲಿ ವ್ಯವಸಾಯ ಮಾಡಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುತ್ತವೆ; ಆದರೆ ಉದ್ದೇಶ ಪೂರ್ವಕವಾಗಿ ಹಿಂದೂಗಳ ದೇವತೆಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುತ್ತವೆ. ನಿಮ್ಮ ಜಾಹೀರಾತನ್ನು ಸಿದ್ಧಪಡಿಸುವ ಗುಂಪು ಇತರ ಧರ್ಮದವರ ಬಗ್ಗೆ ಈ ರೀತಿಯಲ್ಲಿ ವರ್ತಿಸುವುದಿಲ್ಲ, ಅದರ ಕಾರಣವೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಮ್ಯಾಕಡೊನಾಲ್ಡ್ ಶೀಘ್ರದಲ್ಲೇ ಎಲ್ಲೆಡೆಯಿಂದ ಈ ಮೇಲಿನ ಜಾಹೀರಾತನ್ನು ತೆಗೆದುಹಾಕಬೇಕು ಹಾಗೂ ಕ್ಷಮೆ ಯಾಚನೆ ಮಾಡಬೇಕು, ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.